Advertisement

ಕಷ್ಟದಲ್ಲಿರುವವರ ನೋವಿಗೆ ಸ್ಪಂದನೆ ಅಗತ್ಯ: ಶಾಸಕ ಲಾಲಾಜಿ 

06:45 AM Aug 23, 2018 | |

ಕಾಪು: ನಮ್ಮ ನೆರೆಯ ಜಿಲ್ಲೆ ಮತ್ತು ನೆರೆ ರಾಜ್ಯಗಳ ಸಂತ್ರಸ್ತ ಜನರ ನೋವಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ಮೂಲಕ ಮಾನವೀಯ ಮೌಲ್ಯದ ಪ್ರತಿಪಾದನೆ ನಡೆಸಲು ನಾವು ಕೂಡಾ ಎಲ್ಲರಿಗೂ ಪ್ರೇರಣೆ ನೀಡಿದಂತಾಗುತ್ತದೆ ಎಂದು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

Advertisement

ಬೆಳಪು ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ಜರಗಿದ ಗ್ರಾಮಸಭೆಯಲ್ಲಿ ಕೊಡಗು – ಕೇರಳ ಸಂತ್ರಸ್ತರಿಗೆ ಆರ್ಥಿಕ ಧನ ಸಂಗ್ರಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಸಂಘ – ಸಂಸ್ಥೆಗಳು, ಸ್ಥಳೀಯಾಡಳಿತ ಸಂಸ್ಥೆಗಳು ಜನರ ನೋವಿಗೆ ಸ್ಪಂದಿಸಿ ಎಲ್ಲೆಡೆ ದೇಣಿಗೆ ಮತ್ತು ಅಗತ್ಯ ವಸ್ತುಗಳ ಸಂಗ್ರಹಣೆ ನಡೆಯುತ್ತಿದೆ. ಅದನ್ನು ಯಾವುದೇ ರೀತಿಯ ಅಸ್ತವ್ಯಸ್ತತೆ ಇಲ್ಲದೇ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬೆಳಪು ಗ್ರಾಮ ಪಂಚಾಯತ್‌ ಅಧ್ಯಕ್ಷ ಡಾ| ದೇವಿಪ್ರಸಾದ್‌ ಶೆಟ್ಟಿ ಅವರ ನೇತೃತ್ವದಲ್ಲಿ ಬೆಳಪು ಗ್ರಾಮ ಪಂಚಾಯತ್‌ ಕಚೆೇರಿಯಿಂದ ಪ್ರಾರಂಭಿಸಿ, ಗ್ರಾಮಾದ್ಯಂತ ಪರಿಹಾರ ನಿಧಿಗೆ ದೇಣಿಗೆ ಸಂಗ್ರಹಿಸಲಾಯಿತು. ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಸಂತಾಪ ಸಲ್ಲಿಸಲಾಯಿತು.

ಉಡುಪಿ ಜಿ.ಪಂ. ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾ.ಪಂ. ಸದಸ್ಯ ಯು.ಸಿ. ಶೇಕಬ್ಬ, ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ| ದಯಾನಂದ ಪೈ, ಸಹಾಯಕ ಕೃಷಿ ಅಧಿಕಾರಿ ಶೇಖರ್‌ ಪಿ., ಗಾಮ ಲೆಕ್ಕಿಗ ಗಣೇಶ್‌ ಮೇಸ್ತ, ತೋಟಗಾರಿಕಾ ಸಹಾಯಕಿ ಶ್ವೇತಾ ಹಿರೇಮs…, ಸಮಾಜ ಕಲ್ಯಾಣ ಇಲಾಖೆಯ ಬಸವರಾಜ್‌, ಸಿ.ಡಿ.ಪಿ.ಒ ಮೋಹಿನಿ ಗೌಡ, ವೈದ್ಯಾಧಿಕಾರಿ ಡಾ. ವೀಣಾ ನಾಯಕ್‌, ಡಾ. ಸಂತೋಷ್‌ ಕುಮಾರ್‌, ಭ್ರಷ್ಟಾಚಾರ ನಿಗ್ರಹದಳದ ಡಿವೈಎಸ್ಪಿ ದಿನಕರ ಶೆಟ್ಟಿ, ಗ್ರಾಪಂ. ಉಪಾಧ್ಯಕ್ಷೆ ಶೋಭಾ ಭಟ್‌, ಪಿ.ಡಿ.ಒ. ಎಚ್‌.ಆರ್‌. ರಮೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next