Advertisement

ಗ್ರಂಥಾಲಯ ಸ್ಥಳಾಂತರ ಬೇಡ

03:28 PM Jul 07, 2022 | Shwetha M |

ಮುದ್ದೇಬಿಹಾಳ: ಪಟ್ಟಣದ ಆಲಮಟ್ಟಿ ರಸ್ತೆಯ ಸಗರಿಯವರ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಗ್ರಂಥಾಲಯವನ್ನು ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು, ಓದುಗರು ಜಿಲ್ಲಾಧಿಕಾರಿಗೆ ಬರೆದ ಮನವಿಯನ್ನು ಗ್ರೇಡ್‌ -2 ತಹಶೀಲ್ದಾರ್‌ ಡಿ.ಜಿ.ಕಳ್ಳಿಮನಿ ಅವರಿಗೆ ಸಲ್ಲಿಸಿದರು.

Advertisement

ಈಚೆಗೆ ಕೆಲವರು ಜಿಲ್ಲಾಧಿಕಾರಿಯವರ ಮುದ್ದೇಬಿಹಾಳ ಭೇಟಿ ವೇಳೆ ಮನವಿ ಸಲ್ಲಿಸಿ ಈಗಿನ ಗ್ರಂಥಾಲಯ ಸ್ಥಳಾಂತರಿಸಬೇಕು ಮತ್ತು ಗ್ರಂಥಾಲಯಕ್ಕೆ ಹೊಸ ಕಟ್ಟಡ ಒದಗಿಸಬೇಕು ಎಂದು ಆಗ್ರಹಿಸಿದ್ದ ಹಿನ್ನೆಲೆ ಈ ಮನವಿ ಸಲ್ಲಿಸಿದ ಅವರು, ಈಗ ಇರುವ ಗ್ರಂಥಾಲಯ ಸುಸಜ್ಜಿತವಾಗಿದೆ. ಈಗಿರುವ ಗ್ರಂಥಾಲಯ ಮಾರ್ಗದಿಂದಲೇ ಅಂದಾಜು 3000 ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗಿ ಬರುವುದರಿಂದ ಇದು ಅವರಿಗೆ ಹೆಚ್ಚು ಅನುಕೂಲ ಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರಸ್ತುತ ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಗ್ರಂಥಾಲಯವು ಸುಸಜ್ಜಿತವಾದ ಕಟ್ಟಡ ಹೊಂದಿದ್ದು ಗಾಳಿ, ಬೆಳಕು, ಕುಡಿಯುವ ನೀರು, ಪಾರ್ಕಿಂಗ್‌ ವ್ಯವಸ್ಥೆ ಸೌಲಭ್ಯ ಹೊಂದಿ ಪ್ರಶಾಂತ ಪರಿಸರದಲ್ಲಿದೆ. ಇಲ್ಲಿ ಓದಿದವರು ಕೆಎಎಸ್‌ ಪಾಸ್‌ ಮಾಡಿದ್ದಾರೆ. ಪಿಎಚ್‌ಡಿ ಪದವಿ ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಬೋಧಕರಾಗಿ, ಸರ್ಕಾರಿ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಮೊನ್ನೆ ಮುದ್ದೇಬಿಹಾಳಕ್ಕೆ ಬಂದಾಗ ಕೆಲವರು ಈಗಿನ ಗ್ರಂಥಾಲಯ ಸ್ಥಳಾಂತರ ಕೋರಿ ಸಲ್ಲಿಸಿದ ಅರ್ಜಿಗೆ ಜಿಲ್ಲ ಧಿಕಾರಿಗಳು ಮಾನ್ಯತೆ ಕೊಡಬಾರದು. ಹೆಚ್ಚು ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಇದನ್ನು ಇದ್ದಲ್ಲಿಯೇ ಮುಂದುವರಿಸಿ ಅನುಕೂಲ ಮಾಡಿಕೊಡಬೇಕು. ವಾರ್ಷಿಕ 2 ಲಕ್ಷ ರೂ. ಬಾಡಿಗೆ ಸರ್ಕಾರಕ್ಕೆ ಹೊರೆಯಲ್ಲ ಎನ್ನುವುದನ್ನು ಮನಗಂಡು ಸ್ಥಳಾಂತರ ಬೇಡಿಕೆ ಕೈಬಿಡಬೇಕು. ಈಗಿರುವ ಗ್ರಂಥಾಲಯ ಈಗಿರುವಲ್ಲಿಯೇ ಕಾರ್ಯನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next