Advertisement

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

06:01 PM Apr 26, 2024 | Team Udayavani |

ಉದಯವಾಣಿ ಸಮಾಚಾರ
ಗಂಗಾವತಿ: ಕಳೆದ 10 ವರ್ಷಗಳಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈತರ ಸಾಲ ಮನ್ನಾ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ಪ್ರಧಾನಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿ ದೇಶದ ಜನರ ತೆರಿಗೆ ಹಣವನ್ನು ದುರ್ಬಳಕೆ
ಮಾಡಿದ್ದಾರೆ ಎಂದು ಸಿಪಿಐಎಂ ಪಕ್ಷದ ರಾಜ ಕಾರ್ಯದರ್ಶಿ ಎಸ್‌.ವರಲಕ್ಷ್ಮೀ ಹೇಳಿದರು.

Advertisement

ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಸಿಪಿಐಎಂ ಪಕ್ಷದ ರಾಜಕೀಯ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಯಲು ಬಿಜೆಪಿ ಸರ್ಕಾರವನ್ನು ಕಿತ್ತೂಗೆಯಬೇಕು. ಚುನಾವಣಾ ಬಾಂಡ್‌ ಮೂಲಕ ಕಾರ್ಪೊರೇಟ್‌ ಸಂಸ್ಥೆಗಳು ಮತ್ತು ಉದ್ಯಮಗಳಿಂದ 8,625 ಕೋಟಿ ರೂ.ಗಳನ್ನು ಪಡೆದು ಕಿಕ್‌ ಬ್ಯಾಕ್‌ ಪಡೆದಿದ್ದಾರೆ ಎಂದು ಆರೋಪಿಸಿದರು.

ಯಾರಿಗೂ ತಿನ್ನಲು ಬಿಡುವುದಿಲ್ಲ ಎಂದು ಹೇಳಿ ಅಧಿಕಾರಕ್ಕೆ ಬಂದ ಮೋದಿ ಅವರು ತನ್ನ ಬೆಂಬಲಿಗರಿಗೆ ಆಯಕಟ್ಟಿನ ಸ್ಥಳದಲ್ಲಿ ಟೆಂಡರ್‌ ಮತ್ತು ಯೋಜನೆಗಳನ್ನು ನೀಡಿ ಲಾಭ ಮಾಡಿಕೊಟ್ಟಿದ್ದಾರೆ. ಸಂವಿಧಾನಾತ್ಮಕ ಸಂಸ್ಥೆಗಳಾದ ಚುನಾವಣಾ ಆಯೋಗ, ಸ್ವಾಯತ್ತ ಸಂಸ್ಥೆಗಳನ್ನು ಬಿಜೆಪಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸಲಾಗುತ್ತಿದೆ ಎಂದು ದೂರಿದರು.

ವಿರೋಧಿಗಳನ್ನು ಮಣಿಸಲು ಸಿಬಿಐ, ಐಟಿ, ಇ.ಡಿ. ಬಿಟ್ಟು ಬೆದರಿಸಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿತವಾಗಿ ನಿರಂಕುಶ ಪ್ರಭುತ್ವದೊಳಗೆ ಭಾರತ ಸರಕಾರ ಹೋಗುತ್ತಿರುವುದು ಕಳವಳಕಾರಿ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಎಂಎ ಲ್‌ಸಿ ಎಚ್‌.ಆರ್‌. ಶ್ರೀನಾಥ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಸ್‌ ವರಲಕ್ಷ್ಮೀ ಸದಸ್ಯರಾದ ಎಂ.ನಿರುಪಾದಿ ಬೆಣಕಲ್‌, ಬಸವರಾಜ್‌, ಎಂ.ಹುಸೇನಪ್ಪ, ಶ್ರೀನಿವಾಸ್‌, ಶಿವಣ್ಣ, ಗಂಗಾಧರ್‌ ಸ್ವಾಮಿ, ಇಬ್ರಾಹಿಂ, ಗಾದೆಪ್ಪ, ಗ್ಯಾನೇಶ್‌ ಕಡಗದ್‌,ಎಚ್‌ ಆರ್‌ ಶ್ರೀನಿವಾಸ್‌ ಇದ್ದರು.

ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರನ್ನು ಒಡೆದು ಆಳುತ್ತಿರುವ ಬಿಜೆಪಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ. ಬಿಜೆಪಿಯವರು ಪದೇ ಪದೇ ಸುಳ್ಳು ಹೇಳಿ ಜನರ ಮನಸ್ಸನ್ನು ಕೆಡಿಸುತ್ತಿದ್ದಾರೆ.
*ಎಚ್‌.ಆರ್‌.ಶ್ರೀನಾಥ್‌, ಮಾಜಿ ವಿಧಾನ ಪರಿಷತ್‌ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next