Advertisement

Vijayapura; ಸಚಿವ ಸ್ಥಾನ ಸಿಕ್ಕಿಲ್ಲ, ನಿಗಮ ಮಂಡಳಿ ಬೇಕಿಲ್ಲ: ಯಶವಂತ್ರಾಯಗೌಡ ಪಾಟೀಲ

12:22 PM Nov 07, 2023 | keerthan |

ವಿಜಯಪುರ: ಸಚಿವ ಸ್ಥಾನ ನನ್ನ ಹಣೆಬರಹದಲ್ಲಿ ಇರಲಿಕ್ಕಿಲ್ಲ. ಇಂಡಿ ಕ್ಷೇತ್ರದಲ್ಲಿ ನಾಲ್ವರು ಶಾಸಕರು ಸತತ ಮೂರು ಬಾರಿ ಗೆದ್ದರೂ ಸಚಿವರಾಗುವ ಅವಕಾಶ ಸಿಕ್ಕಿಲ್ಲ ಎಂಬುದು ದುರ್ದೈವ ಎಂದು ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಬೇಸರ ವ್ಯಕ್ತಪಡಿಸಿದರು.

Advertisement

ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವನಾಗಬೇಕು ಎಂಬುದು ನನ್ನ ಸಹಜ ಆಕಾಂಕ್ಷೆ. ಆದರೆ ಅವಕಾಶ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವ ಸ್ಥಾನ ವಂಚಿತನಾಗಿದ್ದರು ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕಿಯಲ್ಲ. ಪಕ್ಷ ಕಟ್ಟುವಲ್ಲಿ ಶ್ರಮಿಸುವ, ಪಕ್ಷದ ಸರ್ಕಾರವನ್ನು ಅಧಿಕಾರಕ್ಕೆ ತರುವಲ್ಲಿ ಪರಿಶ್ರಮ ಪಡುವ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಕಂದಾಯ ಉಪ ವಿಭಾಗ ಹೊಂದಿರುವ ಇಂಡಿ ಜಿಲ್ಲೆ ಮಾಡುವ ಕುರಿತು ಕ್ಷೇತ್ರದ ಜನರಿಗೆ ನಾನು ವಾಗ್ದಾನ ಮಾಡಿದ್ದೇನೆ. ಜನತೆಗೆ ನೀಡಿದ ಮಾತು ಉಳಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಚುನಾವಣಾ ರಾಜಕೀಯದಲ್ಲಿ ನಿವೃತ್ತಿ ಆಗುವುದಾಗಿ ಹೇಳಿದರು‌

ವಿಜಯಪುರ ಜಿಲ್ಲೆ 13 ತಾಲೂಕು ಹೊಂದಿದೆ. ಇಂಡಿ, ಚಡಚಣ, ಆಲಮೇಲ, ಸಿಂದಗಿ, ದೇವರಹಿಪ್ಪರಗಿ ಸೇರಿಸಿ ಇಂಡಿ ಜಿಲ್ಲೆ ರಚಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ವಿವರಿಸಿದರು.

Advertisement

ಇದರ ಹೊರತಾಗಿಯೂ ಇಂಡಿ ಜಿಲ್ಲೆಗೆ ಸೇರಿಸುವ ಕುರಿತು ಸಿಂದಗಿ, ದೇವರಹಿಪ್ಪರಗಿ, ಆಲಮೇಲ ತಾಲೂಕಗಳ ಜನರ ಭಾವನೆಗಳೂ ಮಹತ್ವ ಪಡೆಯುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next