Advertisement
ಏನಿದು ದೂರದೃಷ್ಟಿ ಯೋಜನೆ?ಗ್ರಾ.ಪಂ. ಆಡಳಿತ ಅಸ್ತಿತ್ವಕ್ಕೆ ಬಂದಾಗ ಮುಂದಿನ 5 ವರ್ಷಗಳಲ್ಲಿ ಏನೆಲ್ಲ ಅಭಿವೃದ್ಧಿ ನಡೆಸಬೇಕು ಎನ್ನುವ ಯೋಜನೆಯೇ ದೂರದೃಷ್ಟಿ ಯೋಜನೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂ.ರಾಜ್ ಅಧಿನಿಯಮ, 1993 ಪ್ರಕರಣ 309-ಬಿ ಅನ್ವಯ ಗ್ರಾ.ಪಂ.ಗಳು ಹೊಸದಾಗಿ ರಚನೆಯಾದ ಕೂಡಲೇ 3 ತಿಂಗಳಲ್ಲಿ 5 ವರ್ಷಗಳ ದೂರದೃಷ್ಟಿ ಯೋಜನೆ ತಯಾರಿಸುವುದು ಕಡ್ಡಾಯ. ಸರ್ವತೋಮುಖ ಅಭಿವೃದ್ಧಿಗೆ, ಸಾಮಾಜಿಕ ನ್ಯಾಯ ಸ್ಥಾಪನೆಗೆ, ಸುರಕ್ಷಿತವಲ್ಲದ ವರ್ಗಗಳ ಹಿತಾಸಕ್ತಿಗೆ ಒತ್ತು ನೀಡಿ, ಎಲ್ಲ ವರ್ಗಗಳ ಜನರ ಅಗತ್ಯಗಳನ್ನು ನಿರ್ಧರಿಸಿ, ಅವುಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಯಾಗುವಂತೆ ಯೋಜನೆಗಳನ್ನು ಸಿದ್ಧಪಡಿಸಬೇಕು.
Related Articles
68 ಸಾವಿರ ಸದಸ್ಯರಿಗೂ ದಿನಕ್ಕೆ 300 ರೂಗಳಂತೆ ಭತ್ತೆಯಿದ್ದು, 3 ದಿನಗಳ ತರಬೇತಿ ಆಯೋಜಿಸಲಾಗಿದೆ. ತರಬೇತಿ ನೀಡುವವರಿಗೆ 1,750 ರೂ. ದೊರೆಯಲಿದೆ. ಉಪಗ್ರಹ ಆಧಾರಿತ ತರಬೇತಿಯೂ ಒಳಗೊಂಡಿದ್ದು, ಉಪಗ್ರಹ ಬಾಡಿಗೆಯೇ ಗಂಟೆಗೆ ಅಂದಾಜು 3 ಲಕ್ಷ ರೂ. ಇದೆ.
Advertisement
ಸಮಿತಿಯೋಜನ ತಂಡದಲ್ಲಿ ಗ್ರಾ.ಪಂ. ಸದಸ್ಯರು, ಪಿಡಿಒ, ಸಿಬಂದಿ, ನಿವೃತ್ತ ನೌಕರರು, ಸ್ಥಳೀಯ ವಿಷಯ ತಜ್ಞರು, ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು, ಜಿಪಿಎಲ್‌ಎಫ್ ಪ್ರತಿನಿಧಿಗಳು, ಮಹಿಳಾ ಸ್ವಸಹಾಯ ಸಂಘಗಳ ಗುಂಪಿನ ಪ್ರತಿನಿ ಧಿ ಹಾಗೂ ಪಂಚಾಯತ್‌ಗೆ ಅವಶ್ಯ ಎನಿಸುವ ಇತರರು ಸದಸ್ಯರಾಗಿರುತ್ತಾರೆ. ಯೋಜನ ತಂಡದ ನೆರವಿನಿಂದ ವಾರ್ಡ್ ಸಭೆ, ಗ್ರಾಮ ಸಭೆ ಮಾಡುವುದು. ಗ್ರಾಮವಾರು ಸಾಮಾಜಿಕ ಮತ್ತು ಸಂಪನ್ಮೂಲ ನಕ್ಷೆ ತಯಾರಿ, ಗ್ರಾಮ ಸಭೆಗಳಲ್ಲಿ ಜನರ ಸಹಭಾಗಿತ್ವದೊಡನೆ ಪ್ರಾಥಮಿಕ ಮತ್ತು ದ್ವಿತೀಯ ಅಂಕಿ-ಅಂಶಗಳ ಸಂಗ್ರಹಣೆ, ವಾಸ್ತವ ಸ್ಥಿತಿಯ ವಿಶ್ಲೇಷಣೆ ಮಾಡಿ, ಸಂಬಂಧಿ ಸಿದ ವಲಯಗಳ ಸಮನ್ವಯತೆಯಿಂದ ಆದ್ಯತೆಯಲ್ಲಿ ಗುರಿಗಳನ್ನು ನಿರ್ಧರಿಸುವುದು. ಪಂ. ಅನುಮೋದಿಸಿದ ಯೋಜನೆ ವೆಬ್‌ಸೈಟ್‌ನಲ್ಲಿ ಲಭ್ಯ. ಈ ತಿಂಗಳಾತ್ಯಕ್ಕೆ ಸದಸ್ಯರ ತರಬೇತಿ ಪೂರ್ಣಗೊಳ್ಳಲಿದ್ದು, ಬಳಿಕ ಸ್ಥಳೀಯ ಸಮಿತಿ ರಚಿಸಿ ದೂರದೃಷ್ಟಿ ಯೋಜನೆ ತಯಾರಿಸಬೇಕು.
– ಶ್ರೀನಿವಾಸ ರಾವ್,
ಮುಖ್ಯ ಯೋಜನಾಧಿಕಾರಿ,
ಜಿ.ಪಂ. ಉಡುಪಿ -ಲಕ್ಷ್ಮೀ ಮಚ್ಚಿನ