Advertisement

ಇನ್ನು ನೀಟ್‌ ಪಿಜಿ “ಎಕ್ಸಿಟ್‌’

10:26 PM Nov 09, 2022 | Team Udayavani |

ಹೊಸದಿಲ್ಲಿ: ಇನ್ನು ಮುಂದೆ ಎಂಬಿಬಿಎಸ್‌ ಮುಗಿಸಿ ಸ್ನಾತಕೋತ್ತರ ಅಥವಾ ಎಂಎಸ್‌/ಎಂಡಿ ಸೇರಲು ನೀಟ್‌- ಪಿಜಿ ಬರೆಯಬೇಕಾಗಿಲ್ಲ. ಇದಕ್ಕೆ ಬದಲಾಗಿ ಎಂಬಿಬಿಎಸ್‌ ಅಂತ್ಯದಲ್ಲೇ ಎಕ್ಸಿಟ್‌ ಪರೀಕ್ಷೆ ಬರಲಿದ್ದು, ಅದನ್ನು ಬರೆದು ಉತ್ತೀರ್ಣರಾದರೆ ಸಾಕು, ಅಂಕಗಳ ಆಧಾರದಲ್ಲಿ ಸ್ನಾತಕೋತ್ತರಕ್ಕೆ ಪ್ರವೇಶ ಸಿಗಲಿದೆ.

Advertisement

ಮುಂದಿನ ವರ್ಷದ ಎಪ್ರಿಲ್‌-ಮೇನಲ್ಲಿ ನೀಟ್‌-ಪಿಜಿ ನಡೆಯಲಿದೆ. ಎಲ್ಲವೂ ಅಂದುಕೊಂಡಂತಾದರೆ ಇದೇ ಕೊನೆಯ ಪರೀಕ್ಷೆಯಾಗಲಿದೆ. 2023ರ ಡಿಸೆಂಬರ್‌ನಲ್ಲಿ ರಾಷ್ಟ್ರೀಯ ಎಕ್ಸಿಟ್‌ ಟೆಸ್ಟ್‌ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಉನ್ನತ ಮಟ್ಟದ ಸಭೆ ನಡೆಸಿದೆ. ಬಳಿಕ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನೀಟ್‌-ಪಿಜಿಯನ್ನು ಸ್ಥಗಿತ ಮಾಡುವ ಮತ್ತು ರಾಷ್ಟ್ರೀಯ ಎಕ್ಸಿಟ್‌ ಪರೀಕ್ಷೆ ಜಾರಿಗೆ ತರುವ ಬಗ್ಗೆ ಮಾಹಿತಿ ನೀಡಲಾಗಿದೆ.

ಹಾಗೆಯೇ 2023ರ ಡಿಸೆಂಬರ್‌ನಲ್ಲಿ ಈ ರಾಷ್ಟ್ರೀಯ ಎಕ್ಸಿಟ್‌ ಪರೀಕ್ಷೆ ನಡೆದರೆ 2019-2020ರಲ್ಲಿ ಎಂಬಿಬಿಎಸ್‌ಗೆ ಸೇರಿದ್ದ ವಿದ್ಯಾರ್ಥಿಗಳು ಇದಕ್ಕೆ ಹಾಜರಾಗಬೇಕಾಗುತ್ತದೆ. ಅಲ್ಲದೆ ಎಂಬಿಬಿಎಸ್‌ ಅಂತಿಮ ವರ್ಷದಲ್ಲಿ ಇದೇ ಮುಖ್ಯವಾದ ಪರೀಕ್ಷೆಯಾಗಿದ್ದು, ಇದರ ಅಂಕಗಳ ಆಧಾರದ ಮೇಲೆ ಎಂಬಿಬಿಎಸ್‌ನ ಫ‌ಲಿತಾಂಶವನ್ನೂ ನೀಡಲಾಗುತ್ತದೆ. ಹಾಗೆಯೇ 2024-25ರ ಬ್ಯಾಚ್‌ನ ಸ್ನಾತಕೋತ್ತರಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ಮೂಲಗಳ ಪ್ರಕಾರ ದಿಲ್ಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್‌) ಈ ಪರೀಕ್ಷೆ ನಡೆಸುತ್ತದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next