* 4×400 ಮೀ. ವನಿತಾ ರಿಲೇಯಲ್ಲಿ ತಂಡದ ಸಾರಥ್ಯ
Advertisement
ಹೊಸದಿಲ್ಲಿ: ಮುಂಬರುವ ಏಶ್ಯನ್ ಗೇಮ್ಸ್ ನಲ್ಲಿ ಭಾರತದ ನೂತನ ಸ್ಪ್ರಿಂಟ್ ರಾಣಿ ಹಿಮಾ ದಾಸ್ 4×400 ಮೀ. ಮಿಶ್ರ ರಿಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ರಾಷ್ಟ್ರೀಯ ಕೋಚ್ ಬಸಂತ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಹಿಮಾ 200 ಮೀ. ಹಾಗೂ 400 ಮೀ. ವೈಯಕ್ತಿಕ ರೇಸ್ ಜತೆಗೆ ವನಿತೆಯರ 4×400 ಮೀ. ರಿಲೇಯಲ್ಲಷ್ಟೇ ಸ್ಪರ್ಧಿಸಲಿದ್ದಾರೆ. 4×400 ಮೀ. ಮಿಶ್ರ ರಿಲೇ ಸ್ಪರ್ಧೆಯನ್ನು ಇದೇ ಮೊದಲ ಬಾರಿಗೆ ಏಶ್ಯನ್ ಗೇಮ್ಸ್‌ನಲ್ಲಿ ಆಯೋಜಿಸಲಾಗುತ್ತಿದೆ. ಪುರುಷರು ಹಾಗೂ ಮಹಿಳೆಯರಿಬ್ಬರೂ ಪಾಲ್ಗೊಳ್ಳಲಿರುವ ಆಕರ್ಷಕ ಸ್ಪರ್ಧೆ ಇದಾಗಲಿದೆ ಎಂಬುದು ಕೂಟದ ಸಂಘಟಕರ ಅಭಿಪ್ರಾಯ.
ಆದರೆ ವನಿತೆಯರ 4×400 ಮೀ. ರಿಲೇಯಲ್ಲಿ ಹಿಮಾ ದಾಸ್ ತಂಡವನ್ನು ಮುನ್ನಡೆಸಲಿದ್ದಾರೆ. ಈ ವಿಭಾಗದಲ್ಲಿ ಭಾರತ ಏಶ್ಯಾಡ್ ಚಾಂಪಿಯನ್ ಆಗಿದೆ. 2014ರ ಏಶ್ಯನ್ ಗೇಮ್ಸ್ ನಲ್ಲಿ ಪ್ರಿಯಾಂಕಾ ಪವಾರ್, ಟಿಂಟು ಲೂಕಾ, ಮನ್‌ದೀಪ್ ಕೌರ್ ಹಾಗೂ ಎಂ.ಆರ್. ಪೂವಮ್ಮ ಅವರನ್ನೊಳಗೊಂಡ ಭಾರತೀಯ ವನಿತಾ ತಂಡ 3 ನಿಮಿಷ, 28.68 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನದ ಪದಕ ಜಯಿಸಿತ್ತು. ಫಿನ್‌ಲಾoಡ್ ವರ್ಲ್ಡ್ ಮೀಟ್ 400 ಮೀ. ಓಟದಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಹಿಮಾ ದಾಸ್ ಸಂಪೂರ್ಣ ವಿಶ್ರಾಂತಿ ಪಡೆದಿದ್ದಾರೆ. ಏಶ್ಯನ್ ಗೇಮ್ಸ್ ಸಮೀಪಿಸುತ್ತಿರು ವುದರಿಂದ ಯಾವುದೇ ಸ್ಥಳೀಯ ಕೂಟಗಳಲ್ಲಿ ಸ್ಪರ್ಧಿಸಿಲ್ಲ.
Related Articles
ಏಶ್ಯನ್ ಗೇಮ್ಸ್‌ಗೆ ಆಯ್ಕೆಯಾಗಿ ರುವ 400 ಮೀ. ಓಟಗಾರರೆಲ್ಲ ಜೆಕ್ ಗಣರಾಜ್ಯದ ಜಬ್ಲೋನೆಕ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿಂದ ನೇರವಾಗಿ ಇಂಡೋನೇಶ್ಯಕ್ಕೆ ಪಯಣಿಸಲಿದ್ದಾರೆ. ಇದಕ್ಕೂ ಮುನ್ನ ಜಬ್ಲೋನೆಕ್ ನ್ಯಾಶನಲ್ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಯೊಂದರಲ್ಲಿ ಕಣಕ್ಕಿಳಿ ಯಲಿದ್ದಾರೆ. ಏಶ್ಯನ್ ಗೇಮ್ಸ್ 400 ಮೀ. ಓಟದಲ್ಲಿ ಹಿಮಾ ದಾಸ್ ಇನ್ನಷ್ಟು ಕಡಿಮೆ ಸಮಯ ದಲ್ಲಿ ಗುರಿ ತಲುಪಲಿದ್ದಾರೆ ಎಂಬುದು ಕೋಚ್ ಬಸಂತ್ ಸಿಂಗ್ ವಿಶ್ವಾಸ. “ಫಿನ್‌ಲಾoಡ್‌ನಲ್ಲಿ ಹಿಮಾ 51.46 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದರು. ಏಶ್ಯಾಡ್‌ನಲ್ಲಿ 51 ಸೆಕೆಂಡ್ ಒಳಗೆ ಈ ದೂರ ಕ್ರಮಿಸಲಿದ್ದಾರೆ. ಹಾಗೆಯೇ 200 ಮೀ. ಓಟದಲ್ಲಿ 23 ಸೆಕೆಂಡ್‌ಗಳ ಸಮಯವನ್ನು ಇನ್ನಷ್ಟು ಉತ್ತಮಪಡಿಸಲಿದ್ದಾರೆ’ ಎಂದಿದ್ದಾರೆ. 200 ಮೀ.ನಲ್ಲಿ ಹಿಮಾ 23.10 ಸೆಕೆಂಡ್‌ಗಳ ದಾಖಲೆ ಹೊಂದಿದ್ದಾರೆ. ಭಾರತದ 400 ಮೀ. ರಾಷ್ಟ್ರೀಯ ದಾಖಲೆ ಮನ್‌ಜಿತ್ ಕೌರ್ ಹೆಸರಲ್ಲಿದೆ. 2004 ಚೆನ್ನೈ ಕೂಟದಲ್ಲಿ ಅವರು 51.05 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು.
Advertisement
ಏಶ್ಯ-ಪೆಸಿಫಿಕ್ ತಂಡಕ್ಕೆ ಹಿಮಾ, ನೀರಜ್ ಸಹಿತ 7 ಕ್ರೀಡಾಳುಗಳುಸೆಪ್ಟಂಬರ್ 8 ಮತ್ತು 9ರಂದು ಜೆಕ್ ಗಣರಾಜ್ಯದ ಓಸ್ಟ್ರಾವಾದಲ್ಲಿ ನಡೆಯಲಿರುವ ಇಂಟರ್‌ನ್ಯಾಶನಲ್ ಆ್ಯತ್ಲೆಟಿಕ್ ಫೆಡರೇಶನ್ (ಐಎಎಎಫ್) ಕಾಂಟಿನೆಂಟಲ್ ಕಪ್ ಪಂದ್ಯಾವಳಿಯಲ್ಲಿ ಪ್ರತಿನಿಧಿಸಲಿರುವ ಏಶ್ಯ-ಪೆಸಿಫಿಕ್ ತಂಡದಲ್ಲಿ ಭಾರತದ 7 ಕ್ರೀಡಾ ಪಟುಗಳು ಅವಕಾಶ ಪಡೆದಿದ್ದಾರೆ. ಇದರಲ್ಲಿ ಇತ್ತೀಚಿನ ಕ್ರೀಡಾ ಸಾಧಕರಾದ ಹಿಮಾ ದಾಸ್ ಮತ್ತು ನೀರಜ್ ಚೋಪ್ರಾ ಕೂಡ ಸೇರಿದ್ದಾರೆ. ಕೂಟದಲ್ಲಿ ಆಫ್ರಿಕಾ, ಅಮೆರಿಕ ಮತ್ತು ಯುರೋಪ್ ತಂಡಗಳು ಪಾಲ್ಗೊಳ್ಳಲಿವೆ. ಪುರುಷರ ವಿಭಾಗದಿಂದ ನೀರಜ್ ಚೋಪ್ರಾ (ಜಾವೆಲಿನ್), ಮೊಹಮ್ಮದ್ ಅನಾಸ್ (400 ಮೀ.), ಜಿನ್ಸನ್ ಜಾನ್ಸನ್ (800 ಮೀ.), ಅರ್ಪಿಂದರ್ ಸಿಂಗ್ (ಟ್ರಿಪಲ್ ಜಂಪ್); ವನಿತಾ ವಿಭಾಗದಿಂದ ಹಿಮಾ ದಾಸ್ (400 ಮೀ.), ಪಿ.ಯು. ಚಿತ್ರಾ (1,500 ಮೀ.) ಮತ್ತು ಸುಧಾ ಸಿಂಗ್ (3,000 ಮೀ. ಸ್ಟೀಪಲ್‌ಚೇಸ್) ಆಯ್ಕೆಯಾಗಿದ್ದಾರೆ. ಹಿಮಾ ದಾಸ್ ಕೋಚ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ!
ಗುಹಾಹಟಿ: ಹಿಮಾ ದಾಸ್ ಅವರ ಕೋಚ್ ನಿಪೋನ್ ದಾಸ್ ಈಗ ಲೈಂಗಿಕ ಆರೋಪಕ್ಕೊಳಗಾಗಿ ತನಿಖೆ ಎದುರಿಸುತ್ತಿದ್ದಾರೆ. ಆದರೆ ಇದಕ್ಕೂ ಹಿಮಾಗೂ ಯಾವುದೇ ಸಂಬಂಧವಿಲ್ಲ. ಗುವಾಹಟಿ ತರಬೇತಿ ವೇಳೆ ಮತ್ತೋರ್ವ ವನಿತಾ ಆ್ಯತ್ಲೀಟ್‌ಗೆ ನಿಪೋನ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನಲಾಗಿದೆ. ಇದನ್ನು ಅಸ್ಸಾಂನ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಆಯುಕ್ತ ಹಾಗೂ ಕಾರ್ಯದರ್ಶಿ ಅಶುತೋಷ್ ಅಗ್ನಿಹೋತ್ರಿ ಖಚಿತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕ್ರೀಡಾಪಟುವಿನ ಕುಟುಂಬದವರೂ ದೂರು ದಾಖಲಿಸಿದ್ದಾರೆ. ಇದನ್ನು ಹೊರಗೆಲ್ಲಾದರೂ ಬಾಯ್ಬಿಟ್ಟರೆ ನಿನ್ನನ್ನು ತರಬೇತಿ ಯಿಂದ ಅಮಾನತುಗೊಳಿಸುವುದಾಗಿ ಆ್ಯತ್ಲೀಟ್‌ಗೆ ನಿಪೋನ್ ಬೆದರಿಕೆಯೊಡ್ಡಿದ್ದಾರೆ ಎಂದೂ ದೂರಿನಲ್ಲಿ ದಾಖಲಿಸಲಾಗಿದೆ.