Advertisement

ಪಾಕ್‌ನಲ್ಲಿ ಸೇನಾ ನೆಲೆ ಸ್ಥಾಪಿಸಲ್ಲ: ಚೀನಾ

06:45 AM Jan 10, 2018 | Team Udayavani |

ಬೀಜಿಂಗ್‌: ಪಾಕಿಸ್ತಾನದ ಜಿವಾನಿಯಲ್ಲಿ ಚೀನಾ ಸೇನಾ ನೆಲೆ ನಿರ್ಮಿಸಲು ಯೋಜಿಸುತ್ತಿದೆ ಎಂಬ ವರದಿಯನ್ನು ಚೀನಾ ತಳ್ಳಿ ಹಾಕಿದೆ. ಇರಾನ್‌ನ ಚಬಾ ಹರ್‌ ಬಂದರು ಹಾಗೂ ಪಾಕಿಸ್ತಾನ ನಿರ್ಮಿಸುತ್ತಿರುವ ಗ್ವಾದಾರ್‌ ಬಂದರಿನ ಸಮೀಪದಲ್ಲೇ ಈ ಸೇನಾ ನೆಲೆ ಇರಲಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದಾಗ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್‌, ಈ ಕುರಿತು ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪಾಕ್‌ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವುದಕ್ಕೆ ಪ್ರತೀಕಾರದ ಕ್ರಮವಾಗಿ ಚೀನಾಗೆ ಈ ಭಾಗವನ್ನು ಬಿಟ್ಟುಕೊಡಲಿದೆ ಎಂದು ಅಮೆರಿಕದ ವಾಷಿಂಗ್ಟನ್‌ ಟೈಮ್ಸ್‌ ವರದಿ ಮಾಡಿತ್ತು.

Advertisement

ಪಾಕ್‌ಗೆ ನಿಖರ ಸೂಚನೆ: ಉಗ್ರರಿಗೆ ಯಾವುದೇ ರೀತಿಯ ವಿನಾಯಿತಿ ನೀಡದೆಯೇ ಅವರ ನೆಲೆಗಳನ್ನು ನಿರ್ಮೂಲನೆ ಮಾಡಿ ಎಂದು ಪಾಕಿಸ್ತಾನಕ್ಕೆ ಅಮೆರಿಕ ಸೂಚಿಸಿದ್ದು, ಈ ಬಗ್ಗೆ ನಿಖರ ಮತ್ತು ವಿಸ್ತೃತ ಸೂಚನೆಯನ್ನು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next