Advertisement
ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಜಿ.ವಿ. ರಾಜೇಶ್ ಹಾಗೂ ಚುನಾ ವಣೆ ನಿರ್ವಹಣೆ ಸಮಿತಿ ಸಂಚಾಲಕ ವಿ. ಸುನೀಲ್ ಕುಮಾರ್ ನೇತೃತ್ವದಲ್ಲಿ ನಡೆದ, ವಿವಿಧ ಪ್ರಕೋಷ್ಠಗಳ ಸಭೆಯಲ್ಲಿ ಲೋಕ ಸಭಾ ಚುನಾವಣೆಯ ಪ್ರಚಾರ ತಂತ್ರಗಳ ಸ್ವರೂಪ ಹೇಗಿರ ಬೇಕೆಂಬ ಬಗ್ಗೆ ವಿವರಣೆ ನೀಡಲಾಗಿದೆ. ಎ.5ರೊಳಗೆ ಎಲ್ಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ (ಮಂಡಲ) ಕಾರ್ಯಕರ್ತರ ಸಭೆ ಪೂರ್ಣಗೊಳಿಸುವಂತೆ ಹಾಗೂ ಮೊದಲ ಹಂತದಲ್ಲಿ ಚುನಾವಣೆ ನಡೆಯುವಲ್ಲಿ ಜನಸಂಪರ್ಕ ಸಭೆಯನ್ನೂ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಜತೆಗೆ ಎಲ್ಲ ಲೋಕಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ ಕಟ್ಟೆ ಸಭೆ ಹಾಗೂ ಬೀದಿ ಬದಿ ಸಭೆ ನಡೆಸಲಾಗುತ್ತದೆ. ಇದು ಸಣ್ಣಸಣ್ಣ ಗುಂಪುಗಳ ಮೇಲೆ ಪ್ರಭಾವ ಬೀರಲು ನೆರವಾಗುತ್ತದೆ. ಇದಕ್ಕೆೆ ಬೇಕಾದಷ್ಟು ಚರ್ಚೆ ವಿಚಾರಗಳು ಕೇಂದ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಕಷ್ಟಿವೆ. ಕೇಂದ್ರದ ಸಾಧನೆ ಜತೆಗೆ ರಾಜ್ಯದ ವೈಫÂಲ್ಯ ವನ್ನೂ ಜನರಿಗೆ ತಿಳಿಸಲು ಅನುಕೂಲವಾಗುತ್ತದೆ.
Related Articles
Advertisement
ಒಂದೇ ವೇದಿಕೆಯಲ್ಲಿ ಮೋದಿ, ಎಚ್ಡಿಡಿರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವ ಇನ್ನೂ 8 ಸಮಾವೇಶಗಳು ನಡೆಯುವ ಸಾಧ್ಯತೆ ಇದೆ. ಎಲ್ಲಾದರೂ ಒಂದು ಕಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಒಂದೇ ವೇದಿಕೆಗೆ ಕರೆತರಲು ಬಿಜೆಪಿ ಕಾರ್ಯಯೋಜನೆ ರೂಪಿಸಿದೆ. 8 ಕ್ಲಸ್ಟರ್‌ಗಳಲ್ಲಿ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಶಿವಮೊಗ್ಗ ಹಾಗೂ ಕಲಬುರಗಿ ಕ್ಲಸ್ಟರ್ ಪ್ರಚಾರ ಮುಕ್ತಾಯಗೊಂಡಿದೆ. ಉಳಿದ 6 ಸ್ಥಳಗಳು ಬಾಕಿ ಉಳಿದಿದ್ದು, ತುಮಕೂರು ಅಥವಾ ಮೈಸೂರಿನಲ್ಲಿ ಮೋದಿ ಹಾಗೂ ದೇವೇಗೌಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 14 ಎಂಪಿ ಕ್ಷೇತ್ರಗಳ
ಮನೆ ಭೇಟಿ: ಎ. 5 ಗಡುವು
ರಾಜ್ಯದಲ್ಲಿ ಮೊದಲ ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯುವ, 14 ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಮನೆಗಳನ್ನು ಎಪ್ರಿಲ್ 5ರೊಳಗೆ ತಲುಪುವುದಕ್ಕೆ ಬಿಜೆಪಿ ಕಾರ್ಯತಂತ್ರ ರೂಪಿಸಿದೆ. ಎ.26ಕ್ಕೆ ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದೆ. ಪ್ರತೀ ವಿಧಾನಸಭಾ
ಕ್ಷೇತ್ರದಲ್ಲಿ 22 ಸಣ್ಣಸಣ್ಣ ಸಭೆ
ಚುನಾವಣೆ ಮುಕ್ತಾಯಗೊಳ್ಳುವವರೆಗೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 22 ಸಣ್ಣಸಣ್ಣ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ. ರಾಷ್ಟ್ರ ಮತ್ತು ರಾಜ್ಯ ಮಟ್ಟದ ನಾಯಕರ ಪ್ರಚಾರದ ಜತೆಗೆ, ಈ ಸಣ್ಣ ಸಭೆಗಳಿಂದ ಜನರನ್ನು ತಲುಪುವುದು ಬಿಜೆಪಿ ಲೆಕ್ಕಾಚಾರ.