Advertisement

ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿ, ಲಾಕ್ ಡೌನ್ ಇಲ್ಲವೇ ಇಲ್ಲ : ಕೇಜ್ರಿವಾಲ್  

04:32 PM Apr 10, 2021 | Team Udayavani |

ನವ ದೆಹಲಿ : ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದರೂ ರಾಷ್ಟ್ರ ರಾಜಧಾನಿಯಲ್ಲಿ ಯಾವುದೇ ಲಾಕ್ ಡೌನ್ ವಿಧಿಸಲಾಗುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ(ಏ.10) ಹೇಳಿದ್ದಾರೆ.

Advertisement

ಕೋವಿಡ್ ಸೋಂಕನ್ನುನಿಯಂತ್ರಣಕ್ಕೆ ತರುವ ಉದ್ದೇಶದಿಂದ ರಾಜ್ಯದಲ್ಲಿ ಕಠಿಣ ನಿಯಮಗಳನ್ನು ಅತಿ ಶೀಘ್ರದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಕೇಜ್ರಿವಾಲ್ ಮಾಹಿತಿ ನೀಡಿದ್ದಾರೆ.

ಓದಿ : ತೃಣಮೂಲ ಕಾಂಗ್ರೆಸ್ ಚುನಾವಣಾ ಸಂದರ್ಭದಲ್ಲಿ ಹಿಂಸಾಚಾರ ಸೃಷ್ಟಿಸುತ್ತಿದೆ : ಮೋದಿ ಕಿಡಿ

ನಮ್ಮಲ್ಲಿ ಸಾಕಷ್ಟು ಕೋವಿಡ್ ಲಸಿಕೆಗಳು ಇದ್ದಿದ್ದರೇ ಹಾಗೂ ಯಾವುದೇ ವಯೋಮಿತಿ ಇಲ್ಲದಿದ್ದರೇ, ಎರಡರಿಂದ ಮೂರು ತಿಂಗಳುಗಳಲ್ಲಿ ದೆಹಲಿಯ ಎಲ್ಲಾ ನಾಗರಿಕರಿಗೆ ಕೋವಿಡ್ ಲಸಿಕೆಯನ್ನು ನೀಡಬಹುದಿತ್ತು. ಸದ್ಯಕ್ಕೆ ನಮ್ಮಲ್ಲಿ ಒಂದು ವಾರಕ್ಕೆ ಪೂರೈಸುವಷ್ಟು ಮಾತ್ರ ಲಸಿಕೆಗಳ ಲಭ್ಯವಿದೆ. ಲಸಿಕೆಯನ್ನು ನೀಡುವುದಕ್ಕೆ ವಯೋಮಿತಿಯನ್ನು ತೆಗೆಯಬೇಕಿದೆ. ಲಸಿಕೆಯನ್ನು ಎಲ್ಲರಿಗೂ ನೀಡುವಂತದ್ದು ದೇಶದಲ್ಲಿ ಆಗಬೇಕು. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವ ಯೋಜನೆಯೇ ಇಲ್ಲ ಎಂದು ಅವರು ತಿಳಿಸಿದ್ದಾರೆ.

Advertisement

ಈ ನಡುವೆ ದೆಹಲಿಯಲ್ಲಿ ಸೋಂಕಿನ ಹಠಾತ್ ಏರಿಕೆಯಿಂದಾಗಿ ದೆಹಲಿ ಸರ್ಕಾರ ನಿನ್ನೆ(ಶುಕ್ರವಾರ, ಏ.09) ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಮುಂದಿನ ಆದೇಶ ಹೊರಡುವ ತನಕ ಮುಚ್ಚುವಂತೆ ಆದೇಶಿಸಿತ್ತು.

ರಾಷ್ಟ್ರ ರಾಜಧಾನಿಯಲ್ಲಿ 8,521 ಹೊಸ ಕೋವಿಡ್ ಸೋಂಕುಗಳನ್ನು ವರದಿಯಾಗಿವೆ . ಕಳೆದ 24 ಗಂಟೆಗಳಲ್ಲಿ ಕೋವಿಡ್ ಸೋಂಕಿನ ಕಾರಣದಿಂದಾಘೀ 39 ಸಾವುಗಳು ಸಂಭವಿಸಿವೆ ಎಂದು ದೆಹಲಿ ಸರ್ಕಾರದ ಹೆಲ್ತ್ ಬುಲೆಟಿನ್ ತಿಳಿಸಿದೆ.

ಕಳೆದ ವರ್ಷ ನವೆಂಬರ್ 11 ರಂದು ದೆಹಲಿ ಒಂದು ದಿನದಲ್ಲಿ  8,593 ಸೋಂಕು ಏರಿಕೆ ಕಂಡಿತ್ತು.

ಓದಿ :  ಮುಂಬೈ ವಿರುದ್ಧ ರೋಚಕ ಗೆಲುವು: ‘ಪಂಜಾಬ್ ಕಿಂಗ್ಸ್’ ತಂಡಕ್ಕೆ ಥ್ಯಾಂಕ್ಸ್ ಹೇಳಿದ್ದೇಕೆ RCB ?

Advertisement

Udayavani is now on Telegram. Click here to join our channel and stay updated with the latest news.

Next