Advertisement

ಲಾಬಿ ಮಾಡಲ್ಲ,ರಾಜೀನಾಮೆ ನೀಡಲ್ಲ

06:20 AM Jun 09, 2018 | Team Udayavani |

ದಾವಣಗೆರೆ: “ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಲ್ಲ. ಅಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದೂ
ಇಲ್ಲ. ಅದೆಲ್ಲಾ ಸುಳ್ಳು ವಂದತಿ’ ಎಂದು ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಶಾಮನೂರು
ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ. 

Advertisement

ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ನಿಷ್ಠಾವಂತ ಕಾಂಗ್ರೆಸ್ಸಿಗ. ಸಚಿವ ಸ್ಥಾನ ಸಿಗದಿದ್ದಕ್ಕೆ ನನಗೆ ಬೇಸರವಿಲ್ಲ. ಅಲ್ಲದೆ, ಸಚಿವ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ಸಹ ನನ್ನ ಜೊತೆ ಮಾತನಾಡಿಲ್ಲ. ಸಚಿವ ಸಂಪುಟದಲ್ಲಿನ ಉಳಿದ ಆರು ಸ್ಥಾನಗಳಿಗೆ ಭರ್ತಿ ಯಾವಾಗ ಎಂಬುದು ಹೇಳುವುದು ಕಷ್ಟ.

ನನಗೆ ಸಚಿವ ಸ್ಥಾನ ಕೊಡಲಿ ಅಂತ ಜಿಲ್ಲೆಯಲ್ಲಿ ಕೆಲವು ಜನಪ್ರತಿನಿಧಿಗಳು ರಾಜೀನಾಮೆ ನೀಡುತ್ತಿದ್ದಾರೆ. ಆದರೆ,
ರಾಜೀನಾಮೆ ನೀಡುವಂತೆ ನಾನೇನು ಅವರಿಗೆ ಹೇಳಿಲ್ಲ’ ಎಂದರು.

ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಮನೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ವೀರಶೈವ ಮಠಾಧೀಶರು ಹೇಳಿಕೆ ನೀಡುತ್ತಿರುವ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, “ಸಚಿವ ಸ್ಥಾನ ಮತ್ತು ರಾಜಕೀಯ ಕುರಿತು ಸ್ವಾಮೀಜಿಗಳು ಮಾತನಾಡದಿರುವುದೇ ಸೂಕ್ತ.

ಮಠಾಧೀಶರು, ಸ್ವಾಮೀಜಿಗಳು ನನಗೆ ಸಚಿವ ಸ್ಥಾನ ನೀಡಿ ಎಂದು ಆಗ್ರಹಿಸಿದರೆ ಹತ್ತಿರವಿರುವ ಸಚಿವ ಸ್ಥಾನ
ದೂರ ಹೋಗಲಿದೆ. ಹಾಗಾಗಿ ಅವರು ಸುಮ್ಮನಿರುವುದೇ ಸೂಕ್ತ’ ಎಂದರು.

Advertisement

ಇಂದು ಬೆಂಗಳೂರು ಚಲೋ: ಶಾಮನೂರು ಶಿವಶಂಕರಪ್ಪಗೆ ಸಚಿವ ಸ್ಥಾನ ನೀಡದಿರುವುದನ್ನು ಖಂಡಿಸಿ
ಕಾಂಗ್ರೆಸ್‌ನ ದಾವಣಗೆರೆ ಜಿಲ್ಲಾ, ಬ್ಲಾಕ್‌, ವಿವಿಧ ಘಟಕಗಳ ಎಲ್ಲ ಅಧ್ಯಕ್ಷರು, ಪದಾಧಿಕಾರಿಗಳು ಶನಿವಾರ ಬೆಂಗಳೂರು ಚಲೋ…ಮೂಲಕ ಕೆಪಿಸಿಸಿ ಕಚೇರಿಗೆ ತೆರಳಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ.

ದಾವಣಗೆರೆಯಿಂದ ಶನಿವಾರ ಬೆಳಗ್ಗೆ 50ಕ್ಕೂ ಹೆಚ್ಚು ಬಸ್‌ಗಳಲ್ಲಿ ಬೆಂಗಳೂರಿಗೆ ತೆರಳಿ, ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಮತ್ತು ಇತರ ಮುಖಂಡರನ್ನು ಭೇಟಿ ಮಾಡಿ, ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಅವರು ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ಅÊ ‌ರಿಗೆ ಸ್ಥಾನ ನೀಡಲೇಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next