Advertisement

Mysuru-Darbhanga Train Mishap: ಪಾಠ ಕಲಿಯದ ಸರಕಾರ… ಕೇಂದ್ರದ ವಿರುದ್ಧ ರಾಹುಲ್ ಕಿಡಿ

12:15 PM Oct 12, 2024 | Team Udayavani |

ನವದೆಹಲಿ: ಚೆನ್ನೈ ಸಮೀಪದ ತಮಿಳುನಾಡಿನ ಕಾವರೈಪೇಟೈ ರೈಲು ನಿಲ್ದಾಣದ ಬಳಿ ಶುಕ್ರವಾರ ರಾತ್ರಿ ಮೈಸೂರು-ದರ್ಭಾಂಗ ಬಾಗ್ಮತಿ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಹತ್ತೊಂಬತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ, ಇಷ್ಟು ಮಾತ್ರವಲ್ಲದೆ ಎರಡು ಬೋಗಿಗಳು ಬೆಂಕಿಗಾಹುತಿಯಾಗಿವೆ, ಹಲವಾರು ಬೋಗಿಗಳು ಹಳಿ ತಪ್ಪಿವೆ ರಕ್ಷಣಾ ಕಾರ್ಯಗಳು ಪ್ರಗತಿಯಲ್ಲಿವೆ.

Advertisement

ಈ ನಡುವೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿದುದ್ದ ಕಿಡಿಕಾರಿದ್ದಾರೆ, ಇತ್ತೀಚಿನ ದಿನಗಳಲ್ಲಿ ಹಲವಾರು ರೈಲು ದುರಂತಗಳು ನಡೆದಿರುವುದು ಗೊತ್ತಿದ್ದರೂ ಕೇಂದ್ರ ಸರಕಾರ ರೈಲು ಅವಘಡ ತಪ್ಪಿಸಲು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ, ಇತ್ತೀಚಿಗೆ ನಡೆದ ಬಾಲಸೋರ್ ದುರಂತ ನಮ್ಮ ಕಣ್ಣ ಮುಂದೆಯೇ ಇರುವಂತೆ ಇನ್ನೊಂದು ದುರಂತ ಸಂಭವಿಸಿದೆ ಇಷ್ಟಾದರೂ ಕೇಂದ್ರ ಸರಕಾರ ಮಾತ್ರ ಎಚ್ಚೆತ್ತುಕೊಳ್ಳುವ ಲಕ್ಷಣ ಕಾಣುತ್ತಿಲ್ಲ ಸರಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಕುಟುಂಬಗಳು ಜೀವ ಕಳೆದುಕೊಳ್ಳಬೇಕು ಎಂದು ಕೇಂದ್ರ ಸರಕಾರದ ವಿರುದ್ಧ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡಿದ ಉಪಮುಖ್ಯಮಂತ್ರಿ:
ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ರೈಲು ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಅವರ ಅರೋಗ್ಯ ವಿಚಾರಿಸಿ ಮಾತನಾಡಿದ ಅವರು. ರೈಲು ಅಪಘಾತ ತಡೆಗಟ್ಟಲು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು, ಬಾಲಸೋರ್ ದುರಂತ ಸೇರಿದಂತೆ ಹಲವಾರು ರೈಲು ದುರಂತಗಳು ನಡೆದಿದ್ದು ಈ ಕುರಿತು ಕೇಂದ್ರ ಗಂಭೀರವಾಗಿ ಆಲೋಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.

ಅಪಘಾತದ ಬಳಿಕ ದರ್ಭಂಗಾ ಬಾಗ್ಮತಿ ಎಕ್ಸ್‌ಪ್ರೆಸ್‌ನಲ್ಲಿನ ಪ್ರಯಾಣಿಕರನ್ನು ಶನಿವಾರ ವಿಶೇಷ ರೈಲಿನ ಮೂಲಕ ಸುರಕ್ಷಿತವಾಗಿ ಅವರ ಗಮ್ಯಸ್ಥಾನಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಯಿತು ಎಂದು ದಕ್ಷಿಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next