Advertisement
ವೀರಶೈವ ಲಿಂಗಾಯತ ಧರ್ಮದ ಜನಜಾಗೃತಿ ಸಮಾವೇಶ ನಿಮಿತ್ತ ಹಮ್ಮಿಕೊಂಡಿರುವ ಪಾದಯಾತ್ರೆ ಸಂಪನ್ನ ಸಮಾರಂಭದಲ್ಲಿ ಹೊಸಳ್ಳಿಯ ಅಭಿನವ ಬೂದೀಶ್ವರ ಸ್ವಾಮಿಗಳು ಆಶೀರ್ವಚನ ನೀಡಿದರು. ನಾವೆಲ್ಲರೂ ನಮ್ಮ ಬದುಕನ್ನು ಪ್ರೀತಿಸಿ ಶ್ರದ್ಧೆಯಿಂದ ಕೆಲಸಮಾಡಿ ಭವ್ಯ ಮಾನವೀಯತೆಗಾಗಿ ಬದುಕಿ ಬಾಳುವುದು ಅವಶ್ಯ ಎಂದರು. ಪಾದಯಾತ್ರೆ ಪ್ರಾರಂಭಕ್ಕೆ ಚಾಲನೆ ನೀಡಿದ ಪರಮ ಪೂಜ್ಯ ಡಾ| ನೀಲಮ್ಮತಾಯಿ ಅಸುಂಡಿ ಮಾತನಾಡಿದರು. ಪಾದಯಾತ್ರೆಯಲ್ಲಿ ಹರ್ಲಾಪುರ ಶ್ರೀಗಳು, ಕೊಟ್ಟೂರೇಶ್ವರ ಶ್ರೀಗಳು, ಶಿರಕೋಳದ ಶ್ರೀಗಳು ಇದ್ದರು. ಅಟ್ನೂರ ಶ್ರೀಗಳು, ಅಬ್ಬಿಗೇರಿ ಶ್ರೀಗಳು ಹಾಗೂ ಇನ್ನೂ ಅನೇಕ ಶ್ರೀಗಳು ಭಾಗವಹಿಸಿದ್ದರು.
ಬಿ.ಎಂ. ಬಿಳೆಯಲಿ, ಬಿ.ಎಂ. ದಾಯಮ್ಮನವರ, ರಾಜು ಖಾನಪ್ಪನವರ, ಮಂಜುನಾಥ ಬೇಲೇರಿ, ಅಶೋಕ ಗಡಾದ,
ಅಜ್ಜಣ್ಣ ಮಲ್ಲಾಡದ, ಶರಣಯ್ಯ ಜುಕ್ತಿಮಠ ಸೇರಿದಂತೆ ಅನೇಕರಿದ್ದರು. ಡಾ| ಶೇಖರ ಸಜ್ಜನರ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು. ಬೆಳ್ಳಟ್ಟಿ ಹಿರೇಮಠದ
ಫಕೀರಶಾಸ್ತ್ರೀಗಳು ನಿರೂಪಿಸಿದರು, ಮಹೇಶ್ವರಸ್ವಾಮಿ ಹೊಸಳ್ಳಿಮಠ ವಂದಿಸಿದರು.