Advertisement

ವಿದ್ಯುತ್‌ ಕೊರತೆಯಿಲ್ಲ, ಲೋಡ್‌ ಶೆಡ್ಡಿಂಗ್‌ ಪ್ರಶ್ನೆಯೇ ಇಲ್ಲ: ಸುನಿಲ್‌ ಕುಮಾರ್‌

11:08 AM Apr 27, 2022 | Team Udayavani |

ಕಾರ್ಕಳ: ರಾಜ್ಯದಲ್ಲಿ ವಿದ್ಯುತ್‌ ಕೊರತೆಯಿಲ್ಲ. ಆದರೇ ಸರಬರಾಜಿನಲ್ಲಿ ಸಮಸ್ಯೆಗಳಿವೆ. ಇದನ್ನು ಸರಿಪಡಿಸಿದರೆ ಎಲ್ಲೂ ವಿದ್ಯುತ್‌ ಕೊರತೆಯಾಗದು. ಸರಬರಾಜು ವ್ಯವಸ್ಥೆ ಉತ್ತಮಗೊಳಿಸಲು ಹೆಚ್ಚುವರಿ ಸಬ್‌ ಸ್ಟೇಶನ್‌, ಕೆಪಿಟಿಸಿಎಲ್‌ ಸ್ಟೇಶನ್‌, ಲೈನ್‌ ವರ್ಕ್‌ ಎಲ್ಲವನ್ನು ಆರಂಭಿಸಿದ್ದೇವೆ ಎಂದು ಸಚಿವ ವಿ.ಸುನಿಲ್‌ಕುಮಾರ್‌ ಹೇಳಿದರು.

Advertisement

ಕಾರ್ಕಳದಲ್ಲಿ 5.61 ಕೋ.ರೂ. ವೆಚ್ಚದಲ್ಲಿ 129 ಟ್ರಾನ್ಸ್‌ಫಾರ್ಮರ್‌ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಗುಣಮಟ್ಟದ ವಿದ್ಯುತ್‌, ಅಡಚಣೆ ರಹಿತ ವಿದ್ಯುತ್‌ ಪೂರೈಕೆಗೆ ಟಿಸಿಗಳ ಬದಲಾವಣೆ, ಹೊಸ ಟಿಸಿ ಅಳವಡಿಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು, ಇಂಧನ ಇಲಾಖೆ ಕಚೇರಿಯನ್ನು ಸಂಪರ್ಕಿಸಿದರೆ ಮುಂದಿನ 6 ತಿಂಗಳುಗಳೊಳಗೆ ಆ ಗ್ರಾಮಕ್ಕೆ ಟಿಸಿ ವಿತರಿಸುವ ಅಗತ್ಯ ಕ್ರಮ ತೆಗೆದುಕೊಳ್ಳುತ್ತವೆ. ಕಾರ್ಕಳದಲ್ಲಿ 130 ಟಿಸಿಗಳನ್ನು ಅಳವಡಿಸಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹಂತಹಂತವಾಗಿ ಟಿ.ಸಿ. ಪ್ರಮಾಣ ಹೆಚ್ಚಳಗೊಳಿಸಲಿದ್ದೇವೆ ಎಂದರು.

ಮೆಸ್ಕಾಂ ಮಂಗಳೂರು ವಿಭಾಗದ ಪುಷ್ಪಾ, ಉಡುಪಿ ಮೆಸ್ಕಾಂ ಅಧೀಕ್ಷಕ ನರಸಿಂಹ ಪಂಡಿತ್‌, ಮಂಗಳೂರು ಮೆಸ್ಕಾಂ ಕಂಪೆನಿ ನಿರ್ದೇಶಕ ದಿನೇಶ್‌ ಪೈ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next