Advertisement

ಯಾವ ರೈತರಿಗೂ ಅನ್ಯಾಯವಾಗಲು ಬಿಡಲ್ಲ: ಬಿವೈಆರ್‌

11:56 AM Jul 27, 2020 | mahesh |

ಶಿಕಾರಿಪುರ: ಪಟ್ಟಣದ ತಾಪಂ ಸಭಾಂಗಣದಲ್ಲಿ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದಲ್ಲಿ ರೈಲ್ವೆ ಯೋಜನೆಗೆ ಭೂ ಸ್ವಾಧೀನ ಪಡಿಸಿಕೊಳ್ಳುವ ಸಲುವಾಗಿ ಭೂಮಿ ನೀಡುವ ರೈತರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಿಕಾರಿಪುರ- ರಾಣೆಬೆನ್ನೂರು- ಶಿವಮೊಗ್ಗ ರೈಲ್ವೆ ಯೋಜನೆಗೆ ಭೂಮಿ ನೀಡುವ ರೈತರಿಗೆ ಯಾವುದೇ ರೀತಿಯಲ್ಲಿ ಮೋಸ ಆಗುವುದಿಲ್ಲ ಎಂದು ಭರವಸೆ ನೀಡಿದರು. ರೈತ ಗುತ್ತಿ ಕನ್ನಪ್ಪ ಎಂಬುವವರು ಹಳಿಯೂರು ಭಾಗದ ಸರ್ವೆ ನಂ. 172 ರಲ್ಲಿ ಜಮೀನಿದ್ದು ಇಲ್ಲಿ ಜಮೀನು ಮಂಜೂರು ಆಗಿರುವುದು ಒಬ್ಬರಿಗೆ. ಪಹಣಿ ಆಗಿರುವುದು ಒಬ್ಬರಿಗೆ, ಪೋಡಿ ಆಗಿರುವುದು ಇನ್ನೊಬ್ಬರಿಗೆ. ಉಳುಮೆ ಮಾಡುತ್ತಿರುವುದು ಇನ್ನೊಬ್ಬರು. ಹೀಗಿರುವಾಗ ಭೂ ಸ್ವಾ ಧೀನ ಪ್ರಕ್ರಿಯೆ ನಡೆದ ಮೇಲೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಪ್ರಶ್ನಿಸಿದರು.

ತಾಲೂಕಿನ ಹಾರೋಗೊಪ್ಪ, ಎರೆಕಟ್ಟೆ, ದೂಪದಳ್ಳಿ, ಸದಾಶಿವಪುರ ತಾಂಡಾ, ಬೇಗೂರು ಸೇರಿದಂತೆ ಒಟ್ಟು 11 ಗ್ರಾಮಗಳಲ್ಲಿ ರೈಲ್ವೆ ಯೋಜನೆಗೆ ಭೂ ಸ್ವಾ
ಧೀನ ಪ್ರಕ್ರಿಯೆ ನಡೆಸಲಾಗುವುದು.ಈ ಗ್ರಾಮಗಳಲ್ಲಿ ಒಟ್ಟಾರೆಯಾಗಿ 277 ಎಕರೆ ಜಮೀನು ಸ್ವಾ ಧೀನ ಪ್ರಕ್ರಿಯೆಗೆ ಒಳ ಪಡಿಸಲಾಗುವುದು. ಇದರಲ್ಲಿ 73
ಎಕರೆ ಬಗರ್‌ಹುಕುಂ, 55 ಎಕರೆ ಸರ್ಕಾರಿ ಜಮೀನು, 10 ಎಕರೆ ಕಂದಾಯ ಇಲಾಖೆಯ ಜಮೀನು, 5.18 ಎಕರೆ ಶೃಂಗೇರಿ ಮಠದ ಜಮೀನು ಹೀಗೆ
ಜಮೀನುಗಳಿದ್ದು, ಇದರಲ್ಲಿ ಉಳುಮೆ ಮಾಡುವ ಎಲ್ಲಾ ರೈತರಿಗೂ ಮುಖ್ಯಮಂತ್ರಿ ಹಾಗೂ ತಾವು ಸೇರಿ ಅಧಿಕಾರಿಗಳ ಜೊತೆ ಸಮಾಲೋಚನಾ ಸಭೆ
ನಡೆಸಿ ಸೂಕ್ತ ಪರಿಹಾರ ಕೊಡಿಸಲು ಬದ್ಧರಾಗಿದ್ದೇವೆ  ಎಂದರು.

ತಾಲೂಕಿನ ನೀರಾವರಿ ಯೋಜನೆಗೆ ಹಿರೇಕೆರೂರು ತಾಲೂಕಿನಲ್ಲಿ ಸುಮಾರು 37 ಎಕರೆಯಷ್ಟು ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದ್ದು ಅಲ್ಲಿನ ಎಲ್ಲಾ ರೈತರು ಭೂಮಿಯನ್ನು ಮುಕ್ತ ಮನಸ್ಸಿನಿಂದ ಬಿಟ್ಟು ಕೊಡಲು ನಿರ್ಧರಿಸಿದ್ದಾರೆ. ಅದೇ ರೀತಿ ತಾಲೂಕಿನ ಅಭಿವೃದ್ಧಿಗೆ ರೈತರು ಸಹಕಾರ ನೀಡಬೇಕು ಎಂದರಲ್ಲದೆ, ಭೂ ಸ್ವಾ ಧೀನ ಪ್ರಕ್ರಿಯೆ ಸಮಯದಲ್ಲಿ ಅಡಕೆ, ತೆಂಗು, ಬಾಳೆ, ಗಂಧ ಈ ರೀತಿಯಾಗಿ ವಿವಿಧ ರೀತಿಯ ಬೆಳೆಗಳನ್ನು ಬೆಳೆದ ರೈತರಿಗೆ ಅವರವರ ಬೆಳೆಗಳಿಗನುಸಾರವಾಗಿ ಜಂಟಿ ಸರ್ವೆ ಕಾರ್ಯ ನಡೆಸಿ ಪರಿಹಾರ ನೀಡಲು ಪ್ರಯತ್ನ ನಡೆಸಲಾಗುವುದು ಎಂದರು.

ರೈತರು ಭೂಮಿಯನ್ನು ಬಿಟ್ಟು ಕೊಡಲಿ, ಕೊಡದಿರಲಿ. ಸರ್ಕಾರ ರೈಲ್ವೆ ಯೋಜನೆ ನಿಲ್ಲಿಸುವುದಿಲ್ಲ. ಭೂಮಿ ಬಿಟ್ಟು ಕೊಟ್ಟವರಿಗೆ, ಕೊಡದಿದ್ದವರಿಗೆ ಅವರವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದ ಅವರು, ಸ್ವಾತಂತ್ರ್ಯಾ ನಂತರ ಶಿವಮೊಗ್ಗಕ್ಕೆ ಮಾತ್ರ ಸೀಮಿತವಾಗಿದ್ದ ರೈಲ್ವೆ ಯೋಜನೆ ಉತ್ತರ ಕರ್ನಾಟಕಕ್ಕೂ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

Advertisement

ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್‌. ಗುರುಮೂರ್ತಿ, ರಾಜ್ಯ ಅರಣ್ಯ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಕೆ. ರೇವಣಪ್ಪ, ತಾಪಂ ಅಧ್ಯಕ್ಷ ಪ್ರಕಾಶ್‌ ಉಡುಗಣಿ, ಭೂ ಸ್ವಾ ಧೀನಾಧಿಕಾರಿ ಸರೋಜಮ್ಮ, ಸಾಗರ ಉಪ ವಿಭಾಗಾಧಿಕಾರಿ ಡಾ|ನಾಗರಾಜ್‌, ತಹಶೀಲ್ದಾರ್‌ ಕವಿರಾಜ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next