Advertisement

ಜೆಡಿಎಸ್‍-ಬಿಜೆಪಿ ವಿಲೀನದ ಬಗ್ಗೆ ತಲೆ ಕಡೆಸಿಕೊಳ್ಳೋಲ್ಲ –ಡಿ.ಕೆ.ಶಿವಕುಮಾರ್‍

09:18 PM Dec 22, 2020 | mahesh |

ಕನಕಪುರ: ಜೆಡಿಎಸ್‍- ಬಿಜೆಪಿ ವಿಲೀನದ ಬಗ್ಗೆ ತಾವು ತಲೆಕೆಡೆಸಿಕೊಳ್ಳುವುದಿಲ್ಲ ಎಂದು ಕನಕಪುರ ಶಾಸಕ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ ಮಾಧ್ಯಮಗಳಿಗೆ ಪ್ರತಿಕ್ರಯಿಸಿದ್ದಾರೆ.

Advertisement

ಗ್ರಾಮಪಂಚಾಯ್ತಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ದೊಡ್ಡಾಲಹಳ್ಳಿಯ ಮತಗಟ್ಟೆಗೆ ಪತ್ನಿ ಉಷಾ ಅವರೊಂದಿಗೆ ಆಗಮಿಸಿ ಮತಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವ ಪಕ್ಷವಾದರೂ ವಿಲೀನವಾಗಲು ಹೊಂದಾಣಿಕೆ ಮಾಡಿಕೊಳ್ಳಲ್ಲಿ, ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಜೆಡಿಎಸ್ ಪಕ್ಷದವರು ದಡ್ಡರಲ್ಲ ಅವರದ್ದೇ ಆದ ರಾಜಕೀಯ ಅನುಭವವಿದೆ ಅವರ ಪಕ್ಷದ ತೀರ್ಮಾನ ಅವರಿಗೆ ಬಿಟ್ಟಿದ್ದು ಏನು ಬೇಕಾದರೂ ಮಾಡಿಕೊಳ್ಳಲಿ. ಜೆಡಿಎಸ್ ಮತ್ತು ಬಿಜೆಪಿಗೆ ನಮಗೂ ಸಂಬಂಧವಿಲ್ಲ. ಈ ವಿಚಾರದಲ್ಲಿ ಪ್ರತಿಕ್ರಿಯಿಸುವ ಅಗತ್ಯವಿಲ್ಲ ನಮ್ಮ ಪಕ್ಷದಲ್ಲಿ ನಮ್ಮ ಮೇಲೆ ನಂಬಿಕೆ ಇರುವವರೊಂದಿಗೆ ಕೆಲಸ ಮಾಡುತ್ತೇವೆ, ಹೊಂದಾಣಿಕೆ ರಾಜಕಾರಣ ಯಾವುದು ಶಾಶ್ವತವಲ್ಲ, ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಎಂದರು.

ರಾಜಕಾರಣ ಎಂಬುವುದು ಅನುಭವದ ಕೆರೆ ಇದ್ದಂತೆ ನನ್ನ ಅನುಭವದ ಪ್ರಕಾರ ರಾಜಕಾರಣದಲ್ಲಿ ಯಾವುದೂ ಶಾಶ್ವತವಲ್ಲ ಎಂದರು.

ಗೆಲುವು-ಸೋಲು ಮುಖ್ಯವಲ್ಲ ಹಳ್ಳಿಗಳ ಜನರಿಗೆ ಅಧಿಕಾರ ಸಿಗಬೇಕು ಮೊದಲನೇ ಹಂತದ ಚುನಾವಣೆ ಬಹಳ ಉತ್ಸಾಹದಿಂದ ನಡೆಯುತ್ತಿದೆ ಹಾಗೆ ಎರಡನೆ ಹಂತದ ಚುನಾವಣೆಗೆ ಕೂಡ ಶಾಂತಿಯುತವಾಗಿ ನಡೆಸಿಕೊಡಬೇಕು. ಜನ ಹೆಚ್ಚು ಮತದಾನ ಮಾಡಬೇಕು. ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಒಂದೇ ಬಾರಿ ನಡೆಸಬಹುದಿತ್ತು ಸರ್ಕಾರ ಅದರ ಬಗ್ಗೆ ಚಿಂತನೆ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಈ ಸಂದಭರ್ದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ರವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next