Advertisement

ತಾಲಿಬಾನ್ ಕ್ರೌರ್ಯಕ್ಕೆ ಬೆಚ್ಚಿದ ಅಫ್ಗಾನ್ : ಭಯದಲ್ಲಿ ಬೆಂದು ಹೋಗುತ್ತಿವೆ ಹೆಣ್ಣು ಜೀವಗಳು  

05:29 PM Aug 17, 2021 | Team Udayavani |

ಕಾಬೂಲ್: ಉಗ್ರರ ಅಟ್ಟಹಾಸಕ್ಕೆ ಅಫ್ಗಾನಿಸ್ತಾನ್ ಇಂದು ಅಕ್ಷರಶಃ ಬೆಂದು ಹೋಗಿದೆ. ತಾಲಿಬಾನಿಗಳ ಕೈಗೆ ಅಧಿಕಾರ ಹಸ್ತಾಂತರವಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳಲ್ಲಿ ನಡುಕ ಶುರುವಾಗಿದ್ದು, ದೇಶ ಬಿಟ್ಟು ಪಲಾಯನ ಮಾಡುತ್ತಿದ್ದಾರೆ.

Advertisement

ಆಗಸ್ಟ್ 15 ರಂದು ಕಾಬೂಲ್ ವಶಕ್ಕೆ ಪಡೆದ ತಾಲಿಬಾನ್ ಉಗ್ರರು ಷರಿಯಾ ಕಾನೂನಡಿ ಆಡಳಿತ ನಡೆಸಲು ಮುಂದಾಗಿದ್ದಾರೆ.ಪರಿಣಾಮ ಕಳೆದ 20 ವರ್ಷಗಳ ಹಿಂದೆ ಎದುರಿಸದ್ದ ಕರಾಳ ದಿನಗಳು ಮತ್ತೆ ಮರುಕಳಿಸುತ್ತವೆ ಎನ್ನುವ ಭಯ ಶುರುವಾಗಿದೆ. ಅದರಲ್ಲೂ ಅಲ್ಲಿಯ ಹೆಣ್ಣು ಮಕ್ಕಳು ಭಯದ ಕುಲುಮೆಯಲ್ಲಿ ಬೆಂದು ಹೋಗುತ್ತಿವೆ.

ಈ ಮೊದಲು ತನ್ನ ಹಿಡಿತದಲ್ಲಿದ್ದ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಷರಿಯಾ ಕಾನೂನಿನ ಕಠಿಣ ರೂಪವನ್ನು ಜಾರಿಗೊಳಿಸಿತ್ತು. ಮಹಿಳೆಯರು ಕೆಲಸ ಮಾಡುವುದನ್ನು ಅಥವಾ ಅಧ್ಯಯನ ಮಾಡುವುದನ್ನು ನಿರ್ಬಂಧಿಸಿತ್ತು. ಮಹಿಳೆಯರು ಒಬ್ಬಂಟಿಯಾಗಿ ಮನೆಬಿಟ್ಟು ಹೊರಬರುವಂತಿರಲಿಲ್ಲ. ಒಂದು ವೇಳೆ ತಮ್ಮ ಕಾನೂನನ್ನು ಉಲ್ಲಂಘಿಸಿದ ಮಹಿಳೆಯರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತಿತ್ತು. ಸಾರ್ವಜನಿಕವಾಗಿ ಮರಣದಂಡನೆ ಮತ್ತು ಚಾಟಿ ಏಟಿನ ಶಿಕ್ಷೆ ನೀಡುವುದು ಸಾಮಾನ್ಯವಾಗಿತ್ತು. ಅಂದಿನ ಕರಾಳ ದಿನಗಳು ಇದೀಗ ಮತ್ತೆ ಮರುಕಳಿಸುವ ಸಾಧ್ಯತೆ ಇರುವುದರಿಂದ ಅಲ್ಲಿಯ ಹೆಣ್ಣು ಜೀವಗಳು ಆತಂಕದಲ್ಲಿವೆ. ನಮ್ಮ ಜೀವಗಳಿಗೆ ರಕ್ಷಣೆ ಇಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ.

Advertisement

ತಾಲಿಬಾನಿಗಳ ಮೊದಲ ದಿನದ ಆಡಳಿತಾವಧಿಯಲ್ಲಿಯೇ ದೇಶದಲ್ಲಿ ಪ್ರಮುಖ ಬದಲಾವಣೆಗಳು ಕೂಡ ನಡೆದಿವೆ. ಕಠಿಣ ಶಿಕ್ಷೆಗೆ ಗುರಿಯಾಗುವ ಭೀತಿಯಿಂದ ಬ್ಯುಟಿ ಪಾರ್ಲರ್, ಸಲೂನ್, ಬಟ್ಟೆ, ಆಭರಣ, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಹಲವು ಮಳಿಗೆಗಳ ಮುಂದೆ ಹಾಕಲಾಗಿದ್ದ ಮಹಿಳೆಯ ಫೋಟೊಗಳನ್ನು ತೆಗೆದು ಹಾಕಲಾಗುತ್ತಿದೆ. ಕೆಲವು ಟಿವಿ ವಾಹಿನಿಗಳು ಈ ಮೊದಲು ಪ್ರಸಾರ ಮಾಡುತ್ತಿದ್ದ ಧಾರವಾಹಿಗಳನ್ನು ಬದಲಿಸದ್ದು, ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾತ್ರ ಬಿತ್ತರಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next