Advertisement

ಪೆಟ್ರೋಲ್‌, ಪಡಿತರ ಸಾಮಗ್ರಿ ಬೇಕಾದರೆ ಲಸಿಕೆ ಕಡ್ಡಾಯ

07:06 PM Nov 10, 2021 | Team Udayavani |

ಔರಂಗಾಬಾದ್‌: “ಪೆಟ್ರೋಲ್‌ ಬೇಕಾ? ಪಡಿತರ ಸಾಮಗ್ರಿಗಳು ಸಿಗಬೇಕೇ? ಹಾಗಿದ್ದರೆ, ಕಡ್ಡಾಯವಾಗಿ 2 ಡೋಸ್‌ ಲಸಿಕೆ ಹಾಕಿಸಿಕೊಳ್ಳಲೇಬೇಕು’ ಹೀಗೆಂದು ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

Advertisement

ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ ಲಸಿಕೆ ಹಾಕಿಸುವಲ್ಲಿ ಜಿಲ್ಲೆ 26ನೇ ಸ್ಥಾನದಲ್ಲಿದೆ. ಮಾಸಾಂತ್ಯದ ಒಳಗಾಗಿ ರಾಜ್ಯ ಸರ್ಕಾರ ಶೇ.100 ಲಸಿಕೆ ಹಾಕಿಸಿ, ಸಾಧನೆ ಮಾಡುವ ಗುರಿ ಹಾಕಿಕೊಂಡಿದೆ. ಹೀಗಾಗಿ, ಹೊಟೇಲ್‌ ಕೆಲಸಗಾರರು, ರೆಸಾರ್ಟ್‌, ಪ್ರವಾಸಿ ಸ್ಥಳಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಎಲ್ಲರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಇದು ನ.9ರಿಂದಲೇ ಜಾರಿಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ಚಾರ್ಮಾಡಿ ಘಾಟ್ ನಲ್ಲಿ ಕಂದಕಕ್ಕೆ ಉರುಳಿದ ಮದುವೆ ವಾಹನ: ತಪ್ಪಿದ ದೊಡ್ಡ ದುರಂತ

ಇತ್ತೀಚೆಗೆ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ, ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಆದ್ಯತೆಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದ್ದರು. ಹೀಗಾಗಿ, ತ್ವರಿತಗತಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಸಿಎಂ ಉದ್ಧವ್‌ ಠಾಕ್ರೆ ಕೂಡ ಜಿಲ್ಲೆಗಳಲ್ಲಿನ ನಿಧಾನಗತಿಯ ಬಗ್ಗೆ ಚಿಂತೆ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next