Advertisement

ಸದ್ಯಕ್ಕೆ ಸರ್ಕಾರಿ ಬಸ್ ಟಿಕೆಟ್ ದರ ಏರಿಕೆ ಇಲ್ಲ : ಲಕ್ಷ್ಮಣ ಸವದಿ

02:22 PM Jul 06, 2021 | Team Udayavani |

ಮೈಸೂರು : ಸದ್ಯಕ್ಕೆ KSRTC ಬಸ್ ದರ ಏರಿಕೆ ಇಲ್ಲ. ಕೋವಿಡ್ ನಿಂದ ನಿಗಮಕ್ಕೆ ನಷ್ಟ ಆಗಿರೋದು ಸತ್ಯ. ಆದರೆ ಜನರು ಸಹ ಆರ್ಥಿಕ ಸಂಕಷ್ಟದಲ್ಲಿ ಇದ್ದಾರೆ. ಈ ವೇಳೆ ಬಸ್‌ ಟಿಕೆಟ್ ಗಳ ದರ ಏರಿಕೆ ಸದ್ಯಕ್ಕೆ ಬೇಡ ಎಂದು ತೀರ್ಮಾನಿಸಿದ್ದೇವೆ ಎಂದು ಮೈಸೂರಿನಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.

Advertisement

ಮತ್ತೊಮ್ಮೆ ನೌಕರರ ಮುಷ್ಕರದ ಎಚ್ಚರಿಕೆ ವಿಚಾರವಾಗಿ ಮಾತನಾಡಿದ ಅವರು, 9 ಬೇಡಿಕೆಯಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ವೇತನ ಪರಿಷ್ಕರಣೆ ಸದ್ಯದ ಪರಿಶೀಲನೆ ಆಗಲ್ಲ. ಸರ್ಕಾರಕ್ಕೆ ಬರುತ್ತಿರುವ ಹಣ ನಿಗಮದ ನಿರ್ವಹಣೆಗೆ ಕಷ್ಟ ಇದೆ. ಹಾಗಾಗಿ ಸದ್ಯಕ್ಕೆ ವೇತನ ಹೆಚ್ಚಳ ಕಷ್ಟ ಎಂದರು.

ಇನ್ನು ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರವಾಘಿ ಪ್ರತಿಕ್ರಿಯೆ ನೀಡಿದ ಸವದಿ, ಅದು ಕೆಲ ಶಾಸಕರ ವೈಯಕ್ತಿಕ ಅಭಿಪ್ರಾಯ ಅಷ್ಟೇ. ಆದರೆ ಹೈಕಮಾಂಡ್ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಕೆಲವರು ಅಲ್ಲಿ ಇಲ್ಲಿ ಮಾತನಾಡುತ್ತಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ಅಭಿಪ್ರಾಯ ಅಲ್ಲ ಎಂದುರು.

Advertisement

Udayavani is now on Telegram. Click here to join our channel and stay updated with the latest news.

Next