Advertisement

ನಾಳೆಯಿಂದ ಬಿಬಿಎಂಪಿಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಹಿಂದಿನ ಪದ್ಧತಿಯಂತೆ ಅಹಾರ ವಿತರಣೆ

08:59 AM Apr 04, 2020 | Hari Prasad |

ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿಯಲ್ಲಿ ಮಾರ್ಚ್ 23ರಿಂದ ಕಟ್ಟಡ, ಕೂಲಿ ಕಾರ್ಮಿಕರು, ವಲಸಿಗರು ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ಇಂದಿರಾ ಕ್ಯಾಂಟೀನ್ ಗಳಲ್ಲಿ ಆಹಾರವನ್ನು ಸರಬರಾಜು ಮಾಡಲಾಗುತ್ತಿತ್ತು.

Advertisement

ಈ ನಡುವೆ ಕಟ್ಟಡ/ಕೂಲಿ ಕಾರ್ಮಿಕರು, ವಲಸಿಗರು ಹಾಗೂ ಅಗತ್ಯವಿರುವವರಿಗೆ ಅಹಾರ ಪದಾರ್ಥಗಳು (Food grains Kit ) ಸರ್ಕರವು ಒದಗಿಸುತ್ತಿದ್ದು, ಹಾಗೂ ಹಲವಾರು ಸ್ವಯಂ ಸೇವಾ ಸಂಸ್ಥೆಗಳು ಅಹಾರವನ್ನು ಸರಬರಾಜು ಮಾಡುತ್ತಿರುವ ಹಿನ್ನಲೆ ಮತ್ತು ಸರ್ಕಾರದ ವತಿಯಿಂದ ಸುಮಾರು 15 ಲಕ್ಷ ಕಟ್ಟಡ/ಕೂಲಿ ಕಾರ್ಮಿಕರಿಗೆ ರೂ.2,000 ಮೊತ್ತದ ನಗದು ಸಹಾಯ ಧನ ಹಾಗೂ ಅಹಾರ ಮತ್ತು ನಾಗರೀಕ ಸರಬರಾಜು ಇಲಾಖಾ ವತಿಯಿಂದ ಪ್ರತಿ ಕೂಲಿ ಕಾರ್ಮಿಕರು/ಬಡ ಕುಟುಂಬಗಳಿಗೆ 2 ತಿಂಗಳಿಗೆ ಸಾಕಾಗುವಷ್ಟು ಅಹಾರ ಪದಾರ್ಥ ಪೂರೈಕೆ ಮಾಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ನಾಳೆಯಿಂದ ಬಿಬಿಎಂಪಿಯ ಇಂದಿರಾ ಕ್ಯಾಂಟೀನ್ ಗಳಲ್ಲಿ ಈ ಹಿಂದೆ ಇದ್ದ ಪದ್ಧತಿಯಂತೆ ಬೆಳಗ್ಗಿನ ಉಪಹಾರಕ್ಕೆ ರೂ.5- ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ರೂ. 10 ಗಳನ್ನು ನೀಡಿ ಇಂದಿರಾ ಕ್ಯಾಂಟೀನ್ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಟೋಕನ್ ಗಳನ್ನು ಪಡೆದು ಅಹಾರದ ಪೊಟ್ಟಣಗಳನ್ನು ವಿತರಿಸಲಾಗುವುದೆಂದು ಮಾನ್ಯ ಆಯುಕ್ತರುರವರು ತಿಳಿಸಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next