Advertisement

ರಾಷ್ಟ್ರೀಯ ಸುರಕ್ಷಾ ಹಾರಾಟ ನಿಷೇಧ: ಭಾರತ ವಿಶ್ವದ ಮೊದಲ ದೇಶ

03:22 PM Sep 08, 2017 | udayavani editorial |

ಹೊಸದಿಲ್ಲಿ  : ಸುರಕ್ಷೆಯ ನೆಲೆಯಲ್ಲಿ  ರಾಷ್ಟ್ರೀಯ ಹಾರಾಟ ನಿಷೇಧ ಪಟ್ಟಿಯನ್ನು ಹೊಂದಿರುವ ವಿಶ್ವದ ಮೊದಲ ದೇಶ ಭಾರತ ಎನಿಸಲಿದೆ. ಆ ದಿಶೆಯಲ್ಲಿ  ಹಾರಾಟ ನಿಷೇಧಕ್ಕೆ ಗುರಿಯಾಗುವ ಮೂರು ಹಂತಗಳ ದುರ್ವರ್ತನೆಯನ್ನು ಭಾರತ ಪಟ್ಟಿ ಮಾಡಿದೆ. 

Advertisement

1. ಮೊದಲ ಹಂತ : ಮಾತಿನ ಮೂಲಕ ತೋರುವ ದುರ್ನಡತೆ : ಮಾತುಗಳ ಮೂಲಕ, ದೈಹಿಕ ಹಾವಭಾವಗಳ ಮೂಲಕ, ಬೈಗುಳನ್ನು ಆಡುವ ಮೂಲಕ, ಅಮಲು ದುರ್ವರ್ತನೆ ತೋರುವುದು. ಶಿಕ್ಷೆಯ ಪ್ರಮಾಣ : ಮೂರು ತಿಂಗಳ ವರೆಗಿನ ಹಾರಾಟ ನಿಷೇಧ.

2 ಎರಡನೇ ಹಂತ : ದೈಹಿಕ ದುರ್ನಡೆ : ದೈಹಿಕವಾಗಿ ದುರ್ನಡತೆ ತೋರುವುದು – ದೂಡುವುದು, ಕಾಲಿನಿಂದ ಒದೆಯುವುದು, ಗುದ್ದುವುದು, ಅನುಚಿತವಾದ ರೀತಿಯಲ್ಲಿ ಮೈ ಮುಟ್ಟಿ ಬೆದರಿಕೆ ಒಡ್ಡುವುದು.

ಶಿಕ್ಷೆಯ ಪ್ರಮಾಣ : ಆರು ತಿಂಗಳ ಹಾರಾಟ ನಿಷೇಧ.

3. ಮೂರನೇ ಹಂತ : ಜೀವ ಬೆದರಿಕೆ ಒಡ್ಡುವ ದುರ್ವರ್ತನೆ ತೋರುವುದು : ಜೀವ ಬೆದರಿಕೆ ಒಡ್ಡುವ ರೀತಿಯಲ್ಲಿ ಹಲ್ಲೆ ಮಾಡುವುದು; ವಿಮಾನಕ್ಕೆ ಹಾನಿಯುಂಟು ಮಾಡುವುದು, ಇತ್ಯಾದಿ.

Advertisement

ಶಿಕ್ಷೆಯ ಪ್ರಮಾಣ : ಕನಿಷ್ಠ 2 ವರ್ಷ ಅಥವಾ ಅದಕ್ಕೂ ಹೆಚ್ಚಿನ ಅವಧಿಗೆ, ಯಾವುದೇ ಮಿತಿ ಇಲ್ಲದೆ, ಹಾರಾಟ ನಿಷೇಧ ಹೇರುವುದು. 

ಹಾರಾಟ ನಿಷೇಧ ಹೇರುವುದರ ಹಿಂದಿನ ಉದ್ದೇಶ ಪ್ರಯಾಣಿಕರ ಸುರಕ್ಷೆ, ಭದ್ರತೆಯನ್ನು ಆದ್ಯತೆ ಮೇಲೆ ಕಾಯ್ದುಕೊಳ್ಳುವುದೇ ಆಗಿದೆ ಎಂದು ಕೇಂದ್ರ ಸಹಾಯಕ ವಾಯು ಯಾನ ಸಚಿವ ಜಯಂತ್‌ ಸಿನ್ಹಾ ಹೇಳಿದ್ದಾರೆ. 

ಆರೋಪಿತ ಅಪರಾಧ ಎಸಗಲಾದ 30 ದಿನಗಳ ಒಳಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರಡಿ ಸ್ವತಂತ್ರ ಸಮಿತಿಯ ಮೂಲಕ ಶಿಕ್ಷೆಯ ಕುರಿತಾದ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ನಾಗರಿಕ ವಾಯು ಯಾನ ಸಚಿವ ಅಶೋಕ್‌ ಗಜಪತಿ ರಾಜು ಟ್ಟಿàಟ್‌ ಮೂಲಕ ಹೇಳಿದ್ದಾರೆ. 

ಹಾಲಿ ಕಾನೂನುಗಳಡಿ ಆರೋಪಿ ವಿರುದ್ಧ ಶಾಸನಾತ್ಮಕ ಕಾನೂನು ಕ್ರಮಗಳಿಗೆ ಹೆಚ್ಚುವರಿಯಾಗಿ ಹಾರಾಟ ನಿಷೇಧ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next