Advertisement

ರಾಜನಾಥ್‌ ಎದುರು ಸ್ಪರ್ಧಿಸಲು ಹೆದರಿಕೆ ಇಲ್ಲ : ಎಸ್‌ಪಿ ಅಭ್ಯರ್ಥಿ ಪೂನಂ ಸಿನ್ಹಾ

09:02 AM Apr 20, 2019 | Team Udayavani |

ಲಕ್ನೋ : ಕೇಂದ್ರ ಗೃಹ ಸಚಿವ ಹಾಗೂ ಲಕ್ನೋ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ‘ರಾಜನಾಥ್‌ ಸಿಂಗ್‌ ಎದುರು ಸ್ಪರ್ಧಿಸಲು ನನಗೆ ಯಾವುದೇ ಭಯ ಇಲ್ಲ’ ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅವರ ಪತ್ನಿ ಪೂನಂ ಸಿನ್ಹಾ ಹೇಳಿದ್ದಾರೆ.

Advertisement

ನಿನ್ನೆ ಗುರುವಾರ ಪೂನಂ ಅವರು, ಪತಿ ಶತ್ರುಘ್ನ ಸಿನ್ಹಾ ಜತೆಗೂಡಿ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲಕ್ನೋ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಲು ತಮ್ಮ ನಾಮಪತ್ರ ಸಲ್ಲಿಸಿದರು.

ಲಕ್ನೋ ಲೋಕಸಭಾ ಕ್ಷೇತ್ರಕ್ಕೆ ಐದನೇ ಹಂತದಲ್ಲಿ ಮೇ 6ರಂದು ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next