Advertisement
ಈಗಾಗಲೇ ಕೋವಿಡ್ ಲಾಕ್‌ಡೌನ್‌ನಿಂದ ಶಾಲಾ-ಕಾಲೇಜುಗಳು ವರ್ಷಗಟ್ಟಲೆ ಮುಚ್ಚಿದ್ದ ಹಿನ್ನೆಲೆ ಮನೆಯಲ್ಲೇ ಕುಳಿತು ಬೇಸವಾಗಿದ್ದು, ದಿನಪೂರ್ತಿ ಮನೆಯಲ್ಲಿರಲು ಆಗುವುದಿಲ್ಲ. ಜೊತೆಗೆ ಆನ್‌ಲೈನ್‌ತರಗತಿಗಳಿಗೆ ನಾವು ಹೊಂದಿಕೊಳ್ಳಲಾಗುತ್ತಿಲ್ಲಎಂಬುದು ಗ್ರಾಮಾಂತರ ಮತ್ತು ನಗರ ಪ್ರದೇಶದ ವಿದ್ಯಾರ್ಥಿಗಳ ಅಳಲು.
Related Articles
Advertisement
ಶಾಲಾ-ಕಾಲೇಜುಗಳಲ್ಲಿ ಎಸ್‌ಒಪಿ ಪಾಲನೆಗೆ ಸೂಚನೆ: ಜಿಲ್ಲಾದ್ಯಂತ ಎಲ್ಲಾ ಶಾಲಾ-ಕಾಲೇಜುಗಳಲ್ಲಿ
ಕೋವಿಡ್ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸ್ಯೂಜರ್ (ಮಾಸ್ಕ್ ಬಳಕೆ, ಸಾಮಾಜಿಕ ಅಂತರಪಾಲನೆ, ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್‌ಪ್ರಕ್ರಿಯೆ) ನಡೆಸುವಂತೆ ಜಿಲ್ಲಾಡಳಿತ ಶಿಕ್ಷಣ ಇಲಾಖೆಗೆಸೂಚನೆ ನೀಡಿದ್ದು, ಅದರಂತೆ ಮತ್ತೆ ಎಲ್ಲಾಶಾಲಾ-ಕಾಲೇಜುಗಳಲ್ಲಿ ಎಸ್‌ಒಪಿ ಪ್ರಕ್ರಿಯೆ ಪುನಾರಂಭಗೊಂಡಿದೆ.
ಎಸ್‌ಒಪಿ ವೇಳೆ ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು ಅಥವಾ ದೇಹದಲ್ಲಿ ಉಷ್ಣಾಂಶ ಹೆಚ್ಚಿದ್ದರೆ ಅವರನ್ನೂಕೂಡಲೇ ಕೋವಿಡ್ ಟೆಸ್ಟ್‌ಗೆ ಒಳಪಡಿಸಿ, ತರಗತಿಯನ್ನು ಸ್ಯಾನಿಟೈಸ್ ಮಾಡಲು ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದ್ದು, ತಮ್ಮ ವ್ಯಾಪ್ತಿಯಶಾಲೆಗಳಲ್ಲಿ ಕೋವಿಡ್ ಪ್ರಕರಣ ಪತ್ತೆಯಾದಲ್ಲಿ ಪರಿಸ್ಥಿತಿ ಅವಲೋಕಿಸಿ ಅಂತಹ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗೆ ನೀಡಲಾಗಿದೆ.
ಜೊತೆಗೆ ಒಂದು ಕೊಠಡಿಯಲ್ಲಿ 20 ಮಕ್ಕಳುಮೀರದಂತೆ ತರಗತಿ ನಡೆಸುವುದು, ಬಿಸಿ ನೀರಿನವ್ಯವಸ್ಥೆ, ಶೌಚಾಲಯ ಶುಚಿತ್ವ ಕಾಪಾಡಿಕೊಳ್ಳುವುದುಸೇರಿ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುವಮೂಲಕ ಕೋವಿಡ್ ಸೋಂಕು ಹರಡದಂತೆ ಶಿಕ್ಷಣ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.
ಕೋವಿಡ್ ಎರಡನೇ ಅಲೆ ಹಿನ್ನೆಲೆ ಜಿಲ್ಲೆಯಾ ಎಲ್ಲಾ ಶಾಲೆಗಳಲ್ಲೂ ಸ್ಟಾಂಡರ್ಡ್ ಆಪರೇಟಿಂಗ್‌ಪ್ರೊಸ್ಯೂಜರ್ ಪಾಲನೆ ಮಾಡಲಾಗುತ್ತಿದ್ದು, ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರುವಮಕ್ಕಳನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸ ಲಾಗುವುದು. ಮಕ್ಕಳಿಗೆ ಸೋಂಕುಹರಡದಂತೆ ಮುಂಜಾಗ್ರತ ಕ್ರಮಗಳನ್ನುಕೈಗೊಳ್ಳಲಾಗಿದ್ದು, ಪೋಷಕರು ತಮ್ಮಮಕ್ಕಳನ್ನು ಭಯ ಪಡದೆ ಶಾಲೆಗೆ ಕಳುಹಿಸಬಹುದು. – ಡಾ.ಪಾಂಡುರಂಗ, ಡಿಡಿಪಿಐ ಮೈಸೂರು
– ಸತೀಶ್ ದೇಪುರ