Advertisement

ಬೊಜ್ಜು ಬೇಡಾ…

06:00 AM Sep 19, 2018 | |

ಬೊಜ್ಜು ಖಾಯಿಲೆಯೋ, ಸಮಸ್ಯೆಯೋ ಎಂಬ ಚರ್ಚೆ ನಡೆದೇ ಇದೆ. ಅದೇನೇ ಇದ್ದರೂ ಬೊಜ್ಜು ಮಂಡಿನೋವು, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ಮಧುಮೇಹ ಮುಂತಾದ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ. ಮನುಷ್ಯ ತನ್ನ ಅನುಕೂಲಕ್ಕೆ, ಪ್ರಯಾಣಕ್ಕೆ ಹಲವು ಯಂತ್ರೋಪಕರಣಗಳನ್ನು ಅವಲಂಬಿಸಿದ್ದಾನೆ. ಇದರಿಂದ ದೇಹಕ್ಕೆ ಅಗತ್ಯ ವ್ಯಾಯಾಮ ಸಿಗುತ್ತಿಲ್ಲ. ಅಲ್ಲದೆ ಬದಲಾದ ಆಹಾರಪದ್ಧತಿಯೂ ಬೊಜ್ಜಿಗೆ ಕಾರಣವಾಗಿದೆ. 

Advertisement

ದೇಹಕ್ಕೆ ಅಗತ್ಯ ಇದ್ದಷ್ಟು ಆಹಾರಪೂರೈಕೆಯಾದ ಬಳಿಕ ಲೆಪ್ಟಿನ್‌ ಎಂಬ ಹಾರ್ಮೋನು ಇನ್ನು ಹೆಚ್ಚಿನ ಆಹಾರದ ಸೇವನೆ ಬೇಡ ಎಂದು ಮೆದುಳಿಗೆ ಸೂಚನೆಯನ್ನು ರವಾನಿಸುತ್ತದೆ. ಇದರಿಂದ ಹೊಟ್ಟೆ ತುಂಬಿದ ಅನುಭವ ನಮಗಾಗುತ್ತದೆ. ಆಗ ನಾವು ಆಹಾರದ ಸೇವನೆಯನ್ನು ನಿಲ್ಲಿಸುತ್ತೇವೆ. ಆದರೆ ಲೆಪ್ಟಿನ್‌ ಮೂಲಕ ಮಿದುಳಿಗೆ ಸಂದೇಶ ರವಾನೆಯಾಗದಿದ್ದಲ್ಲಿ ನಾವು ಅತ್ಯಧಿಕ ಆಹಾರ ಸೇವಿಸುತ್ತಾ ಹೋಗುತ್ತೇವೆ. 

ಬೊಜ್ಜಿನಿಂದ ಮುಕ್ತಿ ಪಡೆಯಲು ಇಲ್ಲಿನ ಸಲಹೆಗಳನ್ನು ಪಾಲಿಸಬಹುದು.
1. ಹೊಟ್ಟೆ ಬಿರಿಯುವಂತೆ ಆಹಾರ ಸೇವಿಸಬಾರದು.
2. ಅತಿಯಾದ ನಿದ್ರೆ ಮಾಡಬಾರದು. 
3. ಉಗುರು ಬೆಚ್ಚಗಿನ ನೀರಿಗೆ ಜೇನುತುಪ್ಪ ಬೆರೆಸಿ ಖಾಲಿ ಹೊಟ್ಟೆಗೆ ಕುಡಿಯಿರಿ ಇದರಿಂದ ಬೊಜ್ಜು ಕರಗುವುದು.
4. ಊಟ ಮಾಡುವುದಕ್ಕೆ ಮೊದಲು ಸುಮಾರು ಎರಡು ಚಮಚಗಳ ಜೇನುತುಪ್ಪವನ್ನು ಸೇವಿಸುವುದರಿಂದ ಬೊಜ್ಜು ಕರಗುವುದು. 
5. ಪ್ರತಿದಿನ ಬೆಳ್ಳುಳ್ಳಿಯ ಸೇವನೆಯಿಂದ ದೇಹದ ಕೊಬ್ಬನ್ನು ನಿವಾರಿಸಿಕೊಳ್ಳಬಹುದು. 
6. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮೊಸರಿನ ಸೇವನೆ ಒಳ್ಳೆಯದು.
8. ರಾತ್ರಿಯ ಊಟಕ್ಕೆ ಅನ್ನ ಸೇವಿಸದೇ ಒಣ ಚಪಾತಿಯನ್ನು ಸೇವಿಸಿದರೆ ಒಳ್ಳೆಯದು. 
9. ಎಣ್ಣೆಯಲ್ಲಿ ಕರಿದ ತಿಂಡಿ ತಿನಿಸುಗಳಿಂದ ದೂರವಿರಿ.
10. ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ

ಹರ್ಷಿತಾ ಕುಲಾಲ್‌ ಕಾವು

Advertisement

Udayavani is now on Telegram. Click here to join our channel and stay updated with the latest news.

Next