Advertisement

Jharkhand; ಕಾನ್ಸ್‌ಟೇಬಲ್‌ ನೇಮಕಾತಿ ಪರೀಕ್ಷೆಯಲ್ಲಿ 12 ಸಾವು; ಮುಳುವಾಯಿತಾ ಬದಲಾದ ನಿಯಮ

10:39 AM Sep 08, 2024 | Team Udayavani |

ರಾಂಚಿ: ಜಾರ್ಖಂಡ್ ನಲ್ಲಿ ಈ ವರ್ಷದ ಅಬಕಾರಿ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಗಾಗಿ (Excise Constable Recruitment Exam) ನೇಮಕಾತಿ ದೈಹಿಕ ಪರೀಕ್ಷೆಯ ಸಮಯದಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ.

Advertisement

ಈ ಬಾರಿ ಅಬಕಾರಿ ಕಾನ್ಸ್‌ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ ಮೌಲ್ಯಮಾಪನದಲ್ಲಿ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿಗಳು 1.6 ಕಿಮೀ ಬದಲಿಗೆ 10 ಕಿಮೀ ಓಡಬೇಕು, ಫಿಟ್‌ನೆಸ್ ಮಟ್ಟವನ್ನು ಮೌಲ್ಯಮಾಪನ ಮಾಡದಿರುವುದು, ಅತಿಯಾದ ಆರ್ದ್ರತೆ ಮತ್ತು ಲಿಖಿತ ಪರೀಕ್ಷೆಯ ಮೊದಲು ದೈಹಿಕ ಪರೀಕ್ಷೆಗಳನ್ನು ನಡೆಸುವ ನಿರ್ಧಾರದಿಂದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಉನ್ನತ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.

ಪರೀಕ್ಷೆಗೆ ಕಡ್ಡಾಯವಾಗಿರುವ 10 ಕಿಮೀ ಓಟವನ್ನು ಓಡುವಾಗ 12 ಮಂದಿ ಸಾವನ್ನಪ್ಪಿದ್ದಾರೆ. ಆಗಸ್ಟ್ 22 ರಿಂದ ಜಾರ್ಖಂಡ್ ಪೊಲೀಸರು ಮೇಲ್ವಿಚಾರಣೆಯಲ್ಲಿ ದೈಹಿಕ ಪರೀಕ್ಷೆಗಳು ನೇಮಕಾತಿ ಡ್ರೈವ್‌ ನ ಮೊದಲ ಹಂತ ನಡೆಯುತ್ತಿದೆ. 60 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಅರ್ಹ ಅಭ್ಯರ್ಥಿಗಳು ನಂತರ ಲಿಖಿತ ಪರೀಕ್ಷೆ ಮತ್ತು ಅಂತಿಮ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ.

ಮೃತರನ್ನು 19 ರಿಂದ 31 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದ್ದು, ಪಲಾಮು ಮೂಲದ ಅಮರೇಶ್ ಕುಮಾರ್, ಪ್ರದೀಪ್ ಕುಮಾರ್, ಅಜಯ್ ಮಹತೋ, ಅರುಣ್ ಕುಮಾರ್ ಮತ್ತು ದೀಪಕ್ ಕುಮಾರ್ ಪಾಂಡು; ಹಜಾರಿಬಾಗ್‌ ನ ಮನೋಜ್ ಕುಮಾರ್ ಮತ್ತು ಸೂರಜ್ ಕುಮಾರ್ ವರ್ಮಾ; ಸಾಹಿಬ್‌ಗಂಜ್‌ ನ ವಿಕಾಸ್ ಲಿಂಡಾ ಮತ್ತು ಗಿರಿದಿಹ್‌ ನ ಸುಮಿತ್ ಯಾದವ್. ಇನ್ನು ಮೂವರ ವಿವರಗಳನ್ನು ಇದುವರೆಗೂ ಬಹಿರಂಗಪಡಿಸಿಲ್ಲ. ಸೆಪ್ಟೆಂಬರ್ 2ರವರೆಗೆ ಒಟ್ಟು 1.87 ಲಕ್ಷ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 1.17 ಲಕ್ಷ ಮಂದಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

ಸರ್ಕಾರಿ ಮೂಲಗಳ ಪ್ರಕಾರ, ಜಾರ್ಖಂಡ್ ರಾಜ್ಯವು 2000 ರಲ್ಲಿ ರಚನೆಯಾದ ನಂತರ ಇದೇ ಮೊದಲ ಬಾರಿಗೆ ನೇಮಕಾತಿ ಅಭಿಯಾನವನ್ನು ನಡೆಸಲಾಗಿದೆ. 2008 ಮತ್ತು 2019 ರಲ್ಲಿ ಪ್ರಾರಂಭಿಸಲಾಯಿತಾದರೂ ಅದು ಪೂರ್ಣಗೊಂಡಿರಲಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next