Advertisement

ಪವಿತ್ರಾ ಗೌಡಗೆ ಪುತ್ರಿಯಿಂದ ಇನ್‌ಸ್ಟಾದಲ್ಲಿ ಅಪ್ಪಂದಿರ ದಿನದ ಶುಭಾಶಯ!

12:37 AM Jun 18, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿ ಬಂಧನಕ್ಕೊಳಗಾಗಿರುವ ನಟಿ ಪವಿತ್ರಾ ಗೌಡಳ ಮಗಳು ಖುಷಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಸ್‌ನಲ್ಲಿ ತಮ್ಮ ತಾಯಿಯೊಂದಿಗಿರುವ ವೀಡಿಯೋವೊಂದನ್ನು ಹಂಚಿಕೊಂಡು ಅಪ್ಪಂದಿರ ದಿನದ ಶುಭಾಶಯವನ್ನು ಹೇಳಿದ್ದಾರೆ.

Advertisement

ಪವಿತ್ರಾಳ ಇನ್‌ಸ್ಟಾ ಗ್ರಾಂ ಖಾತೆಯ ವಿಳಾಸವನ್ನು ಹ್ಯಾಷ್‌ ಟ್ಯಾಗ್‌ ಮಾಡಿ ನನ್ನ ಸರ್ವಸ್ವವಾಗಿರುವ ನಿಮಗೆ ಅಪ್ಪಂದಿರ ದಿನದ ಶುಭಾಶಯಗಳು ಎಂದು ಶುಭ ಹಾರೈಸಿದ್ದಾರೆ. ಜತೆಗೆ ಇನ್ನೊಂದು ಇನ್‌ಸ್ಟಾಗ್ರಾಂ ಸ್ಟೋರಿ ಹಂಚಿಕೊಂಡಿರುವ ಖುಷಿ, ಬಿ ಸ್ಟ್ರಾಂಗ್‌ ನೌ, ಬಿಕಾಸ್‌ ಥಿಂಗ್ಸ್‌ ವಿಲ್‌ ಗೆಟ್‌ ಬೆಟರ್‌. ಇಟ್‌ ಮೈಟ್‌ ಬಿ ಸ್ಟ್ರೊರ್ಮಿ ನೌ, ಬಟ್‌ ಇಟ್‌ ಕಾಂಟ್‌ ರೈನ್‌ ಫಾರೆವರ್‌’ (ಈಗ ಬಲವಾಗಿರು, ಏಕೆಂದರೆ ಮುಂದೆ ಒಳ್ಳೆಯದು ಕಾದಿದೆ. ಈಗ ಬಿರುಗಾಳಿ ಎದ್ದಿರಬಹುದು, ಆದರೆ ಶಾಶ್ವತವಾಗಿ ಮಳೆ ಬರಲು ಸಾಧ್ಯವಿಲ್ಲ!) ಎಂದು ಬರೆದುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next