Advertisement
ವೈದ್ಯರ ಚೀಟಿ ಹಿಡಿದು ಬರುವ ಇಲ್ಲಿನ ಜನೌಷಧ ಕೇಂದ್ರದಲ್ಲಿ ಅವರು ಕೇಳುವ ಔಷಧ ದೊರೆಯದೇ ವಾಪಸ್ ಮರಳುವ ಸ್ಥಿತಿ ಬಂದೊದಗಿದೆ. ಕೇಂದ್ರಕ್ಕೆ ಸೂಕ್ತ ಸೌಲಭ್ಯ ಒದಗಿಸದ ಕಾರಣ ಜನರಲ್ಲಿ ಭ್ರಮ ನಿರಸನ ಮೂಡಿಸುತ್ತಿದೆ. ತಾಲೂಕು ಕೇಂದ್ರ ಗೌರಿಬಿದನೂರಿನಲ್ಲಿರುವ ಜನೌಷಧಿಕೇಂದ್ರವು ಹಳೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿದ್ದು ಈಗ ಹಳೆಯ ಆಸ್ಪತ್ರೆಯನ್ನು ಕೆಡವಿ ಹೊಸ ಆಸ್ಪತ್ರೆ ನಿರ್ಮಾಣ ಮಾಡಲು ಪ್ರಾರಂಭಿಸಿರುವುದರಿಂದ ವಿದ್ಯುತ್ ಸಂಪರ್ಕವನ್ನು ಕಡಿತವಾಗಿದೆ. ಇನ್ಸುಲಿನ್ ಸೇರಿದಂತೆ ಫ್ರಿಜ್ಡ್ ನಲ್ಲಿ ಸಂಗ್ರಹಿಸುವಂತಹ ಔಷಧಿಗಳನ್ನು ಸಂಗ್ರಹಿಸಲು ವಿದ್ಯುತ್ ಕೊರತೆ ಹಾಗೂ ಈ ಬಗ್ಗೆ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್ ಅವರ ನಿರ್ಲಕ್ಷ್ಯ ಧೋರಣೆ 3-4ತಿಂಗಳಿಂದ ಸಮಸ್ಯೆ ಹಾಗೆಯೇ ಮುಂದುವರಿಯಲು ಕಾರಣವಾಗಿದೆ. ಖಾಸಗಿ ಮೆಡಿಕಲ್‌ಗಳಿಗೆ ವರದಾನ: ಜನೌಷಧಿ ಕೇಂದ್ರಗಳು ಜಾರಿಗೆ ಬಂದಾಗ ಸಾಮಾನ್ಯ ಜನ ಖುಷಿಪಟ್ಟಿದ್ದರು. ಪ್ರತಿ ಔಷಧವೂ ಮಾರುಕಟ್ಟೆ ದರಕ್ಕಿಂತ ಶೇ. 60- 70 ಕಡಿಮೆ ದರದಲ್ಲಿ ಸಿಗಲಿದೆ ಎಂದು ಹಿಗ್ಗಿದ್ದರು. ಆದರೆ ಪದೇ ಪದೆ ಇಲ್ಲಿ ಔಷಧಗಳ ಕೊರತೆ ಉಂಟಾದರೆ ಜನ ಯಥಾಪ್ರಕಾರ ಖಾಸಗಿ ಮೆಡಿಕಲ್‌ಗಳನ್ನೇ ಆಶ್ರಯಿಸಬೇಕಾಗಿದೆ.
Related Articles
Advertisement
ಜನೌಷಧಿ ಮಳಿಗೆಯ ಅವ್ಯವಸ್ಥೆ ಸರಿಪಡಿಸಿ ಬಡವರಿಗೆ ಕಡಿಮೆ ದರದಲ್ಲಿ ಔಷಧಿ ದೊರೆಯುವಂತೆ ಮಾಡಬೇಕೆಂಬ ಬದ್ಧತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗಾಗಲೀ, ಎಂಎಸ್‌ಐಎಲ್ ಅಧಿಕಾರಿಗಳಿಗಾಗಲೀ ಇಲ್ಲದಿರುವುದರಿಂದ ಒಬ್ಬರಮೇಲೊಬ್ಬರು ದೂರುತ್ತಾ ಬೇಬೇಜವಾಬ್ದಾರಿ ತೋರುತ್ತಿದ್ದಾರೆ. -ಕಾದಲವೇಣಿ ಮೋಹನ್ ಕುಮಾರ್, ಕನ್ನಡ ಪರ ಹೋರಾಟಗಾರ