Advertisement

ಫಾಸ್ಟ್‌ ಟ್ಯಾಗ್‌ ಓಕೆ; ಸೌಲಭ್ಯ ಇಲ್ಲ ಏಕೆ?

04:57 PM Jan 10, 2020 | Suhan S |

ಶಿಗ್ಗಾವಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಕೇಂದ್ರ ಸರ್ಕಾರ ಫಾಸ್ಟ್‌ಟ್ಯಾಗ್‌ ಕಡ್ಡಾಯ ಮಾಡುವ ಮೂಲಕ ಟೋಲ್‌ಗ‌ಳಲ್ಲಿ ಸುಂಕ ಸಂಗ್ರಹಣೆಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಲು ವಿಭಿನ್ನ ಯೋಜನೆ ಜಾರಿಗೊಳಿಸಿದೆ. ಆದರೆ, ಅದೇ ಹೆದ್ದಾರಿಗಳಲ್ಲಿಸಂಚರಿಸಲು ರಸ್ತೆಗಳಲ್ಲಿ ಮಾರ್ಗಸೂಚಿ ಫಲಕ, ತಿರುವುಗಳ ಎಚ್ಚರಿಕೆ ನೀಡುವ ಫಲಕ ಹಾಗೂ ಹಂಪ್ಸ್‌ಗಳ ಮಾಹಿತಿ ತಿಳಿಸುವ ಫಲಕ ಅಳವಡಿಸುವಲ್ಲಿ ನಿರ್ಲಕ್ಷ್ಯ ತೋರಿದಂತಿದೆ.

Advertisement

ರಾಷ್ಟ್ರೀಯ ಹೆದ್ದಾರಿ 4ರ ರಸ್ತೆ ವಿಸ್ತರಣೆ ಸಂಬಂಧ ಪಟ್ಟಣ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕಾಮಗಾರಿಗಳು ನಡೆಯುತ್ತಿದ್ದು. ಹೆದ್ದಾರಿಯಲ್ಲಿ ಸಂಚರಿಸುವಾಗಮಾರ್ಗಸೂಚಿ ಫಲಕ ಇರದಿದ್ದರೆ ಸವಾರರಿಗೆ ಹಗಲಿನಲ್ಲಿಯೇ ಕೆಲವೊಮ್ಮೆ ದಾರಿ ತಪ್ಪುವುದು ಸಹಜ, ಇನ್ನೂ ರಾತ್ರಿ ವೇಳೆಯಂತೂ ಅವರ ಕಷ್ಟ ಹೇಳತೀರದು. ಮಾರ್ಗ ಬದಲಾವಣೆ ಮಾರ್ಗಸೂಚಕಗಳು. ರಸ್ತೆ ತಿರುವುಗಳ ಫಲಕಗಳು. ಹಂಪ್ಸ್‌ಗಳು, ಎಡ ತಿರುವು. ಬಲತಿರುವು ಮಾರ್ಗ ಸೂಚಕಗಳನ್ನು ವೈಜ್ಞಾನಿಕವಾಗಿ ಅಳವಡಿಸುವ ಗೋಜಿಗೆ ಹೋಗಿಲ್ಲ.

ಇನ್ನು ರಸ್ತೆ ಕಾಮಗಾರಿಗಳಂತೂ ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ರಾತ್ರಿವೇಳೆ ಮಾರ್ಗ ತಪ್ಪಿ ಹತ್ತಾರು ಕಿಮೀ ಸಾಗಿ ವಾಪಸ್‌ ಬಂದು ಹೈರಾಣಾದ ಉದಾಹರಣೆಗಳು ಸಾಕಷ್ಟಿವೆ. ಇನ್ನು ಈ ರಸ್ತೆಯಲ್ಲಿ ನಿರ್ಮಿಸಿರುವ ಹಲವು ವೇಗನಿಯಂತ್ರಕ ಉಬ್ಬುಗಳು ಅವೈಜ್ಞಾನಿಕವಾಗಿವೆ. ಅವುಗಳ ಇರುವಿಕೆಯ ಸೂಚನಾ ಫಲಕ ಸಹ ಅಳವಡಿಸದ ಪರಿಣಾಮ ವಾಹನದ ವೇಗ ನಿಯಂತ್ರಿಸಲಾಗದೇ ವಾಹನಗಳ ಅಪಘಾತ ಸಾಮಾನ್ಯ ಎನ್ನುವಂತಾಗಿದೆ. ಪಟ್ಟಣದ ಹೊರವಲಯದ ಪ್ರವಾಸಿ ಮಂದಿರದ ಹತ್ತಿರದ ಬಸ್‌ ನಿಲ್ದಾಣದಿಂದ ಬರುವ ವಾಹನಕ್ಕೆ ಕೂಡು ರಸ್ತೆಯ ತಿರುವಿನಲ್ಲಿ ವಾಹನ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ.

ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ವೈಜ್ಞಾನಿಕವಾಗಿ ಉಬ್ಬುಗಳನ್ನು ನಿರ್ಮಿಸಿ, ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಅಪಘಾತಗಳನ್ನು ನಿಯಂತ್ರಿಸಲು ಕ್ರಮ ವಹಿಸಬೇಕು ಎನ್ನವುದು ಸಾರ್ವಜನಿಕರ ಒತ್ತಾಯವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next