Advertisement

ಕಾರವಾರ ನೌಕಾನೆಲೆ ಮೇಲೆ ಡ್ರೋನ್ ಹಾರಾಟ ನಿಷೇಧ: ರಕ್ಷಣಾ ಸಚಿವಾಲಯ ಸೂಚನೆ

09:58 AM Jul 20, 2021 | Team Udayavani |

ಕಾರವಾರ: ಕಾರವಾರ ನೌಕಾನೆಲೆ ಹಾಗೂ ಶಸ್ತ್ರಾಗಾರ ವಲಯ ವಜ್ರ ಕೋಶ ಮೇಲೆ ಡ್ರೋನ್ ಹಾರಾಟ ನಿಷೇಧಿಸಿ ದೇಶದ ರಕ್ಷಣಾ ಸಚಿವಾಲಯ ಸೂಚನೆಯ ಮೇರೆಗೆ ನೋ ಪ್ಲೈಯಿಂಗ್ ಝೋನ್ ಎಂದು ಡೈರೆಕ್ಟರ್ ಜನರಲ್ ಸಿವಿಲ್ ಏವಿಯೇಶನ್ ಆದೇಶ ಹೊರಡಿಸಿದೆ.

Advertisement

ಕಾರವಾರ ನೌಕಾ ನೆಲೆಯ ೩ ಕಿ.ಮೀ .ವ್ಯಾಪ್ತಿಯಲ್ಲಿ ಹಾಗೂ ವಜ್ರಕೋಶದ ಪ್ರದೇಶದ ಮೇಲೆ ಡ್ರೋನ್ ಹಾರಾಟ ಹಾಗೂ ಮಾನವ ರಹಿತ ವಿಮಾನ ಹಾರಿಸುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಹಾಗೇನದರೂ ಖಾಸಗಿಯವರು ಅಥವಾ ಯಾರೇ ಆಗಲಿ ಡ್ರೋನ್ ಹಾರಾಟ ಮಾಡಿದರೆ ಶಿಕ್ಷಾರ್ಹ ಅಪರಾಧವಾಗಿದೆ. ಹಾಗೂ ಕಾನೂನು ಬಾಹಿರ ಹಾರಾಟವನ್ನು ನೇವಿ ಹೊಡೆದುರುಳಿಸಬಹುದಾಗಿದೆ.

ಇದನ್ನೂ ಓದಿ : “ಪೆಗಾಸಸ್‌’ ಸುದ್ದಿ ಹೊರಬಂದ ಸಮಯ ಅರಿಯಿರಿ :ಬೇಹುಗಾರಿಕೆ ಆರೋಪಕ್ಕೆ ಅಮಿತ್‌ ಶಾ ಪ್ರತಿಕ್ರಿಯೆ

ಕರ್ನಾಟಕ ನೇವಲ್ ಬೇಸ್ ಕಮಾಂಡರ್ ಡ್ರೋನ್ ಹಾರಾಟ ನಿಷೇಧ ಸಂಬಂಧ ಸಿವಿಲ್ ಏವಿಯೇಶನ್ ಗೆ ಪತ್ರ ಬರೆದಿತ್ತು. ಇದನ್ನು ಮನ್ನಿಸಿ ರಕ್ಷಣಾ ಸಚಿವಾಲಯ ನೋ ಪ್ಲೇಯಿಂಗ್ ಝೋನ್ ಬಗ್ಗೆ ನೋಟಿಫೀಕೇಶನ್ ಹಾಗೂ ಆದೇಶ ಹೊರಡಿಸಿದೆ. ಅಲ್ಲದೇ ನೌಕಾನೆಲೆ ಇರುವ ಕಾರವಾರದ ೩ ಕಿಮೀ ಪ್ರದೇಶವನ್ನು ನೋ‌ ಪ್ಲೇಯಿಂಗ್ ಝೋನ್ ಎಂದು ಪ್ರಕಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next