Advertisement

ಅನುಮಾನವೇ ಬೇಡ, ಮಂಡ್ಯದಿಂದಲೇ ನಿಖಿಲ್‌ ಸ್ಪರ್ಧೆ

01:44 AM Mar 04, 2019 | Team Udayavani |

ಶಿವಮೊಗ್ಗ: ಮಂಡ್ಯದಲ್ಲಿ ನಡೆಯುತ್ತಿರುವ ರಾಜಕಿಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ದೇವೇಗೌಡರ ಕುಟುಂಬದ ಕುಡಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿದರೆ ಅನುಕೂಲವೆಂದು ಅಲ್ಲಿನವರು ಹೇಳುತ್ತಿದ್ದಾರೆ. ಅಲ್ಲಿನ ಶಾಸಕರ ಜತೆ ಚರ್ಚಿಸಿ, ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಆದರೆ, ಯಾರೇ ಅಭ್ಯರ್ಥಿ ಆದರೂ ಮಂಡ್ಯದಲ್ಲಿ ಜೆಡಿಎಸ್‌ ಸ್ಪರ್ಧೆ ಖಚಿತ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

Advertisement

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ಜೆಡಿಎಸ್‌ನ ಅಭ್ಯರ್ಥಿಯೇ ಕಣದಲ್ಲಿರುತ್ತಾರೆ. ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ. ನಾವು ಹೋರಾಟದ ಕುಟುಂಬದಿಂದ ಬಂದವರು. ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸೋದಾದರೆ ಮಂಡ್ಯದಿಂದಲೇ ಸ್ಪರ್ಧೆ ಮಾಡುತ್ತಾರೆ. ಮೈಸೂರಿನಿಂದ ಅಲ್ಲ. ಯಾರೋ ಹೆದರಿಸುತ್ತಾರೆ ಅಂತ ಹೇಳಿ ನಮ್ಮ ಕುಟುಂಬ ಹೆದರುವುದಿಲ್ಲ. ಮಂಡ್ಯ ಜಿಲ್ಲೆಯ ಜನರ ಭಾವನೆ ಗೊತ್ತಿದೆ. ಮೈಸೂರಿನಲ್ಲೂ ಕೂಡ ನಿಖೀಲ್‌ಗೆ ಅಭಿಮಾನಿಗಳು ಇದ್ದಾರೆ ಎಂದರು.

ಕೆಲವು ವ್ಯಕ್ತಿಗಳು ಮಂಡ್ಯ ಜಿಲ್ಲೆಯ ಅಭಿಮಾನದ ಬಗ್ಗೆ ಮಾತನಾಡುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಋಣ ತೀರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಯಾರು, ಯಾರು, ಎಷ್ಟು ಋಣ ತೀರಿಸಿದ್ದಾರೆ ನೋಡಿದ್ದೇನೆ ಎಂದ ಅವರು, “ಸುಮಲತಾ ಸ್ಪರ್ಧೆ ಬಗ್ಗೆ ನನಗೆ ಗೊತ್ತಿಲ್ಲ. ಅವರು ನಮ್ಮ ಪಕ್ಷದವರೂ ಅಲ್ಲ’ ಎಂದರು

ಮಂಡ್ಯದಲ್ಲಿ ನಾನೇ ಅಭ್ಯರ್ಥಿ: ನಿಖಿಲ್‌
ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಯಾರು ಎನ್ನುವು ದನ್ನು ಪಕ್ಷ ಅಧಿಕೃತವಾಗಿ ಘೋಷಣೆ ಮಾಡದಿದ್ದರೂ ನಾನೇ ಅಭ್ಯರ್ಥಿ ಎಂದು ನಿಖಿಲ್‌ ಕುಮಾರಸ್ವಾಮಿ ಘೋಷಿಸಿ ಕೊಂಡಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಜಿಲ್ಲೆಯ ಜನರ ಭಾವನೆಗಳಿಗೆ ಅನುಗುಣವಾಗಿ ಪಕ್ಷದ ವರಿಷ್ಠರು ನನ್ನ ಹೆಸರನ್ನು ಘೋಷಣೆ ಮಾಡಿದ್ದಾರೆ. ಇದಕ್ಕಾಗಿ ನಾನು ವರಿಷ್ಠರಿಗೆ ಅಭಾರಿಯಾಗಿದ್ದೇನೆ. ಸದ್ಯದಲ್ಲೇ ಜಿಲ್ಲೆಯೊಳಗೆ ಕ್ಷೇತ್ರ ಪ್ರವಾಸ ಮಾಡುತ್ತೇನೆ. ಕಚೇರಿಯನ್ನೂ ತೆರೆಯುತ್ತೇನೆ. ಕಾದು ನೋಡಿ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದಟಛಿ. ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ನಾಯಕರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಇಂದಿನಿಂದ ನನ್ನ ಸೇವೆ ಆರಂಭವಾಗಲಿದೆ’ ಎಂದರು.

“ಸುಮಲತಾ ಅವರ ಸ್ಪರ್ಧೆ ಬಗ್ಗೆ ನಾನು ಏನೂ ಹೇಳುವುದಿಲ್ಲ. ಚುನಾವಣೆಗೆ ಸ್ಪರ್ಧಿಸಲು ಅವರು ಸ್ವತಂತ್ರರು. ಅಂಬರೀಶಣ್ಣನ ಬಗ್ಗೆ ನನಗೆ ಗೌರವವಿದೆ. ಅಭಿ ನನ್ನ ತಮ್ಮ ಇದ್ದಂತೆ. ಸುಮಲತಾ
ಹಾಗೂ ಅಭಿ ಅವರೊಂದಿಗೂ ನಾನು ಮಾತನಾಡುತ್ತೇನೆ’ ಎಂದು ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next