ಬೆಂಗಳೂರು: ವಿಧಾನ ಪರಿಷತ್ ಟಿಕೆಟ್ ಬಗ್ಗೆ ಸಿದ್ದರಾಮಯ್ಯ ಜೊತೆ ನಾನು ಚರ್ಚೆ ಮಾಡಿಲ್ಲ. ನಾನು ಲಾಬಿ ಮಾಡಲ್ಲ. ಅದು ಪಕ್ಷಕ್ಕೆ ಬಿಟ್ಟಿದ್ದು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಸ್.ಆರ್.ಪಾಟೀಲ್ ಹೇಳಿದರು.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಟಿಕೆಟ್ ನೀಡುವ ನನಗೆ ಐಡಿಯವಿಲ್ಲ. ಈ ಬಗ್ಗೆ ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ ನಿರ್ಣಯ ಮಾಡುತ್ತಾರೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ಅವಕಾಶ ಕಲ್ಪಿಸಿದರೆ ಬದ್ದತೆ, ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಅಸಮಾಧಾನಗೊಂಡಿಲ್ಲ. ನಾನೇನು ಈ ನಿಮಗೆ ಹೇಳಿದ್ದೇನಾ? ಪಕ್ಷದ ನಿರ್ಣಯವು ತಾಯಿಗೆ ಸಮಾನವೆಂದು ಗೌರವಿಸಿದ್ದೀನಿ. ಪಕ್ಷ ನನಗೆ ಬಹಳಷ್ಟು ಅವಕಾಶ ಕಲ್ಪಿಸಿದೆ. ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ, ಮಂತ್ರಿಯಾಗಿದ್ದೇನೆ. 24 ವರ್ಷಗಳ ಕಾಲ ಮೇಲ್ಮನೆ ಸದಸ್ಯನಾಗಿದ್ದೇನೆ. ಪಕ್ಷದ ಬಗ್ಗ ಅಪಾರವಾದ ಗೌರವವಿದೆ ಎಂದರು.
ಇದನ್ನೂ ಓದಿ:ಸಿದ್ದರಾಮಯ್ಯ ಜೊತೆ ಕೂತು ಪರಿಷತ್ ಟಿಕೆಟ್ ಶಿಫಾರಸು ಅಂತಿಮಗೊಳಿಸಿದ್ದೇವೆ: ಡಿ.ಕೆ.ಶಿವಕುಮಾರ್
ಸಿದ್ದರಾಮಯ್ಯ ಭೇಟಿಯ ಬಗ್ಗೆ ಮಾತನಾಡಿದ ಎಸ್.ಆರ್.ಪಾಟೀಲ್, ಅವರನ್ನು ಮೊನ್ನೆಯೂ ಭೇಟಿಯಾಗಿದ್ದೆ. ಅವರು ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕರು. ಹಾಗಾಗ ಭೇಟಿ ಆಗುತ್ತಾ ಇರುತ್ತೇನೆ ಎಂದರು.