Advertisement

4 ವರ್ಷದಿಂದ ಶ್ರೀರಂಗಪಟ್ಟಣ ಪ್ರಗತಿ ಕುಂಠಿತ : ಗಿಡದಿಂದ ಮುಚ್ಚಿದೆ ಮಾರ್ಗಸೂಚಿ ಫ‌ಲಕ

02:46 PM Sep 17, 2020 | sudhir |

ಶ್ರೀರಂಗಪಟ್ಟಣ: 100 ವರ್ಷಗಳಿಗೆ ಸಮೀಪಿಸುತ್ತಿರುವ ಶ್ರೀರಂಗಪಟ್ಟಣದ ಪುರಸಭೆಯಲ್ಲಿಕಳೆದ ನಾಲ್ಕು ವರ್ಷದಿಂದ ಅಭಿವೃದ್ಧಿ ಕುಂಠಿತವಾಗಿದೆ. ಪಟ್ಟಣ ವ್ಯಾಪ್ತಿಗೆ ಸೇರಿದ ಗಂಜಾಂನಲ್ಲಿ ಅಭಿವೃದ್ಧಿ ಕಾರ್ಯಗಳಿಗೆಕ್ರಮಕೈಗೊಳ್ಳಲು ನಿರ್ಲಕ್ಷ್ಯವಹಿಸಿದೆ. ಪಟ್ಟಣದಿಂದ ಸಂಪರ್ಕ ಕಲ್ಪಿಸುವ ಗಂಜಾಂ ಮುಖ್ಯರಸ್ತೆಯಲ್ಲಿ ಬರುವ ಪ್ರವಾಸಿಗರಿಗೆ ಹಳ್ಳ, ಗುಂಡಿಗಳು ಸ್ವಾಗತ ಮಾಡುತ್ತವೆ. ಅದೇ ರಸ್ತೆಯಲ್ಲಿ ಮುಂದೆ ಸಾಗಿದರೆ, ರಸ್ತೆಯ ಎರಡು ಬದಿಯಲ್ಲಿ ಬೆಳೆದ ಗಿಡಗಳು ಬೆಳೆದಿದ್ದು, ರಾತ್ರಿ ವೇಳೆ ಸಂಚಾರ ಮಾಡುವ ಸಾರ್ವಜನಿಕರು ಆತಂಕದಲ್ಲಿದ್ದಾರೆ. ರಸ್ತೆ ಬದಿ ಗಿಡಗಳಲ್ಲಿ ಹಾವು, ಚೇಳುಗಳುಕಂಡುಬಂದಿದ್ದು, ರಸ್ತೆಯಲ್ಲಿ ಸಂಚಾರ ಮಾಡುವುದೇ ಅಸಾಧ್ಯವಾಗಿದೆ.

Advertisement

ರಸ್ತೆಯಲ್ಲಲ್ಲೇ ಹಾವು, ಚೇಳುಗಳು: ರಸ್ತೆ ಬದಿಯಲ್ಲಿ ಬೆಳೆದ ಗಿಡಗಳನ್ನು ತೆರವುಗೊಳಿಸಲು, ರಸ್ತೆ ದುರಸ್ತಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೆ, ಸಾರ್ವಜನಿಕ ಪ್ರದೇಶದಲ್ಲಿ ಸ್ವತ್ಛತೆಕಾಪಾಡಬೇಕಾಗಿದೆ. ಹಾಳಾಗಿರುವ ಬೀದಿದೀಪಗಳಿಂದ ರಸ್ತೆಯಲ್ಲಿ ರಾತ್ರಿ ವೇಳೆ ಬೆಳಕು ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ದಾಟುವ ಹಾವು, ಚೇಳುಗಳ ಕಾಟದಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳಾಗಿ ಆಸ್ಪತ್ರೆ ಸೇರಿರುವುದು ಘಟನೆಗಳು ಸಾಕಷ್ಟು ನಡೆದಿವೆ. ರಸ್ತೆಯಲ್ಲಿನ ಗುಂಡಿಗಳಿಗೆ ಮಳೆ ನೀರು ತುಂಬಿ, ರಸ್ತೆ ಕಾಣದೇ ವಾಹನ ಸವಾರರು ತಮ್ಮ ವಾಹನಗಳಲ್ಲಿ ಸಂಚಾರ ಮಾಡುವುದೇ ಕಷ್ಟವಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿಕೇಳಿ ಬರುತ್ತಿವೆ.

ಪಟ್ಟಣ ಪುರಸಭೆಗೆ ಚುನಾಯಿತ ಪ್ರತಿನಿಧಿಗಳು ಇದ್ದರೂ ಸರ್ಕಾರದ ನಿರ್ಲಕ್ಷ್ಯದಿಂದ ಆಡಳಿತ ಮಂಡಳಿ ರಚನೆಯಾಗಿಲ್ಲ. ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆ ವಹಿಸಿದ್ದರೂ ಪುರಸಭೆ ಅಧಿಕಾರಿಗಳು ಯಾವ ಕೆಲಸಗಳನ್ನು ಮಾಡದೆ, ಸಾರ್ವಜನಿಕ ಕೆಲಸಗಳಿಗೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.

ರಸ್ತೆಯಲ್ಲಿಗುಂಡಿಗಳು:
ಕೆಲ ತಿಂಗಳ ಹಿಂದ ರಸ್ತೆ ಅಭಿವೃದ್ಧಿ ಕಾರ್ಯ ನಡೆದಿದ್ದರೂ, ಗಂಜಾಂ ಮುಖ್ಯರಸ್ತೆಯಲ್ಲಿ ಗುಂಡಿಬಿದ್ದಿದೆ. ಗಂಜಾಂ ಬಳಿ ಹೈವೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿಗೆ ಬಾರಿ ವಾಹನಗಳು, ಮಣ್ಣು ತುಂಬಿದ ನೂರಾರು ಲಾರಿಗಳು ನಿತ್ಯ ಸಂಚಾರ ಮಾಡುತ್ತಿವೆ. ಇದರಿಂದ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಇದಕ್ಕೆ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಗುತ್ತಿಗೆದಾರರನ್ನು ಕೇಳುತ್ತಿಲ್ಲ. ಅಲ್ಲದೆ, ಅವರಿಂದ ಗುಂಡಿ ಮುಚ್ಚಿಸಲು ಕೆಲಸವನ್ನೂ ಮಾಡದೇ ಮೌನ ವಹಿಸಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿದೆ.

ಮುರಿಯುವ ಸ್ಥಿತಿಯಲ್ಲಿದೆ ಮರ: ಹಲವು ವರ್ಷದಿಂದ ಗಂಜಾಂ ಮುಖ್ಯರಸ್ತೆಯಲ್ಲಿ ಅಡ್ಡಲಾಗಿರುವ ಬಂಗಾರದೊಡ್ಡಿ ನಾಲೆ ಸೇತುವೆ ಬಳಿ ಒಣಗಿದ್ದ ಆಲದ ಮರ ಮಳೆಗಾದಲ್ಲಿ ಮುರಿದು ಬಿಳುತ್ತಿದ್ದರೂ ಅಪಾಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿಕೊಳ್ಳಲು ಪುರಸಭೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ. ರಸ್ತೆಯಲ್ಲಿ ಸಂಚಾರ ಮಾಡುವ ಸಾರ್ವಜನಿಕರ ಮೇಲೆ ಯಾವ ಅಪಾಯ ಕಾದಿದೆಯೋ ಎಂಬ ಚಿಂತೆ ಸ್ಥಳೀಯರಲ್ಲಿ ಆವರಿಸಿದೆ.

Advertisement

ಗಿಡದಿಂದ ಮುಚ್ಚಿದೆ ಮಾರ್ಗಸೂಚಿ ಫ‌ಲಕ
ಕಾವೇರಿ ಸಂಗಮಕ್ಕೆ ಹೋಗುವ ಗೋಸಾಯಿ ಘಾಟ್‌ ಮಾರ್ಗಸೂಚಿ ಫ‌ಲಕ ಗಿಡಗಳು ಬೆಳೆದು ಮುಚ್ಚಿ ಹೋಗುತ್ತಿದೆ. ಇದರಿಂದ ವಿವಿಧೆಡೆಯಿಂದ ಬರುವ ಪ್ರವಾಸಿಗರು ಗೋಸಾಯಿ ಘಾಟ್‌ ರಸ್ತೆ ಯಾವುದು ಎಂದುಕೇಳುವ ಹಂತಕ್ಕೆ ತಲುಪಿದ್ದರೂ, ಸಂಬಂಧ ಪಟ್ಟ ಪುರಸಭೆ ಅಧಿಕಾರಿಗಳು ಸ್ವತ್ಛತೆ ಮಾಡಿ ಮಾರ್ಗ ಸೂಚಿಸಲುಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

– ಗಂಜಾಂ ಮಂಜು

Advertisement

Udayavani is now on Telegram. Click here to join our channel and stay updated with the latest news.

Next