Advertisement

ಕೋವಿಡ್‌ ನೆಪದಲ್ಲಿ ಅಭಿವೃದ್ಧಿ ಶೂನ್ಯ: ಶಾಸಕ

02:51 PM Aug 26, 2020 | Suhan S |

ಕೋಲಾರ: ರಾಜ್ಯದ ಆಡಳಿತರೂಢ ಬಿಜೆಪಿ ಸರಕಾರದಲ್ಲಿ ಸ್ಥಿರತೆಯ ಕೊರತೆಯಿಂದಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ಹಿನ್ನಡೆಯಾಗಿದೆ, ಕೋವಿಡ್‌ ನೆಪದಲ್ಲಿ ಕನಿಷ್ಠ ಮೂಲಭೂತ  ಸೌಲಭ್ಯಗಳನ್ನು ಜನರಿಗೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಕೆ. ಶ್ರೀನಿವಾಸಗೌಡ ಆರೋಪಿಸಿದರು.

Advertisement

ನಗರದ ತಮ್ಮ ಗೃಹಕಚೇರಿಯಲ್ಲಿ ಇಫ್ಕೋ ವಿಮಾ ಸಂಸ್ಥೆಯಿಂದ ಅನಾರೋಗ್ಯಕ್ಕೆ ಪೀಡಿತರಾದ ಬಡ ಫಲಾನುಭವಿಗಳಿಗೆ ನೆರವಿನ ಚೆಕ್‌ ಗಳನ್ನು ವಿತರಿಸಿ ಮಾತನಾಡಿದ ಅವರು, ಈ ಸರಕಾರದಲ್ಲಿ ಪ್ರತಿಯೊಂದಕ್ಕೂ ಕೋವಿಡ್‌ ನೆಪವಾಗಿದ್ದು, ಸಾರ್ವಜನಿಕರಿಗೆ ಮೂಲಸೌಲಭ್ಯಗಳು ಸಿಗದಂತಾಗಿದೆ, ಈ ವಿಷಯವನ್ನು ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು.

ಅಭಿವೃದ್ಧಿ ಮರೆತಿದೆ: ಅಭಿವೃದ್ಧಿ ಕಾರ್ಯಗಳತ್ತ ಗಮನಹರಿಸಲು ಸರ್ಕಾರ ಮಟ್ಟದಲ್ಲಿ ಬಹಳಷ್ಟು ಪ್ರಯತ್ನಗಳು ಮಾಡಲಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚಿಸಲಾಗಿದೆ. ಸರಕಾರವು ಕೋವಿಡ್‌ ಜೊತೆಗೆ ಅಭಿವೃದ್ಧಿಗೂ ಆದ್ಯತೆ ನೀಡುವುದು ಜವಾಬ್ದಾರಿಯಾಗಿದೆ ಎಂಬುದನ್ನೇ ಮರೆತಿದೆ ಎಂದು ಟೀಕಿಸಿದರು.

ನಾನು ಕಳೆದ ವಿಧಾನಸಭೆ ಚುನಾವಣೆಗಳನ್ನು ಕಂಡಿದ್ದು 4 ಬಾರಿ ಶಾಸಕನಾಗಿದ್ದೇನೆ. ಯಾವುದೇ ಸರ್ಕಾರ ಇದ್ದರೂ ಸಹ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಒಂದೆರಡು ತಿಂಗಳ ಒಳಗಾಗಿ ಆಡಳಿತ ಮಂಡಳಿಗೆ ಚುನಾವಣೆಯನ್ನು ನಡೆಸುತ್ತಿದ್ದರು ಎಂದು ಹೇಳಿದರು.

ಚುನಾವಣೆ ನಡೆಸಿಲ್ಲ:ಅದರೆ, ನಗರಸಭೆ ಚುನಾವಣೆ ಕಳೆದ ನವೆಂಬರ್‌ನಲ್ಲಿ ಆಗಿದ್ದು, ಸುಮಾರು ಒಂದು ವರ್ಷವಾದರೂ ಆಡಳಿತ ಮಂಡಳಿ ರಚನೆಗೆ ಚುನಾವಣೆ ಘೋಷಿಸುವಂತಹ ಇಚ್ಛೆಯೇ ಇಲ್ಲವಾಗಿದೆ. ಇದೇ ರೀತಿ ಪಂಚಾಯತ್‌ ಚುನಾವಣೆಗಳನ್ನು ಸಹ ಮುಂದೂಡುತ್ತಿರುವುದು ಕಂಡರೇ ಆಡಳಿತ ಪಕ್ಷವು ಕುಂಭಕರ್ಣ ನಿದ್ರಾವಸ್ಥೆಯಲ್ಲಿದ್ದು ಎಚ್ಚರಿಸುವ ಕೆಲಸವನ್ನು ಸಾರ್ವಜನಿಕರು ಮಾಡಬೇಕಾಗಿದೆ ಎಂದು ವ್ಯಂಗವಾಡಿದರು.

Advertisement

ಹೊಂದಾಣಿಕೆ ಕೊರತೆ: ಬಿಜೆಪಿ ಬಗ್ಗೆ ಜನರು ಬಹಳಷ್ಟು ನಿರೀಕ್ಷೆಗಳನ್ನು ಹೊತ್ತು ಅಧಿಕಾರಕ್ಕೆ ತಂದರಾದರೂ ಸಹ ನಿರೀಕ್ಷೆಗೆ ತಕ್ಕಂತೆ ಅಡಳಿತ ನಿರ್ವಹಿಸುವಲ್ಲಿ ವಿಫಲವಾಗುತ್ತಿರುವುದು ಕಂಡರೆ ಬಿಜೆಪಿ ಆಡಳಿತದಲ್ಲಿ ಒಡಂಬಡಿಕೆಯ ಕೊರತೆ ಇರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಫ್ಕೋ ಸೇವಾ ಸಂಸ್ಥೆಯಿಂದ ಅನಾರೋಗ್ಯಕ್ಕೆ ಒಳಗಾದ ಆನಂದ್‌, ಬಹದ್ದೂರ್‌ ಕುಮಾರ್‌, ಶ್ರೀನಿವಾಸಗೌಡ, ಗೋಪಾಲಗೌಡ, ಲಕ್ಷ್ಮಯ್ಯ, ಸೀತಾರಾಮ್‌, ನಿಖೀಲ್‌, ಆರ್‌.ಪುರುಷೋತ್ತಮ್‌, ರಾಜಣ್ಣ, ಶೈಲಾವತಿ ಸೇರಿದಂತೆ 10 ಮಂದಿಗೆ 2.25 ಲಕ್ಷ ರೂ. ಚೆಕ್‌ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರಿ ಯೂನಿಯನ್‌ ನಿರ್ದೇಶಕ ಪೆಮ್ಮಶೆಟ್ಟಿಹಳ್ಳಿ ಸುರೇಶ್‌, ನಗರಸಭೆ ಸದಸ್ಯ ರಾಕೇಶ್‌ಗೌಡ, ವಕೀಲ ಹಾರೋಹಳ್ಳಿ ವೆಂಕಟೇಶ್‌, ಮಟ್ನಹಳ್ಳಿ ವೆಂಕಟೇಶ್‌ಗೌಡ, ಕೃಷ್ಣಪ್ಪ ಮುಂತಾದವರು ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next