Advertisement
ಹುಳಿಯಾರು ಹೋಬಳಿಯ ಬರಕನಾಲ್ ಬಳಿಯ ಗೋಪಾಲನಾಯ್ಕನ ತಾಂಡ್ಯ ಮತ್ತು ಖಾನನಾಯಕನ ತಾಂಡ್ಯ, ಉಂಬಳನಾಯಕನ ತಾಂಡ್ಯ ಮತ್ತು ದೊಡ್ಡ ಹಟ್ಟಿಯ ಗ್ರಾಮಗಳು ಯರೇಹಳ್ಳಿಯನ್ನು ಸಂಪರ್ಕಿಸುತ್ತವೆ. ಆದರೆ, ಈ ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳು ಸಾತಂತ್ರ್ಯ ಸಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಡಾಂಬರನ್ನೇ ಕಾಣದೆ ಬಹುತೇಕ ಗುಂಡಿಮಯವಾಗಿವೆ. ಕೆಲವು ಗ್ರಾಮಗಳಿಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಮೂರ್ನಲ್ಕು ಕಿ.ಮೀ ರಸ್ತೆಯುದ್ದಕ್ಕೂ ಹೊಂಡಗಳು ನಿರ್ಮಾಣವಾಗಿವೆ. ದೊಡ್ಡ ದೊಡ್ಡ ಹೊಂಡದ ಜೊತೆಗೆ ಜೆಲ್ಲಿ ಕಲ್ಲುಮೇಲೆದ್ದು ಓಡಾಡಲು ಕಷ್ಟಕರವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Related Articles
Advertisement
ವಿಪರೀತ ಧೂಳಿನಿಂದ ಜನರು ಹೈರಾಣಾಗುವ ಜೊತೆಗೆ ಬೈಕ್ ಸವಾರರು ಜೀವ ಕೈಯಲ್ಲಿಡಿದುಕೊಂಡು ಓಡಾಡಬೇಕಿದೆ. ಜೆಲ್ಲಿ ಕಲ್ಲಿನ ನಡುವೆಯೇಸವಾರರು ಸಂಚರಿಸುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ಕಟ್ಟಿಟ್ಟ ಬುತ್ತಿ ಎನ್ನುವಂತ್ತಾಗಿದೆ.
ಮನವಿ ಮಾಡಿದರೂ ಪ್ರಯೋಜನವಿಲ್ಲ: ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಈ ರಸ್ತೆ ಸೇರಿಸಿದರೆ ಆರೇಳು ಗ್ರಾಮಗಳ ರಸ್ತೆಗಳು
ಡಾಂಬರ್ ಕಾಣುತ್ತವೆ. ಅಲ್ಲದೆ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ರಸ್ತೆ ದುರಸ್ಥಿ ಮಾಡಬಹುದಾದರೂ ಯಾರೊಬ್ಬರೂ ಇತ್ತ ಗಮನ ಹರಿಸಿಲ್ಲ. ಅನೇಕ ಬಾರಿಡಾಂಬರೀಕರಣ ಮಾಡಲು ಅಧಿಕಾರಿಗಳು ಮತ್ತುಜನಪ್ರತಿನಿಧಿಗಳಿಗೆ ಮನವಿ ಮಾಡಿದ್ಧರೂಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರತಿ ಚುನಾವಣೆಗೆ ಮತ ಕೇಳಲು ಬಂದಾಗ ಡಾಂಬರೀಕರಣ ಮಾಡುವ ಭರವಸೆ ನೀಡುತ್ತರಾದರೂ ಗೆದ್ದ ನಂತರ ಇತ್ತ ತಿರುಗಿಯೂ ಸಹನೋಡುವುದಿಲ್ಲ ಎಂಬುದು ಇಲ್ಲಿನ ನಿವಾಸಿಗಳಆರೋಪವಾಗಿವೆ. ಇನ್ನಾದರೂ ಇತ್ತ ಗಮನಹರಿಸಿರಸ್ತೆ ದುರಸ್ಥಿಗೆ ಮುಂದಾಗಲಿ ಎಂಬುದು ಸ್ಥಳೀಯರ ಮನವಿಯಾಗಿದೆ.
ಒಮ್ಮೆಲೆ ಎರಡು ವಾಹನ ಓಡಾಡಲ್ಲ..
ಈ ತಾಂಡ್ಯಗಳಿಂದ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಗುಂಡಿ, ಜಲ್ಲಿ ರಸ್ತೆಯಾಗಿರುವ ಜೊತೆಗೆ ಕಿರಿದಾಗಿವೆ. ಒಮ್ಮೆಲೆ ನಾಲ್ಕು ಚಕ್ರದ ವಾಹನಗಳು ಎದುರು ಬದರು ಬಂದರೆ ಪಾಸ್ ಮಾಡಲು ಹರಸಾಹಸ ಪಡಬೇಕಿದೆ. ಈ ಹಿಂದೆ ಬಾಲದೇವರಹಟ್ಟಿಯಿಂದ ಡಾಂಬರೀಕರಣ ಮಾಡಲು ಮುಂದಾದರಾದರೂ ಅರ್ಧಂಬರ್ಧ ಮಾಡಿ ಸುಮ್ಮನಾದರು. ಹೀಗಾಗಿ ಈ ರಸ್ತೆ ಇನ್ನೂ ಓಡಾಡಲು ಯೋಗ್ಯವಾಗಿಲ್ಲ. ಈ ಭಾಗದ ರಾಜಕೀಯ ಮುಖಂಡರು ಈಗ ಆಗುತ್ತದೆ, ಆಗ ಆಗುತ್ತದೆ ಎನ್ನುತ್ತಾರಾದರೂ ಇದೂವರೆವಿಗೂ ಆಗುವ ಲಕ್ಷಣಗಳು ಕಾಣಸಿಗುತ್ತಿಲ್ಲ ಎಂದು ಬರಕನಹಾಲ್ ತಾಂಡ್ಯಾ ನಿವಾಸಿ ಲಕ್ಕಾನಾಯ್ಕ ಆರೋಪಿಸಿದ್ದಾರೆ.
ಈ ತಾಂಡ್ಯಗಳ ರಸ್ತೆಗಳು ಏಕೆ ಇನ್ನೂ ಡಾಂಬರೀಕರಣ ಆಗಿಲ್ಲವೂ ತಿಳಿಯದಾಗಿದೆ. ಪಿಡ್ಲ್ಯೂಡಿ, ಹೇಮಾವತಿ ಯೋಜನೆಯಿಂದ ಡಾಂಬರ್ ರಸ್ತೆಯನ್ನಾಗಿಪರಿವರ್ತಿಸಬಹುದಾಗಿದೆ. ಈಗ ಯಾವುದಾದರೂ ಗ್ರ್ಯಾಂಟ್ ಬಂದರೆಮೊದಲ ಆದ್ಯತೆ ಮೇರೆಗೆ ಇಲಾಖೆಯಿಂದಾದರೂ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. –ಸೋಮಶೇಖರ್, ಜಿಪಂ, ಎಇಇ, ಚಿಕ್ಕನಾಯಕನಹಳ್ಳಿ