Advertisement

ದೇವಸ್ಥಾನಗಳ ಸ್ವತಂತ್ರೀಕರಣ ವಿಚಾರದಲ್ಲಿ ಇನ್ನೂ ಯಾವುದೇ ನಿರ್ಧಾರ ಇಲ್ಲ : ಶಶಿಕಲಾ ಜೊಲ್ಲೆ

08:38 PM Feb 03, 2022 | Team Udayavani |

ಬೆಂಗಳೂರು: ದೇವಸ್ಥಾನಗಳ ಸ್ವತಂತ್ರೀಕರಣ ವಿಚಾರದಲ್ಲಿ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

Advertisement

ವಿಕಾಸಸೌಧದಲ್ಲಿ ಗುರುವಾರ ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ನಿಯೋಗ ಭೇಟಿ ಮಾಡಿ  ಈ ಬಗ್ಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದಅವರು, ದೇವಾಲಯಗಳ ಖಾಸಗಿಕರಣ ವಿಚಾರದಲ್ಲಿ ಸರ್ಕಾರ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.ಈ ಬಗ್ಗೆ ಸರ್ಕಾರ ಕಾನೂನು ತಜ್ಞರ ಸಲಹೆಯನ್ನು ಪಡೆಯಲಿದೆ.ಜತೆಗೆ ಧಾರ್ಮಿಕ ಮುಖಂಡರೊಂದಿಗೂ ಸಮಾಲೋಚನೆ ನಡೆಸಲಿದೆ ಎಂದು ಹೇಳಿದರು.

ದೇವಸ್ಥಾನಗಳ ಸ್ವತಂತ್ರೀಕರಣ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ಎಲ್ಲರ ಜತೆಗೂ ಸಮಾಲೋಚನೆ ನಡೆಸಿದ ಬಳಿಕ ಮತ್ತೂಮ್ಮೆ  ಮುಖ್ಯಮಂತ್ರಿ ಬಸವರಾಜ ಅವರೊಂದಿಗೂ ಚರ್ಚೆ ನಡೆಸಲಾಗುವುದು. ಆ ಬಳಿಕ ಸೂಕ್ತವಾದ ನಿರ್ಧಾರಕ್ಕೆ ಬರಲಾಗುವುದು ಎಂದು ಹೇಳಿದರು.

ನಿವೃತ್ತಿ ಘೋಷಣೆ ಹಿಂಪಡೆಯಲು ಮನವಿ :

ಸಚಿವರ ಭೇಟಿ ನಂತರ ಮಾತನಾಡಿದ ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಮುಖ್ಯಸ್ಥ ಕೆ.ಎಸ್‌.ದೀಕ್ಷಿತ್‌ , ಅರ್ಚಕರಿಗೆ 60 ವರ್ಷಕ್ಕೆ  ನಿವೃತ್ತಿ ಘೋಷಣೆ ಹಿಂಪಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಲಾಯಿತು.

Advertisement

ಪ್ರತಿ ತಿಂಗಳು ಪೂಜಾ ಸಾಮಗ್ರಿಗಳಿಗೆ ನೀಡುತ್ತಿರುವ ತಸ್ತೀಕ್‌ ಹಣವನ್ನು ಕಳೆದ ನಾಲ್ಕು ವರ್ಷಗಳಿಂದ ಸರ್ಕಾರ ಹೆಚ್ಚಳ ಮಾಡಿಲ್ಲ. ಆ ಹಿನ್ನೆಲೆಯಲ್ಲಿ  ಈಗ ನೀಡಲಾಗುತ್ತಿರುವ ಮೊತ್ತ 4 ಸಾವಿರ ರೂ.ದಿಂದ 5 ಸಾವಿರ ರೂ.ಗೆ ಹೆಚ್ಚಳ ಮಾಡುವಂತೆ ಕೋರಲಾಗಿದೆ.

ದೇವಸ್ಥಾನಗಳು ಸರ್ಕಾರ ಹಿಡಿತದಲ್ಲೆ ಇರಬೇಕು ಎಂಬುವುದು ಅಖೀಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಬಯಕೆ ಆಗಿದೆ. ಈಗಾಗಲೇ ರಾಜ ಮಹಾರಾಜರು ಅರ್ಚಕರಿ ನೀಡಿದ ಭೂಮಿಯ ಸ್ವತ್ತು ಕೂಡ ನಮ್ಮ ಕೈಯಲ್ಲಿ ಇಲ್ಲ. ರಾಜ್ಯದಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಅರ್ಚಕರಿದ್ದು ಅವರ ಹಿತಕಾಪಾಡುವಂತೆ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next