Advertisement

ಭ್ರಷ್ಟರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ

09:56 PM Oct 28, 2022 | Team Udayavani |

ನವದೆಹಲಿ: ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

Advertisement

“ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ’ದ ಥೀಮ್‌ ಅಡಿಯಲ್ಲಿ ಅ.31ರಿಂದ ನ.6ರವರೆಗೆ ನಡೆಯುವ “ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ತಮ್ಮ ಸಂದೇಶದಲ್ಲಿ ಪ್ರಧಾನಿ ಮೋದಿ ಅವರು, “ಭ್ರಷ್ಟಾಚಾರವು ಸಾಮಾನ್ಯ ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಜತೆಗೆ ದೇಶದ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ,’ ಎಂದರು.

“ಕಳೆದ ಎಂಟು ವರ್ಷಗಳಲ್ಲಿ ದೇಶವು ಭ್ರಷ್ಟಾಚಾರ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಪಾಲಿಸುತ್ತಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಬಿಡುವ ಮಾತೇ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ,’ ಎಂದು ಮೋದಿ ಹೇಳಿದರು.

“ಈ ಮೂಲಕ ದೇಶದಲ್ಲಿ ನಂಬಿಕೆ, ವಿಶ್ವಾಸದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಪ್ರತಿಯೊಬ್ಬ ನಿಷ್ಠಾವಂತ ಪ್ರಮಾಣಿಕ ವ್ಯಕ್ತಿಯೂ ತನ್ನ ಬಗ್ಗೆ ಹೆಮ್ಮೆ ಹೊಂದಿದ್ದಾನೆ,’ ಎಂದರು.

10 ವರ್ಷಗಳಲ್ಲಿ ಕಚ್ಚಾ ಉಕ್ಕು ಉತ್ಪಾದನೆ ದುಪ್ಪಟ್ಟಾಗಬೇಕು:
ಪ್ರಸ್ತುತ ಉಕ್ಕು ಉತ್ಪಾದನೆಯಲ್ಲಿ ಭಾರತವು 2ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಕಚ್ಚಾ ಉಕ್ಕು ಉತ್ಪಾದನೆಯು ದುಪ್ಪಟ್ಟಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

ವರ್ಚುವಲ್‌ ಆಗಿ ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ಅರ್ಸೆಲರ್‌ ಮಿತ್ತಲ್‌ ಉಕ್ಕು ಉತ್ಪಾದನೆ ಘಟಕದ ವಿಸ್ತರಣೆಗೆ ಭೂಮಿ ಪೂಜೆ ನೆರವೇರಿಸಿದ ಮಾತನಾಡಿದ ಅವರು, “ಪ್ರಸ್ತುತ ದೇಶದಲ್ಲಿ ವಾರ್ಷಿಕವಾಗಿ 154 ಮಿಲಿಯನ್‌ ಟನ್‌ ಕಚ್ಚಾ ಉಕ್ಕು ಉತ್ಪಾದನೆಯಾಗುತ್ತಿದೆ. ಮುಂದಿನ 9-10 ವರ್ಷಗಳಲ್ಲಿ ಈ ಪ್ರಮಾಣವನ್ನು 300 ಮಿಲಿಯನ್‌ ಟನ್‌ಗೆ ಹೆಚ್ಚಿಸಬೇಕಿದೆ,’ ಎಂದರು.

“ಉನ್ನತ ಗುಣಮಟ್ಟದ ಮಿಶ್ರಲೋಹವನ್ನು ತಯಾರಿಸುವಲ್ಲಿ ಭಾರತದ ಉಕ್ಕಿನ ಉದ್ಯಮವು ಗಳಿಸಿದ ಪರಿಣತಿಯು ದೇಶವು ತನ್ನ ಮೊದಲ ಸ್ವದೇಶಿ ವಿಮಾನವಾಹಕ ನೌಕೆ “ಐಎನ್‌ಎಸ್‌ ವಿಕ್ರಾಂತ್‌’ ಅನ್ನು ದೇಶೀಯ ಸಾಮರ್ಥ್ಯ ಮತ್ತು ತಂತ್ರಜ್ಞಾನದೊಂದಿಗೆ ನಿರ್ಮಿಸಲು ಸಹಾಯ ಮಾಡಿತು,’ ಎಂದು ಮೋದಿ ಶ್ಲಾ ಸಿದರು.

Advertisement

Udayavani is now on Telegram. Click here to join our channel and stay updated with the latest news.

Next