Advertisement

ಕೋಮುವಾದ ಜತೆ ರಾಜಿ ಇಲ್ಲ

07:00 AM Apr 06, 2018 | Team Udayavani |

ಪಟನಾ: ಇತ್ತೀಚೆಗೆ ಬಿಹಾರದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಬಿಜೆಪಿ ಮುಖಂಡ ಅರಿಜಿತ್‌ ಶಾಶ್ವತ್‌ರನ್ನು ಜೈಲಿಗೆ ಕಳುಹಿಸಿರುವ ಬಿಹಾರ ಸಿಎಂ ನಿತೀಶ್‌ ಕುಮಾರ್‌,  ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ಕೋಮುವಾದದೊಂದಿಗೂ ರಾಜಿ ಮಾಡಿಕೊಳ್ಳುತ್ತೇನೆಂದು ನಿರೀಕ್ಷಿಸಬೇಡಿ ಎಂದಿದ್ದಾರೆ. ಬಿಜೆಪಿಯನ್ನು ಉದ್ದೇಶಿಸಿಯೇ ನಿತೀಶ್‌ ಈ ಹೇಳಿಕೆ ನೀಡಿದ್ದಾರೆ.

Advertisement

ಕಳೆದ ತಿಂಗಳು ರಾಮನವಮಿ ವೇಳೆ ನಡೆದ ಹಿಂಸಾ ಚಾರದಲ್ಲಿ ಅರಿಜಿತ್‌ ಪಾತ್ರ ಪ್ರಮುಖವಾದದ್ದು ಎಂದು ಹೇಳಲಾಗಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಮಾತನಾಡಿದ ನಿತೀಶ್‌, ನಾನು ಎಂದೂ ಕಾನೂನು ಮೀರಿಲ್ಲ. ಸಮಾಜದಲ್ಲಿ ಎಲ್ಲ ರೀತಿಯ ಜನರೂ ಇರುತ್ತಾರೆ. ಸಮಸ್ಯೆ ಉಂಟು ಮಾಡುವವರು, ಶಾಂತಿ ಸೌಹಾರ್ದಕ್ಕೆ ಧಕ್ಕೆ ತರುವವರು ಜೈಲಿಗೆ ಹೋಗಲೇ ಬೇಕು. ಅಂಥವರನ್ನು ಬಿಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next