Advertisement

ಸಿಇಒಗಳನ್ನು ಬಂಧನ ಮಾಡುವಂತಿಲ್ಲ: ಕೇಂದ್ರ

11:39 PM Apr 24, 2020 | Sriram |

ಹೊಸದಿಲ್ಲಿ: ಸಂಸ್ಥೆಯೊಂದರ ಸಿಬ್ಬಂದಿಗೆ ಕೋವಿಡ್-19 ಪಾಸಿಟಿವ್‌ ವರದಿ ಬಂದರೆ, ಆ ಸಂಸ್ಥೆಯ ಸಿಇಒ ಅವರನ್ನು ಬಂಧಿಸುವ ಅಥವಾ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಯಾವುದೇ ಷರತ್ತು ಅಥವಾ ಅಧಿನಿಯಮದ ಬಗ್ಗೆ ಏ.15ರಂದು ಹೊರಡಿಸಲಾದ ಕೋವಿಡ್-19 ಮಾರ್ಗಸೂಚಿಯಲ್ಲಿ ಉಲ್ಲೇಖವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

Advertisement

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಗುರುವಾರ ಪತ್ರ ಬರೆದು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಾರ್ಗ ಸೂಚಿಯ ಬಗ್ಗೆ ಯಾವುದೇ ಅನುಮಾನ ಅಥವಾ ಆತಂಕ ಬೇಡ. ಅಧಿಕಾರಿ ಗಳು ಈ ಮಾರ್ಗಸೂಚಿಗಳನ್ನು ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಇದನ್ನು ಬಳಸಿಕೊಂಡು ಕಂಪನಿಗಳ ಆಡಳಿತ ಮಂಡಳಿಯ ಸದಸ್ಯರಿಗೆ ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next