ನವದೆಹಲಿ: ಸರ್ಕಾರಿ ಸ್ಯಾಮ್ಯದ ಬಿಎಸ್ ಎನ್ ಎಲ್ 4G ಉಪಕರಣಗಳ (ಮೊಬೈಲ್) ನವೀಕರಣಕ್ಕೆ ಚೀನಾ ತಂತ್ರಜ್ಞಾನಗಳ ಬಳಕೆಯನ್ನು ನಿಲ್ಲಿಸಿಲು ಟೆಲಿಕಾಂ ಇಲಾಖೆ ನಿರ್ಧರಿಸಿದೆ. ಭದ್ರತಾ ಸಮಸ್ಯೆಗಳಿದ್ದರೆ ಚೀನಾದ ವಸ್ತುಗಳನ್ನು ಬಳಸದಂತೆ ಬಿಎಸ್ ಎನ್ ಎಲ್ ಗೆ ದೃಢವಾಗಿ ಹೇಳಲು ಸಚಿವಾಲಯ ನಿರ್ಧಿರಿಸಿದೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಈಗಾಗಲೇ ಚೀನಾ ಸಂಸ್ಥೆಗಳು ತಯಾರಿಸುವ ವಸ್ತುಗಳು ಅಥವಾ ಉಪಕರಣಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಗ್ಗೆ ಟೆಂಡರ್ ಮರು ಕರೆಯಲು ಇಲಾಖೆ ನಿರ್ಧರಿಸಿದೆ ಖಾಸಗಿಯವರಿಗೆ ನೀಡುವ ಕುರಿತು ಸರ್ಕಾರ ಚಿಂತಿಸುತ್ತಿದೆ.
ಟೆಲಿಕಾಂ ಕಂಪೆನಿಗಳಾದ ಎರ್ ಟೆಲ್, ವೊಡಾಫೋನ್, ಐಡಿಯಾ ತಮ್ಮ ಪ್ರಸ್ತುತ ನೆಟ್ ವರ್ಕ್ ಗಳೊಂದಿಗೆ ಹುವಾಯಿ ಜೊತೆ ಕಾರ್ಯನಿರ್ವಹಿಸುತ್ತಿದೆ. ZTE ಬಿಎಸ್ ಎನ್ ಎಲ್ ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.
ಲಡಾಕ್ ನಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರದಿಂದ ಈ ನಿರ್ಧಾರ ಹೊರಬಿದ್ದಿದೆ. ಸೋಮವಾರ ಸಂಜೆ ಭಾರತದ 20 ಯೋಧರು ಚೈನಾದೊಂದಿಗಿನ ಸಂಘರ್ಷದಲ್ಲಿ ಹುತಾತ್ಮರಾಗಿದ್ದರು. ಸುಮಾರು 5 ದಶಕದ ನಂತರ ಇದೇ ಮೊದಲ ಬಾರಿಗೆ ಗಡಿಯಲ್ಲಿ ಚೀನಾದೊಂದಿಗಿನ ಸಂಘರ್ಷದಲ್ಲಿ ಸಾವು ನೋವುಗಳು ಸಂಭವಿಸಿದ್ದವು.
ಇದರ ಜೊತೆಗೆ ಚೀನಾದ ಕಂಪೆನಿಗಳು ತಯಾರಿಸಿದ ಉಪಕರಣಗಳ ನೆಟ್ ವರ್ಕ್ ಭದ್ರತೆ ಯಾವಾಗಲು ಅನುಮಾನಾಸ್ಪದವಾಗಿರುತ್ತದೆ ಎಂದು ಮಾಧ್ಯಮ ವರದಿ ಮಾಡಿದೆ. 2012 ರಲ್ಲೇ ಅಮೆರಿಕಾದ ಸಮಿತಿಯೊಂದು ಚೀನಾ ಕಂಪೆನಿಗಳು ತಯಾರಿಸಿದ ಟೆಲಿಕಾಂ ನೆಟ್ ವರ್ಕ್ ಗಳಿಂದ ಭದ್ರತೆಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಹುವಾಯಿ , ZTE ಗಳನ್ನು ಅಮೆರಿಕಾದ ಕಂಪೆನಿಗಳು ಬಳಸಿಕೊಳ್ಳಬಾರದೆಂದು ತಿಳಿಸಿದ್ದವು. ಆದರೇ ಈ ಆರೋಪವನ್ನು ಚೀನಾ ಕಂಪೆನಿಗಳು ನಿರಾಕರಿಸಿದ್ದವು.