Advertisement

ಟಿಕೆಟ್‌ ರದ್ದತಿಗೆ ಶುಲ್ಕವಿಲ್ಲ

12:30 AM Feb 23, 2019 | Team Udayavani |

ಹೊಸದಿಲ್ಲಿ: ವಿಮಾನ ಟಿಕೆಟ್‌ ವಿತರಣೆ ವ್ಯವಸ್ಥೆಯಲ್ಲಿರುವಂತೆ ರೈಲ್ವೆಯಲ್ಲೂ ಪಿಎನ್‌ಆರ್‌ಗಳನ್ನು ಲಿಂಕ್‌ ಮಾಡಲು ರೈಲ್ವೆ ಮಂಡಳಿ ನಿರ್ಧರಿಸಿದೆ. ಅಂದರೆ ಒಬ್ಬ ಪ್ರಯಾಣಿಕ ಒಂದಾದ ಮೇಲೆ ಇನ್ನೊಂದು ರೈಲನ್ನೇರಿ ಪ್ರಯಾಣಿಸುವಾಗ ಮೊದಲಿನ ರೈಲು ವಿಳಂಬವಾದರೆ, ಎರಡನೇ ರೈಲಿನ ಟಿಕೆಟ್‌ ರದ್ದುಗೊಳಿಸಬಹುದು. ಅಷ್ಟೇ ಅಲ್ಲ, ಈ ಟಿಕೆಟ್‌ ರದ್ದುಗೊಳಿಸಿದರೆ ಅದಕ್ಕೆ ಪ್ರಯಾಣಿಕರಿಗೆ ರದ್ದತಿ ಶುಲ್ಕ ವಿಧಿಸುವುದಿಲ್ಲ. ಟಿಕೆಟ್‌ನ ಸಂಪೂರ್ಣ ಮೊತ್ತವನ್ನು ವಾಪಸ್‌ ಮಾಡಲಾಗುತ್ತದೆ. ಈ ಹೊಸ ವಿಧಾನ ಏಪ್ರಿಲ್‌ನಿಂದ ಜಾರಿಗೆ ಬರಲಿದೆ. ಎರಡನೇ ರೈಲು ನಿಗದಿತ ರೈಲ್ವೆ ನಿಲ್ದಾಣಕ್ಕೆ ಬರುವುದಕ್ಕೂ 3 ಗಂಟೆ ಮೊದಲು ಪ್ರಯಾಣಿಕರು ಟಿಕೆಟ್‌ ಸಲ್ಲಿಸಿ ದರೆ ಮಾತ್ರ ಈ ಸೌಲಭ್ಯ ಸಿಗುತ್ತದೆ. ಇದು ರೈಲು ತಪ್ಪಿಸಿಕೊಂಡವರಿಗೆ ಅತ್ಯಂತ ಅನುಕೂಲವಾಗಲಿದ್ದು, ಈ ಹಿಂದೆ ಪಿಎನ್‌ಆರ್‌ ಲಿಂಕ್‌ ಮಾಡಿಲ್ಲದೇ ಇದ್ದುದರಿಂದ ರದ್ದತಿಯಲ್ಲಿ ಸಮಸ್ಯೆ ಉಂಟಾಗುತ್ತಿತ್ತು. ವಿಮಾನ ಟಿಕೆಟ್‌ ಬುಕ್‌ ಮಾಡುವಲ್ಲೂ ಇದೇ ವ್ಯವಸ್ಥೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next