Advertisement

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

07:52 PM Apr 23, 2024 | Team Udayavani |

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಬಿಜೆಪಿ ತನ್ನ ಅಭ್ಯರ್ಥಿಗಳ 14ನೇ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದ್ದು, ಅದರಲ್ಲಿ ಲಡಾಖ್‌ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಿಸಿದೆ.

Advertisement

370ನೇ ವಿಧಿ ರದ್ದು ವಿಚಾರವಾಗಿ ಸಂಸತ್ತಿನಲ್ಲಿ ಪ್ರಖರ ಭಾಷಣದ ಮೂಲಕ ಸುದ್ದಿಯಾಗಿದ್ದ ಲಡಾಖ್‌ನ ಹಾಲಿ ಸಂಸದ ಜಮ್ಯಾಂಗ್‌ ತ್ಸೇರಿಂಗ್‌ ನಮ್‌ಗ್ಯಾಲ್‌ ಗೆ ಈ ಬಾರಿ ಟಿಕೆಟ್‌ ಕೈತಪ್ಪಿದೆ.

ನಮ್‌ಗ್ಯಾಲ್‌ ಬದಲು ಲಡಾಖ್‌ ನಿಂದ ತಶಿ ಗ್ಯಾಲ್ಸನ್‌ಗೆ ಬಿಜೆಪಿ ಟಿಕೆಟ್‌ ನೀಡಿದೆ. ಲೇಹ್‌ನಲ್ಲಿರುವ ಲಡಾಖ್‌ ಗುಡ್ಡಗಾಡು ಅಭಿವೃದ್ಧಿ ಸ್ವಾಯತ್ತ ಸಮಿತಿಯ ಅಧ್ಯಕ್ಷರಾಗಿರುವ ಗ್ಯಾಲ್ಸನ್‌ ವಕೀಲರೂ ಆಗಿದ್ದು, ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿದ್ದಾರೆ ಎನ್ನಲಾಗಿದೆ.

ಲೇಹ್‌ನಲ್ಲಿರುವ ಬೌದ್ಧ ಸಮುದಾಯದ ಕೆಲ ವರ್ಗದಿಂದ ಆಡಳಿತ ವಿರೋಧಿ ನಿಲುವು ವ್ಯಕ್ತವಾದ ಹಿನ್ನೆಲೆಯಲ್ಲಿ ಪಕ್ಷ ನಮ್‌ಗ್ಯಾಲ್‌ ರನ್ನು ಕೈ ಬಿಟ್ಟು ಗ್ಯಾಲ್ಸನ್‌ ಗೆ ಮಣೆ ಹಾಕಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next