Advertisement

BJP ರಾಜ್ಯಾಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ: ರೇಣುಕಾಚಾರ್ಯ

06:19 PM Aug 16, 2024 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

Advertisement

ಶುಕ್ರವಾರ (ಆ.16) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ನೇಮಕ ಮಾಡಿದ್ದಾರೆ. ಅಂತಹ ನಾಯಕರ ತೀರ್ಮಾನವನ್ನ ಪ್ರಶ್ನಿಸಲು ಆಗುತ್ತಾ ಎಂದರು.

ಎಲ್ಲ ಪಕ್ಷಗಳಂತೆ ಬಿಜೆಪಿಯಲ್ಲೂ ಸಣ್ಣ ಪುಟ್ಟ ಸಮಸ್ಯೆ ಇವೆ. ಅವುಗಳನ್ನೆಲ್ಲವನ್ನೂ ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ, ಬಗೆಹರಿಸಲಾಗುವುದು. ಪಕ್ಷದ ಎಲ್ಲ ಹಿರಿಯರು ಎಲ್ಲವನ್ನೂ ಬಗೆಹರಿಸುವರು. ಬಿಜೆಪಿ ಹಿಂದಿನಿಂದ ಮಾತ್ರವಲ್ಲ ಈ ಕ್ಷಣಕ್ಕೂ ಶಿಸ್ತಿನ ಪಕ್ಷ ಎಂದು ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಿಜಯೇಂದ್ರ ಅವರು ಗೆದ್ದಿರುವುದು ಕಾಂಗ್ರೆಸ್‌ನ ಭಿಕ್ಷೆ ಯಿಂದ ಎಂಬ ಹೇಳಿಕೆ ನೀಡಿದ್ದಾರೆ. ವಿಜಯೇಂದ್ರ ಅವರಿಗೆ ಯಾವುದೇ ಭಿಕ್ಷೆ ಬೇಕಾಗಿಯೇ ಇಲ್ಲ. ಅವರ ತಂದೆ ಯಡಿ ಯೂರಪ್ಪ ಅವರು ಶಿಕಾರಿಪುರದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ, ಪುರಸಭೆ ಸದಸ್ಯರು, ಅಧ್ಯಕ್ಷರು, ಮುಖ್ಯ ಮಂತ್ರಿಯಾಗಿ ಕೆಲಸ ಮಾಡಿದವರು. ಅದನ್ನು ನೋಡಿಯೇ ಶಿಕಾರಿಪುರದ ಜನರು ವಿಜಯೇಂದ್ರ ಅವರನ್ನ ಆಯ್ಕೆ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡಲೇ ತಮ್ಮ ಹೇಳಿಕೆಯನ್ನ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾ ಯಿಸಿದರು.

ಡಿ.ಕೆ. ಶಿವಕುಮಾರ್ ಯಾವ ಕಾರಣಕ್ಕೆ ಮತ್ತು ಯಾಕೆ ಶಿಕಾರಿಪುರದಲ್ಲಿ ವಿಜಯೇಂದ್ರ ವಿರುದ್ಧ ವೀಕ್ ಕ್ಯಾಂಡಿ ಡೇಟ್ ನಿಲ್ಲಿಸಬೇಕಿತ್ತು ಎಂದು ಪ್ರಶ್ನಿಸಿದರು.

Advertisement

ಯಡಿಯೂರಪ್ಪ ಎಂದರೆ ಬಿಜೆಪಿ. ಬಿಜೆಪಿ ಎಂದರೆ ಯಡಿಯೂರಪ್ಪ. ಯಡಿಯೂರಪ್ಪ ಎಂದಿದ್ದರೂ ಯಡಿಯೂರಪ್ಪ. ಅವರಂತಹ ನಾಯಕ ಮತ್ತೆ ಹುಟ್ಟಿ ಬರುವುದಿಲ್ಲ. ಯಡಿಯೂರಪ್ಪ ಯಡಿಯೂರಪ್ಪನೇ ಎಂದು ತಿಳಿಸಿದರು.

ವಿಜಯಪುರ ಶಾಸಕ ಬಸವಗೌಡ ಯತ್ನಾಳ್ ಇತರರು ಪಕ್ಷದ ಹೈಕಮಾಂಡ್ ಅನುಮತಿ ಕೊಟ್ಟರೆ ಮಾತ್ರವೇ ಪಾದಯಾತ್ರೆ ನಡೆಸುತ್ತೇವೆ ಎಂಬುದಾಗಿ ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸಹ ಇದೇ ಮಾತು ಹೇಳಿದ್ದಾರೆ. ಹೈಕಮಾಂಡ್ ಪಾದಯಾತ್ರೆಗೆ ಅನುಮತಿ ನೀಡಿದರೆ ನಾವು ಸಹ ಭಾಗವಹಿಸುತ್ತೇವೆ ಎಂದು ತಿಳಿಸಿದರು.

ನನ್ನ ರಕ್ತದ ಕಣ ಕಣದಲ್ಲೂ ಬಿಜೆಪಿ, ಹಿಂದುತ್ವ ಇದೆ. ವಿದ್ಯಾರ್ಥಿಯಾಗಿದ್ದಾಗಲೇ ನಾನು ಜೆಪಿ ಚಳವಳಿಯಿಂದ ರಾಜಕೀಯಕ್ಕೆ ಬಂದವನು. ಹಿಂದಿನಿಂದಲೂ ಕಾಂಗ್ರೆಸ್ ವಿರುದ್ಧವೇ ಹೋರಾಟ ಮಾಡಿಕೊಂಡು ಬರುತ್ತಿ ದ್ದೇನೆ. ಹಾಗಾಗಿ ನನಗೆ ಕಾಂಗ್ರೆಸ್ ಸೇರುವ ಅನಿವಾರ್ಯತೆ ಮತ್ತು ಅವಶ್ಯಕತೆಯೇ ಇಲ್ಲ. ನಾನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಭೇಟಿಯಾಗಿದ್ದೇನೋ ನಿಜ. ಹೊನ್ನಾಳಿ-ನ್ಯಾಮತಿ ತಾಲೂಕುಗಳನ್ನು ಬರ ಪೀಡಿತ ತಾಲೂಕು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ, ಹೊನ್ನಾಳಿ ಮುಖಂಡರೊಬ್ಬರ ಕೆಲಸ, ಅಭಿವೃದ್ದಿ ಕಾರ್ಯ ಅನುದಾನಕ್ಕೆ ಒತ್ತಾಯಿಸಿ ಭೇಟಿ ಮಾಡಿದ್ದೆ ಅಷ್ಟೇ. ಅವರೇ ಪಕ್ಷ ಸೇರುತ್ತೀಯಾ… ಎಂದು ತಮಾಷೆ ಮಾಡಿದ್ದರು. ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next