Advertisement

Vote Bank: ಮುಸ್ಲಿಮರನ್ನು ಕಾಂಗ್ರೆಸ್‌ ಈ ವರೆಗೆ ಸಿಎಂ ಮಾಡಿದೆಯೇ?: ವಿಪಕ್ಷ ನಾಯಕ ಛಲವಾದಿ

03:10 AM Sep 06, 2024 | Team Udayavani |

ಬೆಂಗಳೂರು: ಅಲ್ಪಸಂಖ್ಯಾತರ ಪರ ಎಂದು ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಈವರೆಗೆ ಎಷ್ಟು ಮುಸ್ಲಿಮರನ್ನು ಮುಖ್ಯಮಂತ್ರಿಯಾಗಿಸಿದೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದರು.

Advertisement

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯತ್ವ ಅಭಿಯಾನದ ರಾಜ್ಯ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜೋಕರ್‌ಗಳಂತೆ ಇಬ್ಬರನ್ನು ಮುಂದೆ ಇಟ್ಟು ಅವರಿಗೆ ಅಧಿಕಾರ ನೀಡಿದೆ. ಅವರು ಇಡೀ ಮುಸ್ಲಿಂ ಸಮುದಾಯವನ್ನೇ ಗುತ್ತಿಗೆ ಪಡೆದವಂತೆ ಆಡುತ್ತಿದ್ದಾರೆ. ದಲಿತರದ್ದೂ ಅದೇ ಪರಿಸ್ಥಿತಿಯಾಗಿದೆ ಎಂದರು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ, ಅಧಿಕಾರಕ್ಕೆ ಬಂದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಕಳಿಸುತ್ತಾರೆ ಎಂದೆಲ್ಲ ಬಿಂಬಿಸುತ್ತಿದೆ. ಕೇಂದ್ರದಲ್ಲಿ ಬಿಜೆಪಿ 3ನೇ ಬಾರಿ ಅಧಿಕಾರಕ್ಕೆ ಬಂದಿದೆ. ಯಾರನ್ನೂ ಪಾಕಿಸ್ತಾನಕ್ಕೆ ಕಳುಹಿಸಿಲ್ಲ. ಬಿಜೆಪಿ ಯಾರ ವಿರೋಧಿಯೂ ಅಲ್ಲ ದೇಶದ ಸುಭದ್ರತೆ, ಹಿತರಕ್ಷಣೆ ಮುಖ್ಯವೇ ಹೊರತು ಅಧಿಕಾರ ಗಳಿಕೆಯಲ್ಲ. ಹಾಗಾಗಿಯೇ ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿ ರದ್ದು ಪಡಿಸಲಾಗಿದೆ. ಸರ್ವರನ್ನು ಒಳಗೊಳ್ಳುವ ಭಾರತ ನಿರ್ಮಾಣ ನಮ್ಮ ಕನಸು ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ರಾಜ್ಯದಲ್ಲೂ 5 ಲಕ್ಷ ನೋಂದಣಿಯಾದರೆ ದೇಶದಲ್ಲಿ ಒಂದೇ ದಿನದಲ್ಲಿ ಒಂದು ಕೋಟಿಗೂ ಹೆಚ್ಚು ಮಂದಿ ಸದಸ್ಯತ್ವ ಪಡೆದಿದ್ದಾರೆ. ರಾಜ್ಯದಲ್ಲಿ 1.50 ಕೋಟಿ ಸದಸ್ಯತ್ವ ಗುರಿ ಹೊಂದಲಾಗಿದೆ ಎಂದು ಹೇಳಿದರು.

Advertisement

ರಾಜ್ಯ ಸಂಚಾಲಕ ಅಲ್ಲಾಬಕ್ಷ್‌ ತಿಮ್ಮಾಪುರ ಮಾತನಾಡಿ, ಬಿಜೆಪಿಗೆ ದೇಶದಲ್ಲಿ 18 ಕೋಟಿ ಸದಸ್ಯರಿದ್ದಾರೆ. ಸದಸ್ಯತ್ವ ನೋಂದಣಿ ಒಂದು ಪ್ರಜಾಸತ್ತಾತ್ಮಕ ಕ್ರಮ. ಮೋರ್ಚಾಕ್ಕೆ 5 ಲಕ್ಷ ಸದಸ್ಯತ್ವ ಗುರಿ ಇದೆ ಎಂದರು. ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಅಧ್ಯಕ್ಷ ಅನಿಲ್‌ ಥಾಮಸ್‌ ಅಧ್ಯಕ್ಷತೆ ವಹಿಸಿದ್ದರು.

ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅಬ್ದುಲ್‌ ಅಜೀಂ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್‌ ಸಿದ್ದಿಕಿ, ರಾಷ್ಟ್ರೀಯ ಸಂಚಾಲಕ ಜೋಜೋ ಜೋಸೆಫ್, ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯ, ರಾಜ್ಯ ಪ್ರಧಾನ ಕಾರ್ಯದರ್ಶಿ ಇಂದ್ರಕುಮಾರ್‌ ಜೈನ್‌,ರಾಜ್ಯ ಕಾರ್ಯದರ್ಶಿ ಜೆಸೆಲ್‌ ಡಿಸೋಜ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.