ನವದೆಹಲಿ: ಕೋವಿಡ್ ಲಸಿಕೆಯ ಮೂರನೇ ಡೋಸ್ ನೀಡುವ ಬಗ್ಗೆ ಕೇಂದ್ರ ಸರ್ಕಾರ ವೈಜ್ಞಾನಿಕ ಮತ್ತು ಆರೋ ಗ್ಯದ ದೃಷ್ಟಿಯಿಂದ ಯಾವುದೇ ಚಿಂತನೆ ನಡೆಸಿಲ್ಲ. ಸದ್ಯದ ಮಟ್ಟಿಗೆ 2 ಡೋಸ್ ಲಸಿಕೆ ನೀಡುವುದೇ ಆದ್ಯತೆಯಾಗಿರು ತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನವದೆಹಲಿಯಲ್ಲಿ ಗುರುವಾರ ಮಾತನಾಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ್, “ಲಸಿಕೆಯ ಎರಡೂ ಡೋಸ್ ಪಡೆಯುವುದು ಅಗತ್ಯ. ಅದರಲ್ಲಿ ಯಾವುದೇ ಬದ ಲಾವಣೆ ತರಲಾಗದು. ಮೂರನೇ ಡೋಸ್ ಬಗ್ಗೆ ಸರ್ಕಾರ ಚಿಂತನೆ ನಡೆಸಿಲ್ಲ’ ಎಂದಿದ್ದಾರೆ.
ಇನ್ನೆರೆಡು ತಿಂಗಳುಗಳಲ್ಲಿ ಹಬ್ಬಗಳು ಬರುತ್ತಿರುವ ಹಿನ್ನೆಲೆ ಯಲ್ಲಿ ಜನರು ಎಚ್ಚರಿಕೆಯಿಂದಿರಬೇಕು. ಕೇರಳ ಸೇರಿ ದೇಶಾದ್ಯಂತ ಸೋಂಕಿನ ಪ್ರಮಾಣ ಕುಸಿದಿದೆಯಾದರೂ ಅಕ್ಟೋಬರ್ ಮತ್ತು ನವೆಂಬರ್ ನಿರ್ಣಾಯಕ ತಿಂಗಳುಗ ಳಾಗಲಿವೆ. ಲಸಿಕೆ ನೀಡುವಿಕೆ ಹೆಚ್ಚಾಗಬೇಕು ಹಾಗೆಯೇ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳ ಪಾಲನೆಯಾಗಬೇಕು ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 1108 ಹೊಸ ಪ್ರಕರಣ | 809 ಸೋಂಕಿತರು ಗುಣಮುಖ
30 ಸಾವಿರ ಪ್ರಕರಣ:
ದೇಶದಲ್ಲಿ ಗುರುವಾರ 30,570 ಕೋವಿಡ್ ಪ್ರಕರಣಗಳು ದೃಢವಾಗಿವೆ. 431ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 3.42 ಲಕ್ಷಕ್ಕೆ ಇಳಿದಿದೆ.