Advertisement

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

02:23 AM May 04, 2024 | Team Udayavani |

ಹೊಸದಿಲ್ಲಿ: ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ರಾಜಕೀಯ ಪಕ್ಷದ ಪ್ರಮುಖ ನಾಯಕನ ಹೆಸರು ಮತ್ತು ಅದೇ ಹೆಸರಿನ ಮತ್ತೂಬ್ಬ ಹೆಸರಿನ ವ್ಯವಸ್ಥೆ ಸ್ಪರ್ಧಿಸಿದ್ದಾನೆ ಎಂಬ ಕಾರಣಕ್ಕೆ ಆತನನ್ನು ಚುನಾ ವಣೆಗೆ ಸ್ಪರ್ಧಿಸುವುದನ್ನು ನಿರ್ಬಂಧಿಸಲಾಗದು ಎಂದು ಸ್ರುಪೀಂ ಕೋರ್ಟ್‌ ಶುಕ್ರವಾರ ಹೇಳಿದೆ.

Advertisement

ಪ್ರಮುಖ ರಾಜಕೀಯ ನಾಯಕರ ಹೆಸರನ್ನು ಹೊಂದಿರುವ ಅಭ್ಯರ್ಥಿಗಳು ಅದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಮತದಾರರಿಗೆ ಗೊಂದಲವಾಗಲಿದೆ. ಇದು ಹತ್ತಿರದ ಸೋಲುಗಳಿಗೆ ಕಾರಣವಾಗಬ ಹುದು. ಕೂಡಲೇ ಚುನಾವಣ ಆಯೋಗ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಸೂಚಿಸಬೇಕು ಎಂದು ಸಬು ಸ್ಟೀಫ‌ನ್‌ ಎಂಬವರು ಅರ್ಜಿ ಸಲ್ಲಿಸಿ ದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ “ಪೋಷಕರು ಒಂದೇ ರೀತಿಯ ಹೆಸರು ಇಟ್ಟ ಮಾತ್ರಕ್ಕೆ ಅವರನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆಯುವುದು ಹೇಗೆ ಎಂದು ಕೋರ್ಟ್‌ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next