Advertisement

ಶನಿವಾರ ನೋ ಬ್ಯಾಗ್‌ ಡೇ

05:33 PM Aug 04, 2018 | |

ಶಿವಮೊಗ್ಗ: ಶಾಲಾ ಮಕ್ಕಳಿಗೆ ಮಣಭಾರದ ಬ್ಯಾಗ್‌ ಹೊತ್ತುಕೊಂಡು ಶಾಲೆಗೆ ಹೋಗೋದಂದ್ರೆ ದೈಹಿಕ ಹಾಗೂ ಮಾನಸಿಕ ಹಿಂಸೆಯೇ ಸರಿ. ಬ್ಯಾಗ್‌ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಷ್ಟೆಲ್ಲ ವೈಜ್ಞಾನಿಕ ಚರ್ಚೆಗಳಾದರೂ ಅದೆಲ್ಲ ಪುಸ್ತಕದ ಬದನೆಕಾಯಿಯಂತೆ ಇದ್ದವು. ಆದರೆ ಶಿವಮೊಗ್ಗ ಜಿಲ್ಲೆ ಮಕ್ಕಳು ಇನ್ಮುಂದೆ ಶನಿವಾರ ಬಂದ್ರೆ ಕೈ ಬೀಸಿಕೊಂಡು ಶಾಲೆಗೆ ಹೋಗಬಹುದು. ಯಾಕಂದ್ರೆ ಪ್ರತಿ ಶನಿವಾರ ನೋ ಬ್ಯಾಗ್‌ ಡೇ ಆಚರಿಸೋಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಡಿಡಿಪಿಐ ಮಚ್ಛಾದೋ ಬಿಇಒಗಳಿಗೆ ಸೂಚನೆ ಹೊರಡಿಸಿದ್ದಾರೆ. 

Advertisement

ವಾರವೀಡಿ ಪುಸ್ತಕದ ಚೀಲ ಹೊರುವ ಬೆನ್ನಿಗೆ ಶನಿವಾರ ವಿಶ್ರಾಂತಿ ನೀಡಲಾಗಿದ್ದು, ಮಕ್ಕಳಿಗೆ ಪುಸ್ತಕದೊಂದಿಗೆ ಬೋ 
ಧಿಸುವ ವಿಧಾನಕ್ಕೆ ಬದಲಾಗಿ ಪಠ್ಯವನ್ನು ಅಭಿನಯನದ ಮೂಲಕ, ನಾಟಕ ಪ್ರದರ್ಶನದ ಮೂಲಕ ಕಲಿಯಲು ಆದ್ಯತೆ
ನೀಡಲಾಗುತ್ತದೆ. ಜತೆಗೆ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವ ಆಟೋಟಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ.
 
ಶೇ.85ರಷ್ಟು ಮಕ್ಕಳು 7ರಿಂದ 14 ಕೆಜಿ ಭಾರದವರೆಗೂ ಹೊರಬೇಕಾದ ಅನಿವಾರ್ಯತೆ ಇದೆ. ಭಾರವಾದ ಬ್ಯಾಗ್‌
ಗಳನ್ನು ಹೊರುವುದಿಂದ ಮಕ್ಕಳಲ್ಲಿ ಸೊಂಟ ನೋವು, ಕತ್ತು ನೋವು ಹಾಗೂ ಮಾಂಸಖಂಡಗಳ ಸಮಸ್ಯೆ ಎದುರಾಗುತಿತ್ತು. ಮಕ್ಕಳ ಬ್ಯಾಗ್‌ಗಳನ್ನು ಮಕ್ಕಳ ಮನೆ ಬಾಗಿಲಿಗೆ ಬಂದು ತೆಗೆದುಕೊಂಡು ಹೋಗುವಂಥ
ಯೋಜನೆಯೊಂದು ಕೇರಳದಲ್ಲಿದೆ. 

ರಸಪ್ರಶ್ನೆ, ಆಶುಭಾಷಣ, ಅಣಕು ಸಂಸತ್ತು, ಕರಕುಶಲ ವಸ್ತು ತಯಾರಿ, ಕಂಪ್ಯೂಟರ್‌ ಬಳಕೆ, ಪ್ರಯೋಗ ಶಾಲೆ, ವಾಚನಾಲಯ ಬಳಕೆ, ಪದ್ಯ ರಚನೆ, ಏಕಪಾತ್ರಾಭಿನಯ, ಕಿರು ನಾಟಕ, ರಂಗೋಲಿಯಲ್ಲಿ ವಿಜ್ಞಾನ ಚಿತ್ರ ರಚನೆ, ಏರೋಬಿಕ್ಸ್‌, ಗಾದೆಗಳನ್ನು ಹೇಳುವುದು, ಸಂಸ್ಕೃತ ಶ್ಲೋಕ ಹೇಳುವುದು, ವಿದ್ಯಾರ್ಥಿಗಳಿಗೆ ಲಗೋರಿ, ಬುಗುರಿ
ಆಡುವುದು, ಮಳೆ ಆಟ, ಕುಂಟೆಬಿಲ್ಲೆ ಮುಂತಾದ ಸೃಜನಾತ್ಮಕ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿ ಬಳಸಲು ಇಲಾಖೆ ಉದ್ದೇಶಿಸಿದೆ. ಜತೆಗೆ ಹಾಡು, ನೃತ್ಯ, ಸಸಿಗಳ ಪೋಷಣೆ, ಪಶು ಪಕ್ಷಿಗಳ ಆರೈಕೆ, ದವಸಧಾನ್ಯಗಳ ಪ್ರಾತ್ಯಕ್ಷಿಕೆ ಕೂಡ ಇರುತ್ತದೆ. ಇವೆಲ್ಲವೂ ಪ್ರಾದೇಶಿಕ ಲಭ್ಯತೆ ಕುರಿತಂತೆ ಇರಲಿದೆ ಎನ್ನುತ್ತಾರೆ ಶಿಕ್ಷಕರೊಬ್ಬರು.
 
ಬ್ಯಾಗ್‌ ತೆಗೆದುಕೊಂಡು ಹೋಗುವುದೇ ದೊಡ್ಡ ಕೆಲಸದಂತಾಗಿದೆ. ಯಾವ ಶಿಕ್ಷಕರು ಯಾವ ಪಾಠ ತೆಗೆದುಕೊಳ್ಳುತ್ತಾರೆ ಒಮ್ಮೊಮ್ಮೆ ತಿಳಿಯೋದಿಲ್ಲ. ಹಾಗಾಗಿ ದಿನಾಲೂ ಎಲ್ಲ ಪುಸ್ತಕಗಳನ್ನು ಕೊಂಡೊಯ್ಯಬೇಕಿದೆ. ಶನಿವಾರ ಬ್ಯಾಗ್‌ ಇಲ್ಲದಿರುವುದು ಖುಷಿ ತಂದಿದೆ.

 ಮೋನಿಕಾ, ವಿದ್ಯಾರ್ಥಿನಿ, ಶಿವಮೊಗ್ಗ ವಾರದ ಹಿಂದೆ ಎಲ್ಲ ಬಿಇಒಗಳಿಗೆ ಪ್ರತಿ ಶನಿವಾರ ನೋ ಬ್ಯಾಗ್‌ ಡೇ ಆಚರಿಸಲು ತಿಳಿಸಲಾಗಿದೆ. ಹಂತ ಹಂತವಾಗಿ ಎಲ್ಲ ಶಾಲೆಗಳಲ್ಲೂ ಇದು ವಿಸ್ತಾರಗೊಳ್ಳಿದೆ. ಜಿಲ್ಲೆಯ 2203 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳು ಪಠ್ಯೇತರ ಚಟುವಟಿಕೆಗಳ ಮೂಲ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ. ನಾಟಕ,
ಅಭಿನಯ, ಸ್ಪರ್ಧೆಗಳ ಮೂಲಕ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.

 ಮಚ್ಛಾದೋ, ಡಿಡಿಪಿಐ, ಶಿವಮೊಗ್ಗ ಆ.4ರಂದು ಸಾಂಕೇತಿಕವಾಗಿ ಒಂದು ಶಾಲೆಯಲ್ಲಿ ನೋ ಬ್ಯಾಗ್‌ ಡೇ
ಮಾಡಿ ಹಂತ ಹಂತವಾಗಿ ಎಲ್ಲ ಶಾಲೆಗಳಿಗೆ ವಿಸ್ತರಿಸಲಾಗುವುದು. ಯಾವ ವಿಷಯವನ್ನು ಯಾವ ಪಠ್ಯೇತರ ಚಟುವಟಿಕೆ ಮೂಲಕ ಹೇಳಿಕೊಡಬೇಕು ಎಂಬ ಬಗ್ಗೆ ಗೈಡ್‌ಲೈನ್ಸ್‌ ಬಂದಿದೆ. ಅದೇ ರೀತಿ ಚಟುವಟಿಕೆ ಕೈಗೊಳ್ಳಲಾಗುವುದು  ಲಿಂಗಪ್ಪ, ಬಿಇಒ, ಸಾಗರ

Advertisement

„ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next