Advertisement

ಹೆಚ್ಚುತ್ತಿದೆ ಕೋವಿಡ್ ಭೀತಿ: ಪ್ರೇಕ್ಷಕರಿಲ್ಲದೆ ನಡೆಯಲಿದೆ ಇಂಗ್ಲೆಂಡ್ ವಿರುದ್ಧದ ಸರಣಿ!

08:55 AM Mar 16, 2021 | Team Udayavani |

ಅಹಮದಾಬಾದ್: ಕೋವಿಡ್ 19 ಸೋಂಕು ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಕಾರಣ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮುಂದಿನ ಮೂರು ಪಂದ್ಯಗಳು ಪ್ರೇಕ್ಷಕರಿಲ್ಲದೆ ನಡೆಯಲಿದೆ.

Advertisement

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಸಿಸಿಐ ಈ ನಿರ್ಧಾರ ಮಾಡಿದ್ದು, ಇಂಗ್ಲೆಂಡ್ ತಂಡದೊಂದಿಗೂ ಸಮಾಲೋಚಿಸಲಾಗಿದೆ ಎಂದು ವರದಿಗಳು ತಿಳಿಸಲಾಗಿದೆ.

ಇದನ್ನೂ ಓದಿ:ಟಿ20 ನಂ.3: ಆತ್ಮವಿಶ್ವಾಸದಲ್ಲಿ ಟೀಮ್‌ ಇಂಡಿಯಾ : ಇಂದು ತೃತೀಯ ಮುಖಾಮುಖೀ

ಇಂಗ್ಲೆಂಡ್ ಸರಣಿಯ ಮುಂದಿನ ಮೂರು ಟಿ20 ಪಂದ್ಯಗಳು ಮತ್ತು ಪುಣೆಯಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯಗಳು ಕೂಡಾ ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಯಲಿದೆ.

ಅಂತಿಮ ಎರಡು ಟೆಸ್ಟ್ ಪಂದ್ಯಗಳು ಮತ್ತು ಮೊದಲೆರಡು ಟಿ20 ಪಂದ್ಯಗಳಲ್ಲಿ 50% ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಮಾರ್ಚ್ 16, 18 ಮತ್ತು 20ರಂದು ಟಿ20 ಪಂದ್ಯಗಳು ನಡೆಯಲಿದೆ. ಸರಣಿ ಈಗಾಗಲೇ 1-1 ಅಂತರದಿಂದ ಉಭಯ ತಂಡಗಳು ಸಮಬಲ ಸಾಧಿಸಿದೆ.

Advertisement

ಇದನ್ನೂ ಓದಿ: ಏಕದಿನ ಸರಣಿ : ಲಂಕೆಗೆ ವೈಟ್‌ವಾಶ್‌ ಮಾಡಿದ ವೆಸ್ಟ್‌ ಇಂಡೀಸ್‌

ಎ.9ರಂದು ಐಪಿಎಲ್ ಆರಂಭವಾಗಲಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರೆ ಐಪಿಎಲ್ ಕೂಡಾ ಬಹುತೇಕ ಮುಚ್ಚಿದ ಕ್ರೀಡಾಂಗಣದಲ್ಲೇ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next