Advertisement

ಟೆಕ್ಕಿಗಳ ವಿರುದ್ಧ ಕ್ರಮ ಬೇಡ: ಸಚಿವ ರಾಜೀವ್‌ ಚಂದ್ರಶೇಖರ್‌

10:24 PM Sep 24, 2022 | Team Udayavani |

ನವದೆಹಲಿ: ಐಟಿ ಕಂಪನಿಗಳಲ್ಲಿ ಟೆಕ್ಕಿಗಳು ಮೂನ್‌ಲೈಟ್‌ನಲ್ಲಿ ತೊಡಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಕೆಲಸದಿಂದ ತೆಗೆದುಹಾಕಬಾರದು. ಈ ಕ್ರಮ ಸರಿಯಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್‌ ಖಾತೆ ಸಹಾಯಕ ಸಚಿವ ರಾಜೀವ್‌ ಚಂದ್ರಶೇಖರ್‌ ಪ್ರತಿಪಾದಿಸಿದರು.

Advertisement

ನವದೆಹಲಿಯಲ್ಲಿ ಶುಕ್ರವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು “ಹಿಡಿತದಲ್ಲಿ ಇರಿಸಿಕೊಂಡು ಕೆಲಸ ಮಾಡಿಸುವಂಥ ವಾತಾವರಣ ಬದಲಾಗಿದೆ. ಕಂಪನಿಗಳು ಈ ನಿಟ್ಟಿನಲ್ಲಿ ಉದ್ಯೋಗಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತಿಲ್ಲ. ದೇಶದಲ್ಲಿ ಯುವ ಟೆಕಿಗಳ ನಿಲುವಿನಲ್ಲಿ ಬದಲಾವಣೆಯಾಗಿದೆ,’ ಎಂದರು.

“ಜೀವನಪೂರ್ತಿ ಒಂದೇ ಕಂಪನಿಯಲ್ಲಿ ಉದ್ಯೋಗ ಮಾಡುವ ಕಾಲ ಬಹಳ ಹಿಂದೆಯೇ ಬದಲಾಗಿದೆ. ತಮ್ಮ ಸ್ವಂತ ಕೌಶಲದಿಂದ ಹೆಚ್ಚಿನ ಮೊತ್ತವನ್ನು ಗಳಿಸುವ ನಿಟ್ಟಿನಲ್ಲಿ ಯುವಕರು ಆತ್ಮವಿಶ್ವಾಸ ಹೊಂದಿದ್ದಾರೆ. ನಿಮ್ಮ ಸ್ಟಾರ್ಟ್‌ಅಪ್‌ಗ್ಳಲ್ಲಿ ನೀವು ಕೆಲಸ ಮಾಡುವಂತಿಲ್ಲ ಎಂದು ಉದ್ಯೋಗಿಗಳಿಗೆ ಕಂಪನಿಗಳು ಹೇಳುವಂತಿಲ್ಲ,’ ಎಂದು ರಾಜೀವ್‌ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next