ಚಿಕ್ಕಬಳ್ಳಾಪುರ: 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನ ರಾಷ್ಟ್ರೀಯ ಪ್ರತಿಭಾನ್ವೇಷಣಾ ಪರೀಕ್ಷೆಯನ್ನು ಜಿಲ್ಲಾದ್ಯಂತ ಆಯೋಜಿಸಲಾಗಿತ್ತು. ಬೆಳಗ್ಗೆ 10.30ರಿಂದ 12 ಗಂಟೆವರೆಗೆ ಮಾನಸಿಕ ಸಾಮರ್ಥ್ಯದ ಪರೀಕ್ಷೆ, ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 3.30 ಗಂಟೆವರೆಗೆ ನಡೆಸಲಾಯಿತು.
ಎರಡು ಪರೀಕ್ಷೆಗಳಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಗೆ 30 ನಿಮಿಷ ಹೆಚ್ಚುವರಿ ಸಮಯ ಅವಕಾಶ ಕಲ್ಪಿಸಲಾಗಿತ್ತು. ಮಾನಸಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಯಲ್ಲಿ 90 ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿತ್ತು. ಪ್ರತಿ ಪ್ರಶ್ನೆಗೂ ಒಂದು ಅಂಕ ನಿಗದಿಪಡಿಸಲಾಗಿತ್ತು. ಹಾಗೆಯೇ ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆಗೆ 90 ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿತ್ತು. ಇವುಗಳಲ್ಲಿ 35 ಪ್ರಶ್ನೆಗಳು ವಿಜ್ಞಾನ (ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ), 35 ಪ್ರಶ್ನೆಗಳು ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ರಾಜ್ಯಶಾಸ್ತ್ರ , ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ) ಮತ್ತು 20 ಪ್ರಶ್ನೆಗಳು ಗಣಿತ ವಿಷಯಕ್ಕೆ ಸಂಬಂಧಿಸಿದ್ದು ಆಗಿತ್ತು.
24 ವಿದ್ಯಾರ್ಥಿಗಳಿಗೆ ಮಾತ್ರ ಆಸನ ವ್ಯವಸ್ಥೆ: ಪ್ರಶ್ನೆಪತ್ರಿಕೆಯು ಬಹು ಆಯ್ಕೆ ಮಾದರಿ ಆಗಿದ್ದು, ವಿದ್ಯಾರ್ಥಿಗಳು ಒಎಂಆರ್‌ನಲ್ಲಿ ಉತ್ತರಿಸಲು ಶೇಡ್ ಮಾಡಲು ನೀಲಿ ಅಥವಾ ಕಪ್ಪು ಬಣ್ಣದ ಬಾಲ್‌ಪಾಯಿಂಟ್ ಲೇಖನಿ ಮಾತ್ರ ಬಳಸಬೇಕೆಂದು ಸೂಚನೆ ನೀಡಲಾಗಿತ್ತು. ಒಂದು ಕೊಠಡಿಯಲ್ಲಿ ಕೇವಲ 24 ವಿದ್ಯಾರ್ಥಿಗಳು ಮಾತ್ರ ಆಸನ ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಪರೀûಾ ಕೇಂದ್ರದಲ್ಲಿ ಸಿಟಿಂಗ್ ಸ್ಕ್ವಾಡ್ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ಪರೀಕ್ಷೆ ನಡೆಸುವ ಸಂಪೂರ್ಣ ಜವಾಬ್ದಾರಿ ಜಿಲ್ಲಾ ಡಯಟ್‌ಗಳ ಪ್ರಾಂಶುಪಾಲರು, ಪದನಿಮಿತ್ತ ಉಪನಿರ್ದೇಶಕರಿಗೆ (ಅಭಿವೃದ್ಧಿ) ವಹಿಸಲಾಗಿತ್ತು.
266 ವಿದ್ಯಾರ್ಥಿಗಳ ಹೆಸರು ನೋಂದಣಿ: ಶಿಡ್ಲಘಟ್ಟ ನಗರದಲ್ಲಿ ಮೂರು ಪರೀûಾ ಕೇಂದ್ರಗಳನ್ನು ತೆರೆಯಲಾಗಿತ್ತು. ನಗರದ ಸರ್ಕಾರಿ ಪ್ರೌಢಶಾಲೆ, ಶಾರದಾ ಪ್ರೌಢಶಾಲೆ, ವಾಸವಿ ವಿದ್ಯಾಸಂಸ್ಥೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿತ್ತು. ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ 266 ವಿದ್ಯಾರ್ಥಿಗಳು ಹೆಸರನ್ನು ನೋಂದಣಿ ಮಾಡಿದ್ದರು. ಆ ಪೈಕಿ 253 ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿ 13 ಪರೀûಾರ್ಥಿಗಳು ಗೈರು ಹಾಜರಾಗಿದ್ದರು. ಅದೇ ರೀತಿ ಶಾರದಾ ಪರೀಕ್ಷಾ ಕೇಂದ್ರದಲ್ಲಿ 240 ವಿದ್ಯಾರ್ಥಿಗಳು ಹೆಸರನ್ನು ನೋಂದಣಿ ಮಾಡಿದ್ದರು. ಆ ಪೈಕಿ 225 ಪರೀಕ್ಷಾರ್ಥಿಗಳು ಹಾಜರಾಗಿ 15 ಪರೀûಾರ್ಥಿಗಳು ಗೈರು ಆಗಿದ್ದರು. ವಾಸವಿ ಪರೀಕ್ಷಾ ಕೇಂದ್ರದಲ್ಲಿ 249 ವಿದ್ಯಾರ್ಥಿಗಳು ಹೆಸರನ್ನು ನೋಂದಣಿ ಮಾಡಿದ್ದರು. ಆ ಪೈಕಿ 229 ಪರೀಕ್ಷಾರ್ಥಿಗಳು ಹಾಜರಾಗಿ 11 ಮಂದಿ ಗೈರು ಹಾಜರಾಗಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥ್‌ರೆಡ್ಡಿ, ಶಿಕ್ಷಣ ಸಂಯೋಜಕ ಭಾಸ್ಕರ್ ಗೌಡ ಅವರು ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ವ್ಯವಸ್ಥೆಯನ್ನು ಕೈಗೊಂಡಿದ್ದರು.
ಪರೀಕ್ಷಾರ್ಥಿಗಳಿಗೆ 263 ಮಂದಿ ಗೈರು : ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರಥಮ ಪರೀಕ್ಷೆಗೆ 4,615 ವಿದ್ಯಾರ್ಥಿಗಳು ನೋಂದಣಿ ಮಾಡಿ, 4,352 ಪರೀಕ್ಷಾರ್ಥಿಗಳು ಹಾಜರಾಗಿ 263 ಮಂದಿ ಗೈರು ಹಾಜರಾಗಿದ್ದರು.
ಅದೇ ರೀತಿ 2ನೇ ಪರೀಕ್ಷೆಯಲ್ಲಿ 4,615 ವಿದ್ಯಾರ್ಥಿಗಳು ಹೆಸರನ್ನು ನೋಂದಣಿ ಮಾಡಿದ್ದು, ಆ ಪೈಕಿ 4,343 ಮಂದಿ ಪರೀಕ್ಷೆಗೆ ಹಾಜರಾಗಿ 272 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು.