Advertisement

400 ಮಂದಿಗೆ ಉದ್ಯೋಗ

06:38 AM Mar 10, 2019 | |

ಸುಳ್ಯ : ಇಲ್ಲಿನ ನೆಹರೂ ಸ್ಮಾರಕ ಕಾಲೇಜಿನ ಸಹಯೋಗದಲ್ಲಿ ನೆಹರೂ ಸ್ಮಾರಕ ಕಾಲೇಜಿನಲ್ಲಿ ಮಂಗಳೂರಿನ ಕೆರಿಯರ್‌ ಡೆಸ್ಟಿನಿ ಸಂಸ್ಥೆಯ ನೇತೃತ್ವದಲ್ಲಿ ಶಾಸಕ ಅಂಗಾರ ಅವರ ಸಹಕಾರದಲ್ಲಿ ಶನಿವಾರ ಉದ್ಯೋಗ ಮೇಳ ನಡೆಯಿತು.

Advertisement

ಬೆಳಗ್ಗೆ 9ರಿಂದ ಸಂಜೆ 6ರ ತನಕ ನಡೆದ ಉದ್ಯೋಗ ಮೇಳದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಪ್ಲೊಮಾ, ಎಂಜಿನಿಯರಿಂಗ್‌, ಐಟಿಐ ಹಾಗೂ ಪದವಿ ಪಡೆದ ಅಭ್ಯರ್ಥಿಗಳು ಭಾಗವಹಿಸಿ ಸಂದರ್ಶನ ಎದುರಿಸಿದರು. ಬೆಂಗಳೂರು ಮತ್ತು ಮಂಗಳೂರಿನ ಕಂಪೆನಿಗಳು ಪಾಲ್ಗೊಂಡಿದ್ದವು.

ಸ್ವ-ವಿವರ ಮತ್ತು ಭಾವಚಿತ್ರ ದಾಖಲೀಕರಣ ಬಳಿಕ ವಿವಿಧ ಕೊಠಡಿಗಳಲ್ಲಿ ವಿವಿಧ ಕಂಪೆನಿಗಳ ಉದ್ಯೋಗಕಕ್ಕೆ ಸಂದರ್ಶನ ನಡೆಯಿತು.

ಉದ್ಘಾಟನೆ
ಉದ್ಯೋಗ ಮೇಳವನ್ನು ಶಾಸಕ ಎಸ್‌. ಅಂಗಾರ ಉದ್ಘಾಟಿಸಿದರು. ಅಕಾಡೆಮಿ ಆಫ್‌ ಲಿಬರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಂಸಿ ಪ್ರಾಂಶುಪಾಲ ಡಾ| ಗಿರಿಧರ ಗೌಡ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್‌ ಅತಿಥಿಗಳಾಗಿದ್ದರು. ಕೆರಿಯರ್‌ ಡೆಸ್ಟಿನಿ ನಿರ್ದೇಶಕ ಮುರಳಿ ಎಚ್‌., ನಿರ್ದೇಶಕಿ ಜಯಶ್ರೀ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ| ಪೂವಪ್ಪ ಕಣಿಯೂರು ಉಪಸ್ಥಿತರಿದ್ದರು.

ಕಾಲೇಜಿನ ಪ್ಲೇಸ್‌ಮೆಂಟ್‌ ಸೆಲ್‌ ಹಾಗೂ ಕೆರಿಯರ್‌ ಗೈಡೆನ್ಸ್‌ ವಿಭಾಗದ ಮುಖ್ಯಸ್ಥೆ ವಿದ್ಯಾ ವಂದಿಸಿದರು. ಪ್ರೊ| ಸಂಜೀವ ಕುದ್ಪಾಜೆ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next